ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿ. 22ರೊಳಗೆ ಸಾರಿಗೆ ಕಚೇರಿ ಉದ್ಘಾಟನೆ’

Last Updated 13 ಡಿಸೆಂಬರ್ 2013, 7:01 IST
ಅಕ್ಷರ ಗಾತ್ರ

ಹುಮನಾಬಾದ್‌: ನನೆಗುದಿಗೆ ಬಿದ್ದ ಇಲ್ಲಿನ ಸಹಾಯಕ ಸಾರಿಗೆ ಅಧಿಕಾರಿ ಕಚೇರಿ ನೂತನ ಕಟ್ಟಡ ಉದ್ಘಾಟನೆ ಡಿ. 22ರೊಳಗೆ ನೆರವೇರಿಸಲಾಗುವುದು ಎಂದು ಶಾಸಕ ರಾಜಶೇಖರ ಬಿ. ಪಾಟೀಲ ತಿಳಿಸಿದರು. ಕಚೇರಿ ಕಟ್ಟಡ ಉದ್ಘಾಟನೆ ನನೆಗುದಿಗೆ ಬಿದ್ದ ಸಂಬಂಧ ಆರೋಪ ಕೇಳಿ ಬಂದ  ಹಿನ್ನೆಲೆಯಲ್ಲಿ  ಗುರುವಾರ ಸ್ಥಳ­ಕ್ಕೆ ಭೇಟಿ ನೀಡಿ­ದರು.

ವಿದ್ಯುತ್‌ ಸಂಪರ್ಕ, ಪ್ರಾ­ಂಗಣ ಸಮತಲ­ಗೊಳಿಸುವುದು ಸ­ೇರಿ­ದಂತೆ ಸಣ್ಣ­ಪುಟ್ಟ ಕೆಲಸಗಳು ಬಾಕಿ ಉಳಿದಿದ್ದು, ಉದ್ಘಾಟನೆಗೂ ಮುನ್ನ ಎಲ್ಲ ಕೆಲಸಗಳು ಪೂರ್ಣಗೊಳಿಸ­ಲಾಗುವುದು. ಉದ್ಘಾ­ಟನೆ ನೆರವೇರಿಸುವ ಸಂಬಂಧ ಸಾರಿಗೆ ಸಚಿವರನ್ನು ಸಂಪ­ರ್ಕಿಸಿದ್ದು, ಡಿ. 20 ಅಥವಾ 21ಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.

ಡಿ. 31ರೊಳಗೆ ರೈಲು ಸಂಚಾರ: ರೈಲು ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಅಕ್ಟೋಬರ್‌ 2ಕ್ಕೆ ನಡೆಯಬೇಕಿತ್ತು. ರೈಲು ಸಂಚಾರಕ್ಕೆ ಹಳಿ ಸಮತಲಗೊಳಿಸುವುದು ಮೊದ­ಲಾದ ತಾಂತ್ರಿಕ ಅಡಚಣೆ ಇರುವುದಾಗಿ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದರು. ಆ ಕಾರಣಕ್ಕಾಗಿ ಉದ್ಘಾ­ಟನಾ ಸಮಾರಂಭ ವಿಳಂಬಗೊಂಡಿತ್ತು.

ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದ್ದು, ಈ ತಿಂಗಳ ಕೊನೆ ವಾರದಲ್ಲಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ. ದಿನಾಂಕ ನಿಗದಿ  ಮಾತ್ರ ಬಾಕಿ ಉಳಿದಿದೆ ಎಂದು ಹೇಳಿದರು. ತಾಲ್ಲೂಕು ಪಂ­ಚಾ­ಯಿತಿ ಕಾರ್ಯ­ನಿರ್ವಾಹಕ ಅಧಿಕಾರಿ ಪಿ.ನಾಗಪ್ಪ, ತಾ­ಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಜ ಗಂಗಶೆಟ್ಟಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕಂಟೆಪ್ಪ ದಾನಾ, ಸಾರಿಗೆ ಅಧಿಕಾರಿ ಗಿರಿಧರ, ಸಿಬ್ಬಂದಿ ಎಕ್ಬಾಲ್‌, ನರಸಿಂಹ, ವೈಜಿನಾಥರಾವ, ಶ್ರೀಮಂತ, ಪೊಲೀಸ್‌ ಅಧಿಕಾರಿಗಳು ಇದ್ದರು. ಕಚೇರಿ ಕಟ್ಟಡ ಉದ್ಘಾಟನೆ­ಯಾಗದ ಕುರಿತು ‘ಪ್ರಜಾವಾಣಿ’ ಯಲ್ಲಿ ಸುದ್ದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT