ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಸರ್ಗ’ದಲ್ಲಿ ಗಣೇಶೋತ್ಸವ ಸಂಗೀತ -ನೃತ್ಯ ಸಂಭ್ರಮ

Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿ ನಿರ್ಮಾಣ್ ಶೆಲ್ಟರ್ಸ್‌  ಮತ್ತು ನಿಸ್ವಾರ್ಥ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಈ ಸಲ 13ನೇ ವರ್ಷದ ಗಣೇಶೋತ್ಸವ ಆಚರಿಸುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆರು ದಿನಗಳ ಕಾಲ ನಡೆಯಲಿವೆ.

ಸೆ.9ರಂದು ಬೆಳಿಗ್ಗೆ 11 ಗಂಟೆಗೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ, ಪೂಜೆ ನಡೆಯಲಿದೆ. 10ರಂದು ಮಂಗಳವಾರ ಬೆಳಿಗ್ಗೆ ಗಣಹೋಮ, ಮಹಾಮಂಗಳಾರತಿ. ಸಂಜೆ 6 ಗಂಟೆಗೆ ನಾರಾಯಣ್ ಮಾದಾಪುರ ಮತ್ತು ಪ್ರಬುದ್ಧಾಲಯ ನಿವಾಸಿಗಳಿಂದ ಹಾಸ್ಯನಾಟಕ ಹಾಗೂ 7 ಗಂಟೆಗೆ ವಿದ್ವಾನ್ ಎಲ್. ಸಿದ್ಧರಾಜು ನೇತೃತ್ವದಲ್ಲಿ ಬನಶಂಕರಿ ಸಂಗೀತ ನೃತ್ಯ ಕಲಾನಿಕೇತನದ ಸದಸ್ಯರಿಂದ ನೃತ್ಯ-ವೈಭೋಗ ಕಾರ್ಯಕ್ರಮ.

ಸೆ. 11ರಂದು ಬುಧವಾರ ಸಂಜೆ ಚೆನ್ನೈನ ವಿದ್ವಾನ್ ಒ.ಎಸ್. ಅರುಣ್ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಾಡಾಗಿದೆ. 12ರಂದು ಉಡುಪಿಯ ಸಮೂಹ ಕಲಾವಿದರಿಂದ ‘ಪಾಂಚಾಲಿ’ ಏಕವ್ಯಕ್ತಿ ನೃತ್ಯ ಪ್ರದರ್ಶನವಿದೆ.

ಸೆ. 13ರಂದು ಶುಕ್ರವಾರ ಸಂಜೆ 4.30ಕ್ಕೆ ಪುತ್ತೂರಿನ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಮೇಳಗಳ ಆಯ್ದ ಕಲಾವಿದರ ಕೂಡುವಿಕೆಯಿಂದ ‘ತ್ರಿಜನ್ಮ ಮೋಕ್ಷ’ ಪೌರಾಣಿಕ ಕಥಾಭಾಗ ಪ್ರದರ್ಶನ ಏರ್ಪಡಿಸಲಾಗಿದೆ.

14ರಂದು ಸಂಜೆ 6.30ಕ್ಕೆ ಮಹಾಗಣಪತಿ ಪೂಜೆ, ಮಂಗಳಾರತಿ ಮತ್ತು ಭವ್ಯ ಮೆರವಣಿಗೆಯೊಂದಿಗೆ ಗಣಪತಿ ವಿಸರ್ಜನೆ ಕಾರ್ಯಕ್ರಮವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT