ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನವಿರೋಧಿ ಕಾಂಗ್ರೆಸ್‌ ಸರ್ಕಾರ’

Last Updated 9 ಜನವರಿ 2014, 5:29 IST
ಅಕ್ಷರ ಗಾತ್ರ

ಸಿಂದಗಿ: ಕಟ್ಟಿಗೆ ಹಚ್ಚಿ ಅಡುಗೆ ಮಾಡುವ ಅಣುಕು ಪ್ರದರ್ಶನ ಮಾಡುವ ಮೂಲಕ ಮಹಿಳೆಯರು ಹಾಗೂ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಅಡುಗೆ ಅನಿಲ  ಮತ್ತು ಆಟೋ ಎಲ್‌ಪಿಜಿ ಬೆಲೆ ಏರಿಕೆ ವಿರೋಧಿಸಿ ಮಿನಿವಿಧಾನಸೌಧ ಎದುರು ಧರಣಿ ಸತ್ಯಾಗ್ರಹ ನಡೆಸಿದ ವಿನೂತನ ಘಟನೆ ಸಿಂದಗಿಯಲ್ಲಿ ಬುಧವಾರ ನಡೆದಿದೆ.

ಧರಣಿ ಸತ್ಯಾಗ್ರಹ ನಡೆಸುವ ಮುನ್ನ ಬಿಜೆಪಿ ಕಾರ್ಯಕರ್ತರು ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಇಲ್ಲಿಯ ಡಾ.ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ದರು.

ಮೆರವಣಿಗೆ ನಗರದ ಪ್ರಮುಖ ಬೀದಿ ಗಳಲ್ಲಿ ಸಾಗಿ ಬಂದು ಬಸವೇಶ್ವರ ವೃತ್ತದ ಮಾರ್ಗವಾಗಿ ಮಿನಿ ವಿಧಾನಸೌಧ ತಲುಪಿತು.
ಮೆರವಣಿಗೆಕಾರರ ಕೈಯಲ್ಲಿ ಖಾಲಿ ಗ್ಯಾಸ್ ಸಿಲೆಂಡರ್ ಮತ್ತು ಅಡುಗೆ ಕಟ್ಟಿಗೆ ಮತ್ತು ಅಡುಗೆ ಮಾಡುವ ಸಾಮಾನುಗಳು ಕಂಡು ಬಂದವು.
ಪ್ರತಿಭಟನಕಾರರು ಮೆರವಣಿಗೆ ಯಲ್ಲಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರೋಧ ಘೋಷಣೆ ಕೂಗುತ್ತಿದ್ದರು.

ಮೆರವಣಿಗೆಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಶೋಕ ಅಲ್ಲಾಪೂರ, ಜಿಲ್ಲಾ ಉಪಾ ಧ್ಯಕ್ಷ ಎಂ.ಎಸ್.ಮಠ, ಚನ್ನಪ್ಪಗೌಡ ಬಿರಾದಾರ, ಮಂಡಲ ಅಧ್ಯಕ್ಷ ಸುರೇಶ ಕಿರಣಗಿ, ಪ್ರಧಾನಕಾರ್ಯದರ್ಶಿ ಸಿದ್ದು ಬುಳ್ಳಾ, ಎಸ್.ಸಿ ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಶ್ರೀಕಾಂತ ಸೋಮಜಾಳ, ಪುರಸಭೆ ಸದಸ್ಯ ಚಂದ್ರಶೇಖರ ಅಮಲಿಹಾಳ ಮತ್ತು ಷಣ್ಮುಖ ಶಾಬಾದಿ, ನವೀನ ಶಹಾಪೂರ, ಯಲ್ಲೂ ಇಂಗಳಗಿ, ಅಪ್ಪು ಶೆಟ್ಟಿ, ಶಿಲ್ಪಾ ಕುದರಗೊಂಡ, ರವಿ ಮಂಗಳೂರ, ರವಿರಾಜ ದೇವರಮನಿ ಗೋಲಗೇರಿ, ಬಸವರಾಜ ತಾವರಗೆರೆ, ನಧಾಪ, ಗುರು ಬಳಗಾನೂರ ಮುಂತಾದವರು ಪಾಲ್ಗೊಂಡಿದ್ದರು.

ನಂತರ ಮಿನಿವಿಧಾನಸೌಧ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ರಮೇಶ ಭೂಸನೂರ, ಎಂ.ಎಸ್.ಮಠ, ಅಶೋಕ ಅಲ್ಲಾಪೂರ, ಸುರೇಶ ಕಿರಣಗಿ, ಸಿದ್ದು ಬುಳ್ಳಾ, ಶ್ರೀಕಾಂತ ಸೋಮಜಾಳ, ಅಪ್ಪು ಶೆಟ್ಟಿ, ನಧಾಪ ಮುಂತಾದವರು ಮಾತನಾಡಿ, ಕೇಂದ್ರ ಸರ್ಕಾರದಿಂದ ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲು ಮಾಡುವ ಕುತಂತ್ರ ನಡೆದಿದೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ಸಂಪೂರ್ಣ ಹಗರಣಗಳ ಸರಮಾಲೆಯನ್ನೇ ಹಾಕಿಕೊಂಡಿದೆ.

ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಭಾರಿ ಪ್ರಮಾಣದಲ್ಲಿ ಭ್ರಷ್ಟಾ ಚಾರ ನಡೆಸುವ ಮೂಲಕ ಭ್ರಷ್ಟ ಸರ್ಕಾರ ಎಂಬುದಾಗಿ ಸಾಬೀತು ಪಡಿಸಿದೆ ಎಂದು ವಿಷಾದಿಸಿದರು.

ಅಡುಗೆ ಮತ್ತು ಆಟೊ ಎಲ್‌ಪಿಜಿ ಬೆಲೆ ಏರಿಕೆಯನ್ನು ಕೂಡಲೇ  ಕಡಿಮೆ ಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT