ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನವೆಂಬರ್‌ನಲ್ಲಿ ಶಂಕುಸ್ಥಾಪನೆ’

ಕುಳಾಯಿ, ಹೆಜಮಾಡಿ ಮೀನುಗಾರಿಕಾ ಬಂದರು:
Last Updated 14 ಸೆಪ್ಟೆಂಬರ್ 2013, 8:50 IST
ಅಕ್ಷರ ಗಾತ್ರ

ಮಂಗಳೂರು: ‘ಕುಳಾಯಿ ಹಾಗೂ ಹೆಜಮಾಡಿಯ ಮೀನುಗಾರಿಕಾ ಬಂದ­ರು­ಗಳಿಗೆ ನವೆಂಬರ್‌ ತಿಂಗಳಲ್ಲಿ ಶಂಕು­ಸ್ಥಾಪನೆ ನಡೆಸಲಾಗುವುದು’ ಎಂದು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕುಳಾಯಿ ಮತ್ತು ಹೆಜಮಾಡಿಯ ಮೀನುಗಾರಿ­ಕಾ ಬಂದರು ನಿರ್ಮಾಣದ ಬಗ್ಗೆ ನವಮಂಗಳೂರು ಬಂದರು ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಚೀನಾ ಪ್ರವಾಸ­ದಲ್ಲಿರುವ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ರಾಜ್ಯಕ್ಕೆ ಮರಳಿದ ಬಳಿಕ ಅವರ ಜತೆ ಸಮಾಲೋಚನೆ ನಡೆಸಿ ಶಂಕುಸ್ಥಾಪನೆಗೆ ದಿನ ನಿಗದಿ ಮಾಡಲಾಗುವುದು’ ಎಂದರು.

‘ಮೂಡುಬಿದಿರೆಯಲ್ಲಿ ಕ್ರೀಡಾ ಇಲಾಖೆ ಅಧೀನದಲ್ಲಿ 32 ಎಕರೆ ಜಾಗ­ವಿದೆ. ರಾಜ್ಯ ಹಾಗೂ ರಾಷ್ಟ್ರ­ಮಟ್ಟದಲ್ಲಿ ಪದಕ ಗೆದ್ದಿರುವ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿರುವುದು ಮೂಡು­ಬಿದಿರೆ-­­­ಯಲ್ಲಿ. ಕ್ರೀಡಾ ಕ್ಷೇತ್ರ­ದಲ್ಲಿ ಸಾಧನೆ ಮಾಡಿರುವ 850ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಮೋಹನ ಆಳ್ವ ಅವರು ದತ್ತು ಪಡೆದು, ಅವರ ಶಿಕ್ಷಣ ಹಾಗೂ ಕ್ರೀಡಾ ಸಾಧನೆಗೆ ನೆರವಾಗು­ತ್ತಿದ್ದಾರೆ. ಅಲ್ಲಿನ ಸ್ವರಾಜ್ಯ ಮೈದಾನ­ದಲ್ಲಿ  ₨ 4 ಕೋಟಿ ವೆಚ್ಚದಲ್ಲಿ ಸಿಂಥೆ­ಟಿಕ್‌ ಟ್ಟ್ರ್ಯಾಕ್‌ ನಿರ್ಮಿಸುವ ಯೋಜನೆ ಇದೆ’ ಎಂದರು.

‘ಮಂಗಳೂರಿನ ಮಂಗಳಾ ಕ್ರೀಡಾಂಗ­ಣದ ಬಳಿಯ ಜಾಗದಲ್ಲಿ ಕ್ರೀಡಾ ಸಂಕೀರ್ಣವನ್ನು ನಿರ್ಮಿಸುವ ಯೋಜನೆ ಸದ್ಯಕ್ಕಿಲ್ಲ. ಇಲಾಖೆಗೆ ಬಜೆಟ್‌ನಲ್ಲಿ ಕೇವಲ 100 ಕೋಟಿ ಅನುದಾನ ಮಾತ್ರ ಮೀಸಲಿಡ­ಲಾಗಿದೆ. ಇದರಲ್ಲಿ ಅಧಿಕಾರಿಗಳ ಸಂಬ­ಳ ಹಾಗೂ ನಿರ್ವಹಣಾ ವೆಚ್ಚ ತೆಗೆದರೆ ಕೇವಲ ₨ 34 ಕೋಟಿ ಮಾತ್ರ ಕ್ರೀಡಾ ಅಭಿವೃದ್ಧಿಗೆ ಲಭ್ಯ. ಮುಂದಿನ ವರ್ಷ­ದಿಂದ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ­ಯನ್ನು ಕೋರಲಾಗುವುದು’  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT