ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೂತನ ಪ್ರವಾಸೋದ್ಯಮ ನೀತಿ’

Last Updated 20 ಡಿಸೆಂಬರ್ 2013, 20:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋ­ದ್ಯಮ­ವನ್ನು ಉತ್ತೇಜಿಸಲು ಹೊಸ ನೀತಿಯನ್ನು ರೂಪಿಸಲಾಗುತ್ತಿದೆ ಎಂದು  ಪ್ರವಾಸೋದ್ಯಮ ಸಚಿವ ಆರ್.ವಿ.ದೇಶ­ಪಾಂಡೆ ಹೇಳಿದರು.

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ (ಜೆಆರ್‌ಎಲ್)  ಶುಕ್ರವಾರ  ಆಯೋಜಿಸಿದ್ದ ಸಮಾರಂಭದಲ್ಲಿ ಜೆಆರ್‌ಎಲ್ ಜಾಲತಾಣವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

‘ಪ್ರವಾಸೋದ್ಯಮವು ಹೆಚ್ಚಿನ  ಉದ್ಯೋಗಾವಕಾಶವನ್ನು  ಸೃಷ್ಟಿಸು­ತ್ತದೆ. ಅಲ್ಲದೆ ರಾಜ್ಯದ ಬೊಕ್ಕಸಕ್ಕೆ ಆದಾಯವನ್ನೂ ತರುತ್ತದೆ.  ಈಗ ಪ್ರಚಲಿತದಲ್ಲಿರುವ ಪರಿಸರ ಪ್ರವಾಸೋ­ದ್ಯಮಕ್ಕೆ ಹೆಚ್ಚಿನ ಒತ್ತು ನೀಡ­ಲಾಗು­ವುದು’ ಎಂದರು.

ಜೆಆರ್‌ಎಲ್‌ ವ್ಯವಸ್ಥಾಪಕ ನಿರ್ದೇ­ಶಕ ಪಿ.ಅನೂರ್ ರೆಡ್ಡಿ, ‘ಪ್ರವಾಸಿಗರನ್ನು ಆಕರ್ಷಿಸುವಂತೆ ಹಾಗೂ ವೇಗದ ಜಗತ್ತಿಗೆ ಹೊಂದುವಂತೆ ಜಾಲತಾಣ­ವನ್ನು ವಿಶೇಷವಾಗಿ ರೂಪಿಸಲಾಗಿದೆ.  ಈ ಹಿಂದಿನ ಪ್ರವಾಸಿಗರು ರೂಪಿಸಿರುವ ಪ್ರವಾಸಿ ಚಲನಚಿತ್ರಗಳು ಜಾಲತಾಣ­ದಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಸಂಸ್ಥೆಯ ಚಟುವಟಿಕೆಗಳನ್ನು ವಿಸ್ತರಿಸ­ಲಾಗುವುದು’ ಎಂದರು.

ಜೆಆರ್‌ಎಲ್‌ಗೆ ಪದೇ ಪದೇ ಭೇಟಿ ನೀಡುವ ಪ್ರವಾಸಿಗರಿಗೆ  ಹೆಚ್ಚಿನ ರಿಯಾಯಿತಿ ಒದಗಿಸುವ ‘ಜೆಆರ್‌ಎಲ್‌ ಲಾಯಲ್ಟಿ ಕಾರ್ಡ್‌’ಗಳನ್ನು  ಸಮಾರಂಭದಲ್ಲಿ ವಿತರಿಸಲಾಯಿತು.

ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಶೈಲಂ, ಮತ್ತು ಹೆಚ್ಚುವರಿ  ಮುಖ್ಯ ಕಾರ್ಯದರ್ಶಿ  ಜಿ.ಕೃಷ್ಣ ರಾವ್, ಕರ್ನಾಟಕ  ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿರ್ದೇಶಕ ಸಿ.ಡಿ.ದೇವಯ್ಯ   ಉಪಸ್ಥಿತರಿದ್ದರು.

ಸಂಸ್ಥೆಯ ನೂತನ  ಜಾಲತಾಣಗಳು : www.junglelodges.com ಮತ್ತು www.jrlexplore.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT