ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದ ಅಭಿವೃದ್ಧಿಗೆ ಸಾಕ್ಷರತೆ ಅವಶ್ಯ’

Last Updated 17 ಸೆಪ್ಟೆಂಬರ್ 2013, 10:13 IST
ಅಕ್ಷರ ಗಾತ್ರ

ಚನ್ನಪಟ್ಟಣ:- ‘ಸಾಕ್ಷರತೆಯಿಂದ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸೋಗಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆ ಮತ್ತು ಚುಟು ಕು ಸಾಹಿತ್ಯ ಪರಿಷತ್‌ ಸಹ ಯೋಗ ದೊಂದಿಗೆ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಏ ರ್ಪಡಿಸಿದ್ದ ಆಶು ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳಿಗೆ ಅನಕ್ಷರತೆಯೇ ಕಾರಣ. ಆದ್ದರಿಂದ ದೇಶ ಮತ್ತು ರಾಜ್ಯದಲ್ಲಿ ಶೇ.100 ರಷ್ಟು ಸಾಕ್ಷ ರತಾ ಗುರಿ ಮುಟ್ಟುವ ಅವಶ್ಯಕತೆಯಿದೆ. ಗುಣಮಟ್ಟದ ಸಾಕ್ಷರತೆ ಹೆಚ್ಚಿದಂತೆಲ್ಲಾ ಹೆಣ್ಣು ಮಕ್ಕಳನ್ನು ಗೌರವಿಸುವ, ಸುಸಂ ಸ್ಕೃತ, ನಾಗರಿಕ ವಾತಾವರಣ ಸೃಷ್ಟಿಸಿ ಲಿಂಗ ಸರಿಸಮಾನ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಜೆ.ಸಿ. ಸುರೇಶ್‌, ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಉದ್ದೇಶಿತ ಕಾರ್ಯ ಕ್ರಮಗಳಿಗೆ ಸಂಘ ಸಂಸ್ಥೆಗಳು ಸಹ ಕರಿಸಿದರೆ ಗ್ರಾಮೀಣ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಿ, ಸಮಾಜದ ಮುಖ್ಯವಾಹಿನಿಗೆ ತಂದು ಸುಶಿಕ್ಷಿತ ರನ್ನಾಗಿ ಪರಿವರ್ತಿಸಲು ಸಾಧ್ಯ ವಿದೆ ಎಂದರು. ಚುಟುಕು ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಮೆಣಸಿಗನಹಳ್ಳಿ ಮಾದುಗೌಡ, ಕಾರ್ಯದರ್ಶಿ ಶಶಿ ಕುಮಾರ್, ಮಳೂರು ಎಂಪಿಸಿಎಸ್‌ ಅಧ್ಯಕ್ಷ ಲಿಂಗ ಮರಿಗೌಡ, ಶಿಕ್ಷಕಿಯರಾದ ಝಾಕೀರ್ ಹುಸೇನ್, ಲಕ್ಷ್ಮಿ, ನಾಗರತ್ನ, ಪೂರ್ಣಿಮ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ-–ಕನ್ನಡ ಶಬ್ದಕೋಶ, ಹಾಗೂ ನಾಡಿನ ಹಿರಿಯ ಸಾಹಿತಿಗಳಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತರ ವಿಚಾರ ಹಾಗೂ ಪರಿಸರ, ಸಾಂಕ್ರಾಮಿಕ ರೋಗಗಳ ಕುರಿತ ಪುಸ್ತಕಗಳನ್ನು ನಿೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT