ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಸೇವೆ ಕಾಂಗ್ರೆಸ್ ಪಕ್ಷದ ಉದ್ದೇಶ’

Last Updated 9 ಡಿಸೆಂಬರ್ 2013, 9:47 IST
ಅಕ್ಷರ ಗಾತ್ರ

ಚಿಟಗುಪ್ಪಾ: ಮಧ್ಯ­ಪ್ರ­ದೇಶ್­,­ರಾಜಸ್ತಾನ, ಛತ್ತೀಸಗಡ, ದೆಹಲಿಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯ ಫಲಿತಾಂಶದಿಂದ, ಕಾಂಗ್ರೆಸ್ ಪಕ್ಷ ಎಚ್ಚರಿಕೆ­ಯಿಂದ ನಡೆಯುವಂತೆ ಸಂದೇಶ ಸಿಕ್ಕಿದೆ ಎಂದು ಸಂಸದ ಎನ್.ಧರ್ಮಸಿಂಗ್ ನುಡಿದರು.

ಭಾನುವಾರ ಹತ್ತಿರದ ಬೇಮಳ­ಖೇಡಾ ಗ್ರಾಮದಲ್ಲಿ ಬೀದರ್ ದಕ್ಷಿಣ ಮತ ಕ್ಷೇತ್ರದ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಫಹೀಮ್ ಪಟೇಲ್ ಅವರ ಅಧಿಕಾರ ಸ್ವೀಕಾರ, ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಸೋಲು ಗೆಲುವಿನ ಚಿಂತೆ ಕಾಡುವುದಿಲ್ಲ, ನಿರಂತ­ರ­­ವಾಗಿ ದೇಶದ ಭದ್ರತೆ, ಪ್ರಗತಿಗಾಗಿ ದುಡಿಯವ ಕಾರ್ಯ ನಮ್ಮದಾಗಿದೆ ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಪಕ್ಷ ನಡೆಸುತ್ತಿರುತ್ತದೆ ಎಂದು ಹೇಳಿದರು.

ಬಸವರಾಜ್ ಸಿಂಧೋಲ್, ತಾ. ಪಂ. ಮಾಜಿ ಅಧ್ಯಕ್ಷ ಮಸ್ತಾನ ನೂರೋದ್ದೀನ್, ಬಸಿರೋದ್ದೀನ್ ಹಾಲ ಹಿಪ್ಪರಗಾ, ಮಾಜಿ ಶಾಸಕ ಗುಂಡಪ್ಪ ವಕೀಲ ಮಾತನಾಡಿದರು. ಕಾಂಗ್ರೆಸ್‌ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಅಧ್ಯಕ್ಷತೆ ವಹಿಸಿದ್ದರು.
ಚಂದ್ರಸೇನ್, ರಾಜಕುಮಾರ ಹಜಾರಿ, ಶಿರೋಮಣಿ, ಬಸವರಾಜ್ ಹೆಡೆ, ಶಮಿ, ನಿಸಾರ್, ವಿಜಯ ಲಕ್ಷ್ಮಿ, ಕಾಶಿನಾಥ ಬುದ್ಧಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರೆಮ್ಮ ಇತರರು ಇದ್ದರು.

ವಿವಿಧ ಪಕ್ಷದ ಹಲವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು, ಪ್ರಭು ಸಾವಳಗಿ ಸ್ವಾಗತಿಸಿದರು. ಎಕ್ಬಾಲ್ ಶರೀಫ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT