ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಿನ ಪುನರ್‌ಬಳಕೆ ಅಗತ್ಯ’

Last Updated 1 ಜನವರಿ 2014, 20:01 IST
ಅಕ್ಷರ ಗಾತ್ರ

ಯಲಹಂಕ: ‘ಇತ್ತೀಚಿನ ದಿನಗಳಲ್ಲಿ ನೀರಿನ ಅಭಾವ ಜ್ವಲಂತ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಲಭ್ಯವಿರುವ ನೀರಿನ ಮೂಲಗಳನ್ನು ಸಮರ್ಪಕವಾಗಿ ಪುನರ್‌ ಬಳಕೆ ಮಾಡಿಕೊಂಡರೆ ಈ ಸಮಸ್ಯೆಗೆ ಸಾಕಷ್ಟು ಪರಿಹಾರ ಸಿಗಲಿದೆ’ ಎಂದು ಜಲತಜ್ಞ ಅಯ್ಯಪ್ಪ ಮಸಗಿ ನುಡಿದರು.

ಹುಣಸಮಾರನಹಳ್ಳಿ ಗ್ರಾಮದಲ್ಲಿ ಅಕ್ಷಯ ಕ್ರೆಡಿಟ್‌ ಸೌಹಾರ್ದ ಸಂಘ ಆಯೋಜಿಸಿದ್ದ  ಸೌಹಾರ್ದ ಸಹಕಾರಿ ದಿನಾ­ಚರಣೆ ಸಮಾರಂಭವನ್ನು ಉದ್ಘಾ­ಟಿಸಿ ಮಾತನಾಡಿದರು.

‘ಅಂತರ್ಜಲದ ಸಮಸ್ಯೆ ಬಗೆಹರಿಸಲು ಈಚಿನ ದಿನಗಳಲ್ಲಿ ಹಲವಾರು ಪ್ರಯೋ­ಗ­ಗಳನ್ನು ಕೈಗೊಂಡಿದ್ದು, ಇದಕ್ಕೆ  ಸಹ­ಕಾರಿ ಸಂಘಗಳು, ಸಹಕಾರಿ ಬ್ಯಾಂಕು­ಗಳು ಕೈ­ಜೋಡಿಸಬೇಕು’ ಎಂದರು.

ಈ ಸಂದರ್ಭದಲ್ಲಿ ಅಯ್ಯಪ್ಪ ಮಸಗಿ, ವಾಣಿಜ್ಯ ಅಧಿಕಾರಿ ಎನ್‌.ಜಿ.ರಂಗ­ಸ್ವಾಮಿ, ಪ್ರಗತಿಪರ ರೈತ ಬಿ.ತಮ್ಮಣ್ಣ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಿ.ಆರ್‌.ಬೈರೇಗೌಡ, ಉಪಾ­ಧ್ಯಕ್ಷ ವೀರೇಶ್‌, ಗೌರವ ಕಾರ್ಯದರ್ಶಿ ಬಿ.ಪುಟ್ಟ ಶಾಮಪ್ಪ, ಕಾರ್ಯನಿರ್ವಹ­ಣಾ­ಧಿಕಾರಿ ಡಿ.ಎಸ್‌. ವೆಂಕಟಾಚಲಪತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT