ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಎಸ್‌ಎಸ್‌ ಸಮನ್ವಯದ ಭಾವಕವಿ’

Last Updated 1 ಜನವರಿ 2014, 6:12 IST
ಅಕ್ಷರ ಗಾತ್ರ

ವಿಜಾಪುರ: ಜಿ.ಎಸ್. ಶಿವರುದ್ರಪ್ಪ ಒಬ್ಬ ಸಮನ್ವಯ ಭಾವಕವಿ, ಕಾಣದ್ದನ್ನು ಹುಡುಕ ಹುಕುತ್ತಲೇ ಕಾವ್ಯಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದವರು, ರಾಷ್ಟ್ರಕವಿ ಎನಿಸಿ­ಕೊಂಡು ಕನ್ನಡದ ರಾಷ್ಟ್ರಕವಿ ಖ್ಯಾತಿ­ಯನ್ನು ಉಳಿಸಿ ಮುಂದುವೆ­ರಿಸಿಕೊಂಡು ಬಂದ ಅವರ ಸೇವೆ ನಿಜವಾಗಿಯೂ ಮಾದರಿ­ಯ­ವಾಗಿದೆ ಎಂದು ಬಳ್ಳಾರಿ­ ಹಿರಿಯ   ಸಾಹಿತಿ  ಮಹ್ಮದ್‌ ಹನೀಫ್ ಸಾಹೇಬ್  ಹೇಳಿದರು.

ಅವರು ಭೃಂಗಿಮಠ ಕಾನೂನು ಹಾಗೂ ಸಾಮಾಜಿಕ ಕ್ರಿಯಾತ್ಮಕ ವೇದಿಕೆ ವಿಜಾಪುರದ ಶಿವಗಿರಿಯ ಶಿವ­ಸಾನಿಧ್ಯದಲ್ಲಿ  ಪ್ರವಾಸಿಗರಿಗಾಗಿ ಏರ್ಪಡಿ­ಸಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ­ನವರ ನುಡಿನಮನ  ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಪ್ರವಾಸಿಗರಿಗೆ ಜಿ.ಎಸ್.ಎಸ್. ಅಗಲಿದ ಸುದ್ದಿ ಕೇಳಿ ತುಂಬಲಾಗದ ನೋವಾಗಿದೆ.

  ಪ್ರವಾಸಕ್ಕೆ ಬಂದ ಜನರಿಗೆ ಐತಿಹಾಸಿಕ  ಸಾರುವ ಕಾರ್ಯ­ಕ್ರಮಗಳನ್ನು ಸಹ ನಡೆಸುವ ಮೂಲಕ ಕಲೆ, ಸಾಹಿತ್ಯ ಉಳಿಸಿಬೆಳ­ಸಬೇಕು ಜೊತೆಗೆ ಶಿವರುದ್ರಪ್ಪನವರ ಸಾಹಿತ್ಯ ಪ್ರತಿಯೊಬ್ಬರು ಓದಬೇಕು ಎಂದು ಹೇಳಿದರು. ಶಿಕ್ಷಕ ಚಿನ್ಮಾಡ್ಲಿ ಮಾತನಾಡಿ  ಶಿವರುದ್ರಪ್ಪನವರು ಕುವೆಂಪು ಅವರ ಅನುಯಾಯಿ.  ಏಕತೆ ಕಾಪಾಡಲು ಹಂಬಲಿಸಿದವರು ಎಂದರು.

ಭೃಂಗಿಮಠ ಕ್ರಿಯಾತ್ಮಕ ವೇದಿಕೆಯ ಅಧ್ಯಕ್ಷ, ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ ಜಿ.ಎಸ್.ಎಸ್. ಅವರ ಸ್ಮಾರಕವನ್ನು ಸರ್ಕಾರ ನಿರ್ಮಾಣ ಮಾಡಬೇಕು. ಸ್ಮಾರಕ್ಕ ನಿರ್ಮಾಣಕ್ಕೆ ಸರ್ವರೂ ಸಹಕರಿಸಬೇಕಾಗಿದೆ ಎಂದು ಅವರು ಹೇಳಿದರು.

ಬಳ್ಳಾರಿಯ ಎಸ್.ಡಿ ಎಂ ಸಿ ಅಧ್ಯಕ್ಷರು ಹಿರೇಹುಡ್ಲಿಗಿ ಕನ್ನಡ ಶಾಲೆಯ ಸಿ. ಬಸವರಾಜ. ಕೆ ಆನಂದ, ಹಾಲೇಶ್, ಚಿನ್ನ ನರಸಿಂಹಪ್ಪ, ಕೇಶ­ವರೆಡ್ಡಿ, ಧನಾಲು ಎಚ್, ಶಿವಶಂಕರ ಪ್ರಾಸ್ತಾವಿಕವಾಗಿ ಮಾತ­ನಾಡಿದರು. ಗುಲ್ಬರ್ಗ ಜಿಲ್ಲೆಯ ಸಿದ್ದಲಿಂಗಪ್ಪ ಯರಗಲ್, ಬೀದರ ಜಿಲ್ಲೆಯ ಎಸ್.ಎಸ್.ಮಠಪತಿ, ರಾಯಚೂರಿನ ಡಾ. ರಾಜು ಕಂಬಳಿಮಠ, ಚನ್ನ­ಪಟ್ಟಣದ ಲಕ್ಷ್ಮಿ ಈರಣ್ಣ, ಮುಂತಾ­ದವರು ಗೌರವಾನ್ವಿತ ಅತಿಥಿ ಸ್ಥಾನಿಧ್ಯ­ವಹಿಸಿದ್ದರು. ಕಾರ್ಯಕ್ರಮವನ್ನು ಅನೀಲ ರಾಠೋಡ್ ಸ್ವಾಗತಿಸಿ ಕೊನೆಗೆ ವಂದಿಸಿದರು, ಎರಡು ನಿಮಿಷ ಮೌನಾಚರಣೆಯ ಮೂಲಕ ಶಿವರುದ್ರಪ್ಪನವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT