ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಂಬಿಕೆಯ ಜತೆಜತೆಗೆ ಪರಾಮರ್ಶೆ’

ಪಾಕಿಸ್ತಾನ ಕುರಿತು ಭಾರತದ ನಿಲುವು
Last Updated 30 ಸೆಪ್ಟೆಂಬರ್ 2013, 20:07 IST
ಅಕ್ಷರ ಗಾತ್ರ

ನ್ಯೂಯಾರ್ಕ್‌(ಪಿಟಿಐ): ಪಾಕಿಸ್ತಾನವನ್ನು ನಂಬುತ್ತಲೇ ಅದರ ಚಟುವಟಿಕೆಗಳನ್ನು ಪರಾಮರ್ಶೆಗೂ ಒಳಪಡಿಸುವ ನೀತಿಯನ್ನು ಅನುಸರಿಸಲಾ ಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್‌ ಖುರ್ಷಿದ್‌ ಹೇಳಿದರು.

ಪಾಕಿಸ್ತಾನದ ಪ್ರಧಾನಿ  ನವಾಜ್ ಷರೀಫ್‌ ಅವರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ ಭಾನುವಾರ ಮಾತುಕತೆ ನಡೆಸಿದ ಬಳಿಕ ಖುರ್ಷಿದ್ ಸುದ್ದಿಗಾರರಿಗೆ ಮಾತುಕತೆಯ ವಿವರಗಳನ್ನು ನೀಡಿದರು.

‍ಪಾಕಿಸ್ತಾನದ ನೆಲದಿಂದ ಭಾರತ ವಿರೋಧಿ ಭಯೋತ್ಪಾದನೆಯನ್ನು ಹೊಡೆದೋಡಿಸಲು ಭಾರತ ಕಂಡುಕೊಂಡಿರುವ ಹೊಸ ನಿಲುವು ಇದು ಎಂದು ಅವರು ಹೇಳಿದರು.

ಪಾಕ್‌ ಜತೆ ಭಾರತ ನಡೆಸಿರುವ ಈ ಮಾತುಕತೆ ವ್ಯರ್ಥವಾಗಲಾರದು ಎಂಬ ಆಶಾಭಾವನೆ ಇದೆ. ಈ ನಿಟಿ್ಟನಲ್ಲಿ ಪ್ರಧಾನಿ ಸಿಂಗ ಅವರು ನವಾಜ್‌ ಷರೀಫ್ ಅವರಿಗೆ ಭಾರತದ ನಿಲುವು ಏನೆಂಬುದನ್ನು ನೇರವಾಗಿ ಹೇಳಿದ್ದಾರೆ. ಮೊದಲು ಪಾಕಿಸ್ತಾನದ ಮಾತನ್ನು ನಂಬುತ್ತೇವೆ. ಆದರೆ, ನಂಬಿಕೆಯ ಜತೆಜತೆಗೇ ಅದರ ಧೋರಣೆಗಳ ಬಗ್ಗೆ ಪರಾಮರ್ಶೆಯನ್ನೂ ನಡೆಸಲಾಗುವುದು ಎಂದು  ಸಿಂಗ್ ಪಾಕ್‌ಗೆ ಸ್ಪಷ್ಟವಾಗಿ ಮನವರಿಕೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಪಾಕಿಸ್ತಾನಕ್ಕೆ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ನಮ್ಮ ಪ್ರಧಾನಿ ಸಿಂಗ್‌ ಅವರು ಇನ್ನೊಂದು ಅವಕಾಶ ನೀಡಿದ್ದಾರೆ. ಪಾಕಿಸ್ತಾನದ ಪ್ರಧಾನಿಯಾಗಿ ನವಾಜ್‌ ಷರೀಫ್ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಮಾತುಕತೆ ವ್ಯರ್ಥವಾಗಬಾರದು ಎಂಬುದಷ್ಟೇ ಇದರ ಉದ್ದೇಶ ಎಂದರು.

ಉಭಯ ನಾಯಕರ ಮಾತುಕತೆಯಲ್ಲಿ ಮುಂಬೈ ದಾಳಿ, ಜಮಾತ್‌ ಉದ್‌ ದವಾ ಉಗ್ರ ಸಂಘಟನೆ, ಅದರ ಮುಖ್ಯಸ್ಥ ಹಫೀಜ್‌ ಸೈಯದ್ ಹಾಗೂ ಗಡಿಯಲ್ಲಿನ ದಾಳಿ ವಿಷಯಗಳು ಮುಕ್ತವಾಗಿ ಪ್ರಸಾ್ತಪವಾದವು ಎಂದು ಹೇಳಿದರು.

ಪಾಕ್ ಕುರಿತು ಒಬಾಮಗೆ ದೂರು ಹೇಳಿಲ್ಲ: ಖುರ್ಷಿದ್
ಭಾರತವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸುತ್ತಿರುವ ಗಡಿ ಭಯೋತ್ಪಾದನೆ ಕುರಿತು ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರ ಬಳಿ ದೂರು ವ್ಯಕ್ತಪಡಿಸಿಲ್ಲ ಎಂದು  ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್  ಖುರ್ಷಿದ್‌ ಸ್ಪಷ್ಟಪಡಿಸಿದ್ದಾರೆ.

ಪಾಕ್‌ನ ಭಯೋತ್ಪಾದನಾ ಚಟುವಟಿಕೆಗಳ ಕುರಿತು ಸಿಂಗ್‌ ಅವರು ಒಬಾಮ ಅವರ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಕುರಿತು ಒಬಾಮ ಅವರ ಅನಿಸಿಕೆ ಏನು ಎಂಬುದನ್ನು ಅರಿಯಲು ಯತ್ನಿಸಿದ್ದಾರೆ ಅಷ್ಟೇ. ಇದನ್ನು ಮಾಧ್ಯಮಗಳು ಬೇರೆ ರೀತಿಯಾಗಿ ಅರ್ಥೈಸುವ ಅಗತ್ಯವಿಲ್ಲ ಎಂದು ಅವರು ಸುದ್ದಿಗಾರರಿಗೆ ವಿವರಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಭಾರತ ಪ್ರಧಾನಿ ಸಿಂಗ್ ಇಬ್ಬರೂ ಒಳ್ಳೆಯ ಸ್ನೇಹಿತರು. ಇಬ್ಬರೂ ಪರಸ್ಪರ ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಬಯಸುವವರು ಎಂದು ಅವರು ಹೇಳಿದರು.

ಪಾಕಿಸ್ತಾನದ ಕುರಿತು ಒಬಾಮ ಅವರ ಅನಿಸಿಕೆ ಏನು ಎಂಬುದನ್ನು  ಅರಿಯಲು ಸಿಂಗ್‌ ಪ್ರಯತ್ನಿಸಿದ್ದಾರೆ. ಈ ವೇಳೆ ಪಾಕ್ ಕುರಿತು ಸಿಂಗ್‌ ಅವರು ಒಬಾಮ ಬಳಿ ಪ್ರಸಾ್ತಪಿಸಿರುವ ವಿಷಯಗಳು ದೂರಿನ ಧಾಟಿಯಲ್ಲಿ ಇರಲಾರದು. ಇದು ಪಾಕಿಸ್ತಾನದ ಬಗ್ಗೆಯಾಗಲೀ ಅಥವಾ ನವಾಜ್‌ ಷರೀಫ್‌ ಅವರ ಕುರಿತಾಗಲಿ ಟೀಕೆ ಯಾಗಲೀ, ದೂರಿನ ಸ್ವರೂಪದ ಮಾತುಕತೆಯಾಗಲೀ ಅಲ್ಲ ಎಂದರು.

ಸುಮಾರು ಒಂದು ಗಂಟೆ ಅವಧಿಯ ಮಾತುಕತೆಯಲ್ಲಿ ಪ್ರಧಾನಿ ಸಿಂಗ್‌ ಅವರು, ಪಾಕಿಸ್ತಾನದ  ಗಡಿ ಭಯೋತ್ಪಾದನಾ ಕೃತ್ಯಗಳಿಂದ ಭಾರತ ಅನುಭವಿಸುತ್ತಿರುವ ತೊಂದರೆಗಳನ್ನು ಒಬಾಮ ಅವರಿಗೆ ವಿವರಿಸಿದರು ಎಂದು ಖುರ್ಷಿದ್‌ ತಿಳಿಸಿದರು.

ಪ್ರಧಾನಿ ಸಿಂಗ್‌ ಹಾಗೂ ಅಮೆರಿಕ ಅಧ್ಯಕ್ಷ ಒಬಾಮ ಅವರ ಭೇಟಿಯ ಸಂದರ್ಭದಲ್ಲಿ ಸಲ್ಮಾನ್ ಖುರ್ಷಿದ್‌ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT