ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವದಾಸಿಯರ ಮಾಸಾಶನ ಹೆಚ್ಚಸಿ’

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವದಾಸಿ ಮಹಿಳೆ­ಯರಿಗೆ ಉತ್ತಮ ಜೀವನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ  ₨ 1 ಸಾವಿರ ಮಾಸಾಶನ ನೀಡುವುದು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಬಳ್ಳಾರಿ ಜಿಲ್ಲೆಯ ‘ಮುಕ್ತ’ ದೇವದಾಸಿ ಮಹಿಳೆಯರ ರಾಜ್ಯ­ಮಟ್ಟದ ಒಕ್ಕೂಟದ ಕಾರ್ಯದರ್ಶಿ ರೇಣುಕಾ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 75 ಸಾವಿರಕ್ಕೂ ಹೆಚ್ಚು ದೇವದಾಸಿ ಮಹಿಳೆಯರಿದ್ದಾರೆ. ಆದರೆ, ಸರ್ಕಾರದ ಯಾವುದೇ ಸೌಲಭ್ಯ­ಗಳು ದೇವದಾಸಿ ಮಹಿಳೆ­ಯ­ರನ್ನು ತಲುಪುತ್ತಿಲ್ಲ ಎಂದು ದೂರಿದರು.

ಸದ್ಯ 45 ವರ್ಷಕ್ಕೂ ಹೆಚ್ಚಿನ ವಯೋಮಾನದ ದೇವದಾಸಿ ಮಹಿಳೆ­ಯರಿಗೆ ₨400 ಮಾಸಾಶನ ನೀಡ­ಲಾಗುತ್ತಿದೆ. ಈ ಅಲ್ಪ ಹಣದಿಂದ ಅವರ ಜೀವನ ನಿರ್ವಹಣೆ ಸಾಧ್ಯವಿಲ್ಲ. ಆದ್ದ­ರಿಂದ ಯಾವುದೇ ವಯೋಮಿತಿ­ಯನ್ನು ನಿಗದಿಪಡಿಸದೆ ಎಲ್ಲ ವಯೋ­ಮಾನದ ದೇವದಾಸಿ ಮಹಿಳೆ­ಯರಿಗೂ  ₨1 ಸಾವಿರ ಮಾಸಾಶನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ­ದರು.

ದೇವದಾಸಿ ಮಹಿಳೆಯರ  ಕುಟುಂಬ­ಗಳಿಗೆ ಅಂತ್ಯೋದಯ ಪಡಿತರ ಚೀಟಿ ನೀಡಬೇಕು. ದೇವದಾಸಿಯರ ವಿವಾಹ­ವನ್ನು ಪ್ರೋತ್ಸಾಹಿಸಲು ₨1 ಲಕ್ಷ ಪ್ರೋತ್ಸಾಹ­ಧನ ಮೀಸಲಿಡಬೇಕು. ದೇವದಾಸಿಯರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ನೀಡಬೇಕು. ದೇವದಾಸಿಯರು ಸ್ವಾವ­ಲಂಬನೆ­ಯಿಂದ ಜೀವನ ನಡೆಸಲು  ಪ್ರತಿ ಕುಟುಂಬಕ್ಕೆ ಎರಡು ಎಕರೆ ಕೃಷಿ ಭೂಮಿ ನೀಡಬೇಕು ಎಂದು ಹೇಳಿದರು.

ಸರ್ಕಾರ ಕೂಡಲೇ ಈ ಬೇಡಿಕೆ­ಗಳನ್ನು ಈಡೇರಿಸದಿದ್ದರೆ ರಾಜ್ಯದಾ­ದ್ಯಂತ ಹೋರಾಟ ನಡೆಸ­ಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT