ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದ್ವೀಪ’ ಸೃಷ್ಟಿ!

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಪಾಕಿಸ್ತಾನದ  ಬಲೂಚಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ನಂತರ ಗ್ವಾದರ್‌ ಬಂದರು ಸಮೀಪ ಅರಬ್ಬಿ ಸಮುದ್ರದಲ್ಲಿ ‘ದ್ವೀಪ’­ವೊಂದು ಸೃಷ್ಟಿ­ಯಾಗಿದೆ ಎಂದು ಪಾಕ್‌ ಮಾಧ್ಯ­ಮ­ಗಳು ತಿಳಿಸಿವೆ.

ಅಧಿಕಾರಿಗಳ ಪ್ರಕಾರ, ಈ ದ್ವೀಪ 200 ಮೀಟರ್‌ ಉದ್ದ,  20 ಮೀಟರ್‌ ಎತ್ತರ ಮತ್ತು 100 ಮೀಟರ್‌ ಅಗಲವಿದೆ ಎಂದು ‘ಡಾನ್‌’ ಪತ್ರಿಕೆ ವರದಿ ಮಾಡಿದೆ.

‘ಭೂಕಂಪ ಸಂಭವಿಸಿದ ತಕ್ಷಣ ಈ ದ್ವೀಪ ನಿರ್ಮಾಣವಾಗಿದೆ. ತೀರದಿಂದ 1.5 ಕಿ.ಮೀ ದೂರ­ದಲ್ಲಿ ದ್ವೀಪ ಸೃಷ್ಟಿ­ಯಾ­ಗಿದೆ ಎಂದು ಗ್ವಾದರ್‌ಗೆ ತೆರಳಿರುವ ನಮ್ಮ ಸಿಬ್ಬಂದಿ ತಿಳಿಸಿ­ದ್ದಾರೆ. ಅಲ್ಲಿ ನಿರ್ಮಾಣವಾಗಿರುವ ದ್ವೀಪ­ವನ್ನು ವೈಜ್ಞಾನಿಕ­ವಾಗಿ ಪರಿಶೀಲಿಸ­ಬೇ­ಕಾ­ಗಿದೆ’ ಎಂದು ರಾಷ್ಟ್ರೀಯ ಸಾಗರೋತ್ತರ ಅಧ್ಯ­ಯನ ಸಂಸ್ಥೆ ಪ್ರಾಂಶುಪಾಲ ಆಸೀಫ್‌ ಇನಾಮ್‌ ತಿಳಿಸಿದ್ದಾರೆ.

ಮಿಥೇನ್‌ ಅನಿಲ: ‘ಅರಬ್ಬಿ ಸಮುದ್ರದಲ್ಲಿ ನಿರ್ಮಾಣ­­­ವಾಗಿ­ರುವ ದ್ವೀಪವು ‘ಮಿಥೇನ್‌ ಅನಿಲ’ ಹೊರ­ಸೂಸು­ತ್ತಿದ್ದು, ಅದರ ಸಮೀಪಕ್ಕೆ ಹೋಗದಂತೆ ತಜ್ಞರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT