ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದ ಅಭಿವೃದ್ಧಿಗೆ ಕೃಷಿ ಆಧಾರಸ್ತಂಭ’

Last Updated 17 ಸೆಪ್ಟೆಂಬರ್ 2013, 7:02 IST
ಅಕ್ಷರ ಗಾತ್ರ

ಹನುಮಸಾಗರ: ದೇಶದ ಅರ್ಥ ವ್ಯವಸ್ಥೆ ಕೃಷಿಯನ್ನೇ ಅವಲಂಬಿಸಿರುವುದರಿಂದ ರೈತರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಇರುವ ಭೂಮಿ ಯಲ್ಲಿಯೇ ಲಾಭದಾಯಕ ಕೃಷಿ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಪರಶುರಾಮಪ್ಪ ನಂದಿಹಾಳ ಹೇಳಿದರು.

ಇಲ್ಲಿಗೆ ಸಮೀಪದ ಮನ್ನೇರಾಳ ಗ್ರಾಮದ ಕಲ್ಯಾಣ ಮಂಟಪದಲ್ಲಿ  ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಕೃಷಿ ವಿಚಾರ ಸಂಕಿರಣ  ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಹಾಗೂ ಸಂಘ ಸಂಸ್ಥೆಗಳು ರೈತರ ಅಭಿವೃದ್ಧಿಗಾಗಿ ಹಣಕಾಸಿನ ನೆರವು ಸೇರಿದಂತೆ ತರಬೇತಿ, ವಿಚಾರ ಸಂಕಿರಣ, ಪ್ರವಾಸಗಳಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ರೈತರು ಇದರ ಪ್ರಯೋಜನೆ ಪಡೆದು ಕೊಂಡು ಇರುವ ಭೂಮಿಯಲ್ಲಿಯೇ ಲಾಭದಾಯಕ ಬೇಸಾಯ ಮಾಡಬೇಕು ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬೇನಾಳ ಅವರು ‘ಲಾಭದಾಯಕ ಮಿಶ್ರಕೃಷಿ’ ವಿಷಯವಾಗಿ ಮಾತನಾಡಿ, ಒಂದೇ ಬೆಳೆಯನ್ನು ಬೆಳೆಯುವುದರ ಬದಲು ಏಕದಳ ಹಾಗು ದ್ವಿದಳ ಧಾನ್ಯದ ಬೆಳೆಗಳನ್ನು ಮಿಶ್ರವಾಗಿ ಹಾಕಿದರೆ ಒಂದಕ್ಕೊಂದು ಪೂರಕವಾಗಿ ಫಲ ವತ್ತಾದ ಬೆಳೆ ಬರಲು ಸಾಧ್ಯವಾ ಗುತ್ತದೆ. ಅಲ್ಲದೆ ಮಿಶ್ರ ಬೇಸಾಯದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಆಹಾರ ಧಾನ್ಯಗಳನ್ನು ಬೆಳೆಯಬಹು ದಾಗಿದೆ. ಇದು ಲಾಭದಾಯಕ ಕೃಷಿ ಯಾಗುವುದರ ಜೊತೆಗೆ ಭೂಮಿಗೆ ಫಲವತ್ತತೆ ತುಂಬಲು ಸಹಕಾರಿಯಾ ಗುತ್ತದೆ ಎಂದು ಹೇಳಿದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಮರೇಶ ಮಡಿವಾಳರ ‘ಮಳೆಯಾಶ್ರಿತ ಭೂಮಿಯಲ್ಲಿ ಲಾಭ ದಾಯಕ ಕೃಷಿ’ ಕುರತು ಮಾತನಾಡಿದರು. ಸಂಸ್ಥೆಯ ಮೇಲ್ವಿಚಾ ರಕ ದೇವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಮನ್ನೇರಾಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಬ್ಬರಗಿ ಗ್ರಾ.ಪಂ. ಅಧ್ಯಕ್ಷೆ ಜುಮ್ಮವ್ವ ಕುರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.  ಸದಸ್ಯರಾದ ಚಂದನಗೌಡ ಪೊಲೀಸ್‌ ಪಾಟೀಲ, ದೊಡ್ಡಪ್ಪ ಪಾಲಕರ, ಗಿರಿಜಮ್ಮ ಹಿರೇಮಠ, ಮುದ್ದವ್ವ ಗುನ್ನಾಳ, ಅಕ್ಕಮಹಾದೇವು ತಳವಾರ, ಚಂದನಗೌಡ ಪಾಲಕರ ಇದ್ದರು. ರೇಣುಕಾ ಗುನ್ನಾಳ, ದೇವೇಂದ್ರಪ್ಪ, ಸಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT