ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದನಿ’ಯಾಗುವವರು ಯಾರು?

Last Updated 3 ಡಿಸೆಂಬರ್ 2013, 11:06 IST
ಅಕ್ಷರ ಗಾತ್ರ

ಹುಣಸಗಿ: ನಿತ್ಯ ಜೀವನದಲ್ಲಿ ಅಂಗವಿಕಲರು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಆ ಸಮಸ್ಯೆಗಳ ಪರಹಾರಕ್ಕಾಗಿ ಸಂಘ–ಸಂಸ್ಥೆಗಳು, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಇದರಿಂದಾಗಿ ನೋವಿನೊಂದಿಗೆ ಕಾಲ ಕಳೆಯುತ್ತಿರುವ ಅಂಗವಿಕಲರು ಸಾಕಷ್ಟು ಜನರಿದ್ದಾರೆ..

–ಇದು ಅಂಗವಿಕಲರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಂಗನಗೌಡ ಧನರಡ್ಡಿ  ಅವರ ಅಂತರಾಳದ ಮಾತು. ಅವರೊಂದಿಗಿನ ಮಾತುಕತೆ ಇಲ್ಲಿದೆ. ಯಾದಗಿರಿ ಜಿಲ್ಲೆಯಲ್ಲಿ ವಿವಿಧ ಬಗೆಯ 23,253 ಅಂಗವಿಕಲರಿದ್ದಾರೆ. ಆದರೆ, ಇವರಿಗೆ ಸರ್ಕಾರದ ಸೌಲಭ್ಯಗಳು ಮಾತ್ರ ಸರಿಯಾಗಿ ತಲುಪುತ್ತಿಲ್ಲ. ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶೇ 3ರಷ್ಟು ಅನುದಾನವನ್ನು ಕಡ್ಡಾಯವಾಗಿ ನೀಡಬೇಕು ಎಂಬ ಆದೇಶವಿದ್ದರೂ ಸಮರ್ಪಕವಾಗಿ ಜಾರಿಯಾಗಿಲ್ಲ. ಎಂಬುದು ಅಂಗವಿಕಲರ ಅಳಲು. ವಿವಿಧ ಯೋಜನೆಗಳ ಅಡಿಯಲ್ಲಿ ಬುದ್ಧಿಮಾಂಧ್ಯ, ಶ್ರವಣದೋಷ ಮತ್ತು ಕೃತಕ ಅಂಗಾಗ ಜೋಡಣೆ ಕಾರ್ಯಗಳು ತೃಪ್ತಿಕರವಾಗಿ ನಡೆಯುತ್ತಿಲ್ಲ.

ಅಂಗವಿಲಕರ ಕಲ್ಯಾಣಕ್ಕಾಗಿ ಯಾದಗಿರಿ ಜಿಲ್ಲೆಯಲ್ಲಿ ಅಂಧ, ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆ ಪ್ರಾರಂಭಿಸಬೇಕಿದೆ. ಶಾಸಕರು, ಸಂಸದರು ಮುಂದೆ ಬಂದು ತಮ್ಮ ಅನುದಾನದಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಇನ್ನು ಮಾಸಾಶನವಂತೂ ಮಧ್ಯವರ್ತಿಗಳ ಹಾವಳಿಯಿಂದ ನಲುಗಿ ಹೋಗಿದೆ. ಅಂಗವಿಕಲ ವಿದ್ಯಾವಂತ ಮಕ್ಕಳಿಗೆ ಪ್ರೋತ್ಸಹ ನೀಡಲು ವರ್ಷಕ್ಕೊಮ್ಮೆ ಅಂಗವಿಕಲರ ಉದ್ಯೋಗ ಮೇಳವನ್ನು ಕಡ್ಡಾಯವಾಗಿ ನಡೆಸಿದರೆ ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ.
ಅಂಗವಿಕಲರಲ್ಲಿ ಧೈರ್ಯ ತುಂಬಲು ಅಂಗವಿಕಲರನ್ನು ಗುರುತಿಸಿ, ಅವರ ಸಾಧನೆಯ ಕುರಿತು ಇತರರಿಗೂ ಮಾದರಿಯಾಗುವಂತೆ ತೋರಿಸುವ ಕಾರ್ಯ ನಡೆಯಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT