ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತುಳು ಭಾಷೆಗೆ ಮಾನ್ಯತೆ ಅಗತ್ಯ’

Last Updated 16 ಡಿಸೆಂಬರ್ 2013, 6:19 IST
ಅಕ್ಷರ ಗಾತ್ರ

ವಿಟ್ಲ: ಕರಾವಳಿಯ ಶಾಲೆಗಳಲ್ಲಿ ನಡೆಯುತ್ತಿರುವ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ತುಳು ಭಾಷೆಗೂ ಮಾನ್ಯತೆಯಿರಬೇಕು. ಪಾಶ್ಚಾತ್ಯ ಭಾಷೆ­ಯಿರಲಿ, ಆದರೆ  ಪಾಶ್ಚಾತ್ಯ ಸಂಸ್ಕೃತಿ ಬೇಡ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಗುರುದೇವದತ್ತ ಸಂಸ್ಥಾನದ ತುಳು ಕೂಟೊ, ಬೊಳ್ಳಿ ಪರ್ಬ ಕೂಟ, ಕರೋಪಾಡಿ- ಕನ್ಯಾನ ಗ್ರಾಮ ಸಮಿತಿಗಳ ಸಹಯೋಗದಲ್ಲಿ ಭಾನುವಾರ ಒಡಿಯೂರು ಗುರುದೇವ ಜ್ಞಾನ ಮಂದಿರದಲ್ಲಿ ತುಳು ನಡಕೆದೈಸಿರೊ ಕಾರ್ಯಕ್ರಮವನ್ನು ಉದ್ಘಾ­ಟಿಸಿ, ಆಶೀರ್ವಚನ ನೀಡಿದರು

 ತುಳುವರು ಹೃದಯ ವೈಶಾಲ್ಯತೆ ಉಳ್ಳವರು. ತುಳುವರೆಲ್ಲರೂ ಒಗ್ಗಟ್ಟಾಗಿ ಇಲ್ಲಿನ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡಬೇಕು. ಆಂಗ್ಲ ಭಾಷೆ ದೇಹನಿಷ್ಠ ಸಂಸ್ಕೃತಿಗೆ ಸಂಬಂಧಿಸಿದ್ದು. ನಮ್ಮತನಕ್ಕೆ ಅವಶ್ಯವಿರುವ ಆತ್ಮನಿಷ್ಠ ಸಂಸ್ಕೃತಿಯನ್ನು ನೆಚ್ಚಿಕೊಂಡು ಬಾಳಬೇಕು. ಎಂದರು.

ಕಣಿಯೂರು ಚಾಮುಂಡೇಶ್ವರೀ ಕ್ಷೇತ್ರದ ಮಹಾ­ಬಲ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಶಬ್ದ­ಗಳು ಅರ್ಥ ಕಳೆದುಕೊಳ್ಳಬಹುದು. ಭಾಷೆ, ಸಂಸ್ಕೃತಿ ಅಳಿಯಲಾರದು. ಅದನ್ನು ಭಾವನಾತ್ಮಕ­ವಾಗಿ ಉಳಿ­ಸು­ವುದು ಇಂದಿನ ಕರ್ತವ್ಯ­ವಾಗಿದೆ. ಒಡಿಯೂರು ಶ್ರೀಗಳು ಸಂಕಲ್ಪಿಸಿದ ತುಳು ಭಾಷೆಯ ಉಳಿವಿನ ಹೋರಾಟ­ಕ್ಕೆ ತುಳುವರೆಲ್ಲರೂ ಒಟ್ಟಾಗ­ಬೇಕು ಎಂದರು.

ಸಾಧ್ವಿ ಮಾತಾನಂದಮಯೀ, ಕನ್ಯಾನ ಗ್ರಾ.ಪಂ.­ಅಧ್ಯಕ್ಷ ಕೆ.ಪಿ.ರಘುರಾಮ ಶೆಟ್ಟಿ, ಬಸ್ರೂರು ಶಾರದಾ ಕಾಲೇಜಿನ ಪ್ರಾಂಶುಪಾಲೆ ಚಂದ್ರಪ್ರಭಾ ಹೆಗ್ಡೆ, ಮೈಸೂರಿನ ವಕೀಲ ಒ.ಶ್ಯಾಮ ಭಟ್ ಮಾತನಾಡಿ­ದರು. ಒಡಿಯೂರಿನ  ತುಳು ಕೂಟದ ಅಧ್ಯಕ್ಷ ಮಲಾರು ಜಯರಾಮ ರೈ, ಕನ್ಯಾನ ಗ್ರಾಮ ಬೊಳ್ಳಿ ಪರ್ಬ ಸಮಿತಿ ಅಧ್ಯಕ್ಷ ರಘುನಾಥ ರೈ ಅರ್ಪಿಣಿ, ಕೇಂದ್ರ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ ಒಡಿ­ಯೂರು ಮೊದಲಾದವರು ಉಪಸ್ಥಿತರಿದ್ದರು.

ಕರೋಪಾಡಿ ಗ್ರಾಮ ಬೊಳ್ಳಿ ಪರ್ಬ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು ಸ್ವಾಗತಿಸಿದರು. ಮಾತೇಶ್ ಭಂಡಾರಿ ವಂದಿಸಿದರು. ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಶಿಕ್ಷಕ ಜಯ­ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT