ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತನಿಖಾಧಿಕಾರಿಗೆ ಶಿಕ್ಷೆ ಕೊಡಿ’

ಅಪರಾಧ ಪ್ರಕರಣ ಖುಲಾಸೆ
Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಪ­ರಾಧ ಪ್ರಕರಣದಲ್ಲಿ ಆರೋಪಿಗಳು ಖುಲಾಸೆ­ಗೊಳ್ಳು­ವು­ದನ್ನು ನ್ಯಾಯದಾನ ವ್ಯವಸ್ಥೆ­ಯ ವೈಫಲ್ಯ ಎಂದು ಅರ್ಥ ಮಾಡಿ­­ಕೊಳ್ಳ­ಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳ­­­ವಾರ ಹೇಳಿದೆ. ಇಂತಹ ಪ್ರಕರಣ­ಗಳಲ್ಲಿ ತನಿಖಾಧಿ­ಕಾರಿ­ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ­ಗಳಿಗೆ ನಿರ್ದೇಶನ ನೀಡಿದೆ.

ಕಳಪೆ ತನಿಖೆಯಿಂದಾಗಿ ಆರೋಪಿ­ಗಳು ಖುಲಾಸೆಗೊಳ್ಳುವ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ನ್ಯಾಯ­ಮೂರ್ತಿ­­ಗಳಾದ ಸಿ.ಕೆ. ಪ್ರಸಾದ್‌ ಮತ್ತು ಜೆ.ಎಸ್‌. ಖೇಹರ್‌ ಅವರನ್ನೊಳಗೊಂಡ ಪೀಠ ಕಳವಳ ವ್ಯಕ್ತಪಡಿಸಿದೆ.

ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿ­ಕೊಳ್ಳ­ದ ರೀತಿಯಲ್ಲಿ ತನಿಖೆ ನಡೆಸು­ವು­ದಕ್ಕೆ 6 ತಿಂಗಳೊಳಗೆ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ರಾಜ್ಯಗ­ಳಿಗೆ ಪೀಠ ನಿರ್ದೇಶನ ನೀಡಿದೆ.

ಆರೋಪಿಗಳು ಖುಲಾಸೆಗೊಳ್ಳುವ  ಪ್ರತಿ­­ಯೊಂದು ಪ್ರಕರಣವನ್ನೂ  ಪರಿಶೀಲನೆಗೆ ಒಳಪಡಿಸಬೇಕು. ಖುಲಾಸೆಗೆ ಕಾರ­ಣ­­­ವಾದ ತನಿಖಾಧಿಕಾರಿ ಅಥವಾ  ವಿಚಾ­ರಣಾ­­­ಧಿ­­ಕಾರಿಗಳನ್ನು ಗುರುತಿಸ ಬೇಕು. ತಪ್ಪು ಮಾಡಿರುವ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರ್ಟ್‌ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT