ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧ್ವನಿ ಬೆಳಕು ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಸಚಿವ’

Last Updated 24 ಸೆಪ್ಟೆಂಬರ್ 2013, 5:28 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ:  ಇಲ್ಲಿನ ಡೆಲ್ಲಿ ಗೇಟ್‌ ಬಳಿ ದಸರಾ ಉತ್ಸವದ ವೇಳೆಗೆ ಪ್ರವಾಸೋದ್ಯಮ ಇಲಾಖೆ ಆರಂಭಿಸಲು ಉದ್ದೇಶಿಸಿರುವ ಪಟ್ಟಣದ ಐತಿಹಾಸಿಕ ಘಟನಾವಳಿಗಳ ಕುರಿತ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಸೋಮವಾರ ಪರಿಶೀಲಿಸಿದರು.

ಅಧಿಕಾರಿಗಳ ಜತೆ ಇಲ್ಲಿಗೆ ಆಗಮಿಸಿದ ಸಚಿವರು ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದರು. ಚಲನ ಚಿತ್ರ ನರ್ದೇಶಕ ಟ.ಎಸ್‌. ನಾಗಾಭರಣ, ಇನ್ನೋವೇಟೀವ್‌ ಸಂಸ್ಥೆಯ ನಿರ್ದೇಶಕ ಕೃಷ್ಣಕುಮಾರ್‌ ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಅಂಗವಾಗಿ ಪಟ್ಟಣದ ಪರಂಪರೆ ಬಿಂಬಿಸುವ ಕಾರ್ಯಕ್ರಮ ನಡೆಯುತ್ತಿದೆ. ಡೆಲ್ಲಿ ಗೇಟ್‌ ಬಳಿ, ಎರಡು ಎಕರೆ ಪ್ರದೇಶದಲ್ಲಿ, ಸುಮಾರು ರೂ.3 ಕೋಟಿ ವೆಚ್ಚದಲ್ಲಿ ಧ್ವನಿ ಬೆಳಕು ರೂಪುಗೊಳ್ಳಲಿದೆ.

9ನೇ ಶತಮಾನದಿಂದ ಕ್ರಿ.ಶ.1799ರ ಶ್ರೀರಂಗಪಟ್ಟಣ ಪತನದ ವರೆಗಿನ ಐತಿಹಾಸಿಕ ಘಟನೆಗಳನ್ನು ಧ್ವನಿ ಮತ್ತು ಬೆಳಕಿನ ಮೂಲಕ ಪ್ರಸ್ತುತ ಪಡಿಸಲಾಗುತ್ತದೆ. ಪಟ್ಟಣದ ಪ್ರಮುಖ ಸ್ಮಾರಕಗಳನ್ನು ಒಂದೇ ಕಡೆ ಸೃಷ್ಟಸಲಾಗುವುದು. 30 ನಿಮಿಷಕ್ಕೆ ಕಡಿಮೆ ಇರದ, 40 ನಿಮಿಷ ಮೀರದಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ನಾಗಾಭರಣ ವಿವರಿಸಿದರು.

  ಇತಿಹಾಸಕಾರ ಸಿದ್ದಗಂಗಯ್ಯ ಕಂಬಾಳ್‌ ಧ್ವನಿ ಬೆಳಕಿನ ವರದಿ ಸಿದ್ದಪಡಿಸಿದ್ದಾರೆ. ಕೃಷ್ಣಕುಮಾರ್‌, ಶಶಿಧರ್‌ ಬಾರಿಘಾಟ್‌, ಅಬ್ದುಲ್‌ ರೆಹಮಾನ್‌, ಪ್ರೊ.ಚಂದ್ರಶೇಖರ್‌ ಅವರನ್ನು ಒಳಗೊಂಡ ತಂಡ ಕಾರ್ಯಕ್ರಮ ರೂಪಿಸುತ್ತಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಸಿದ್ಧತಾ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ದ್ವಾರ ಮುಚ್ಚಬೇಡಿ: ಧ್ವನಿ ಬೆಳಕು ಕಾರ್ಯಕ್ರಮಕ್ಕಾಗಿ 300 ವರ್ಷಗಳಿಂದ ಜನರು ಓಡಾಟಕ್ಕೆ ಬಳಸುತ್ತಿರುವ ಡೆಲ್ಲಿ ಗೇಟ್‌ ದ್ವಾರವನ್ನು ಬಂದ್‌ ಮಾಡುವುದಾಗಿ ಹೇಳುತ್ತಿದ್ದಾರೆ. ಹಾಗೆ ಮಾಡಿದರೆ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಾರೆ. ಸಂಜೆ 6 ಗಂಟೆ ನಂತರ ಕಾರ್ಯಕ್ರಮ ನಡೆಯಲಿದ್ದು, ಹಗಲು ಹೊತ್ತಿನಲ್ಲಿ ಕೋಟೆ ದ್ವಾರವನ್ನು ಮುಚ್ಚದಂತೆ ಸಂಬಂಧಿಸಿದವರಿಗೆ ಸೂಚಿಸಬೇಕು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌. ಲಿಂಗರಾಜು, ಕೆ. ಬಲರಾಂ, ಗಂಜಾಂ ಕೃಷ್ಣಪ್ಪ, ನರಸಿಂಹಸ್ವಾಮಿ ಇತರರು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸೆ.28ರ ಒಳಗೆ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರ ಸಭೆ ಕರೆದು ಚರ್ಚೆ ನಡೆಸಿ ಜನರಿಗೆ ಅನಾನುಕೂಲ ಆಗದಂತೆ ತೀರ್ಮಾನ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಬಿ.ಎನ್‌. ಕೃಷ್ಣಯ್ಯ ಅವರಿಗೆ ತಿಳಿಸಿದರು. ಉಪ ವಿಭಾಗಾಧಿಕಾರಿ ಬಿ. ವಾಣಿ, ತಹಶೀಲ್ದಾರ್‌ ಶಿವಾನಂದಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT