ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಸಂಸ್ಕೃತಿ ರಕ್ಷಣೆಗೆ ಮುಂದಾಗಿ’

Last Updated 13 ಡಿಸೆಂಬರ್ 2013, 6:58 IST
ಅಕ್ಷರ ಗಾತ್ರ

ಹೊಳೆನರಸೀಪುರ: ಡಾ.ಎಚ್‌.ಎಲ್‌. ನಾಗೇಗೌಡರು ರಾಮನಗರ ಸಮೀಪ ಸ್ಥಾಪಿಸಿರುವ ಜನಪದ ಲೋಕಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿದರೆ ನಮ್ಮ ಪೂರ್ವಜರ ಜನಪದ ಬದುಕು ಹೇಗಿರುತ್ತಿತ್ತು ಎಂಬುದು ತಿಳಿಯುತ್ತದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಆರ್‌.ಬಿ. ಪುಟ್ಟೇಗೌಡ ನುಡಿದರು.

ತಾಲ್ಲೂಕು ಜನಪದ ಪರಿಷತ್‌ ಇಲ್ಲಿನ ವಾಸವಿ ವಿದ್ಯಾಸಂಸ್ಥೆಯಲ್ಲಿ ಈಚೆಗೆ ಏರ್ಪಡಿಸಿದ್ದ ಜನಪದ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಪದ ಸಾಹಿತ್ಯದಲ್ಲಿ ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಸಾರವಿದೆ ಎಂದರು.

ತಾಲ್ಲೂಕು ಜಾನಪದ ಪರಿಷತ್‌ ಅಧ್ಯಕ್ಷ ಬಾ.ರಾ. ಸುಬ್ಬರಾಯ ಮಾತನಾಡಿ, ಪರಿಷತ್‌ ವತಿಯಿಂದ ಕಳೆದ ಒಂದು ವಷರ್ದಿಂದ 16 ಶಾಲೆಗಳಲ್ಲಿ ಜನಪದ ಗೀತೆ ಕಾರ್ಯಕ್ರಮವನ್ನು ನಡೆಸಿ ಜಾನಪದ ಸೊಗಡನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಿದ್ದೇವೆ. ಜಾನಪದ ಸಂಸ್ಕತಿ ಉಳಿಸಿ ಬೆಳೆಸುವ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಮುಖ್ಯಶಿಕ್ಷಕಿ ನಿರ್ಮಲಾ, ಪರಿಷತ್ತಿನ ಸದಸ್ಯ ವೀರಬಸಪ್ಪ ಇದ್ದರು. ಇಂದಿನ ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಮಧುರಾಜ್‌, ರಮ್ಯಶ್ರೀ, ಅನುಷಾ ಬಹುಮಾನ ಪಡೆದುಕೊಂಡರು.

ಪದಾಧಿಕಾರಿಗಳ ಆಯ್ಕೆ
ಹೊಳೆನರಸೀಪುರ: ತಾಲ್ಲೂಕು ರೈತ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಜವರೇಶ, ಗೌರವಾ­ಧ್ಯಕ್ಷರಾಗಿ ನಂಜುಂಡೇಗೌಡ, ಉಪಾಧ್ಯಕ್ಷ­ರಾಗಿ ಧರ್ಮೇಗೌಡ, ಕಾರ್ಯಾಧ್ಯಕ್ಷರಾಗಿ ದೇವರಾಜಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಎನ್‌. ರಾಮಕೃಷ್ಣೇಗೌಡ, ಸಹ ಕಾರ್ಯದರ್ಶಿಯಾಗಿ ಕೆ.ವಿ. ಕುಮಾರ್‌, ರಮೇಶ್‌, ಖಜಾಂಚಿ­ಯಾಗಿ ಗುಂಜೇವು ರಮೇಶ್‌ ಆಯ್ಕೆ­ಯಾಗಿದ್ದಾರೆ. ಸಂಚಾಲಕರಾಗಿ ಬೈರ, ಪುಲಿಸ್ವಾಮಿ, ಸತ್ಯನಾರಾಯಣ ಅವರನ್ನು ರಾಜ್ಯ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಹಾಗೂ ಜಿಲ್ಲಾ ಉಪಾಧ್ಯಕ್ಷ ಗೋಪಾಲಕೃಷ್ಣ ಅವರ ಸಮ್ಮುಖದಲ್ಲಿ ಸರ್ವಾನು­ಮತದಿಂದ ಆಯ್ಕೆ ಮಾಡಲಾಯಿತು ಎಂದು ನೂತನ ಅಧ್ಯಕ್ಷ ಜವರೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT