ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆಮ್ಮದಿಯ ಬದುಕಿಗೆ ಬಿಜೆಪಿ ಬೆಂಬಲಿಸಿ’

Last Updated 11 ಏಪ್ರಿಲ್ 2014, 5:11 IST
ಅಕ್ಷರ ಗಾತ್ರ

ತರೀಕೆರೆ: ಬೆಲೆ ಏರಿಗೆ, ಭಯೋತ್ಪಾದನೆ ನಿಗ್ರಹ ಹಾಗೂ ಸಾಮರಸ್ಯದ ಮೂಲಕ ನೆಮ್ಮದಿಯ ಬದುಕಿನ ಜೊತೆಜೊತೆ­ಯಲ್ಲಿ ರಾಷ್ಟ್ರದ ಪ್ರಗತಿಗಾಗಿ ಬಿಜೆಪಿಗೆ ಮತ ನೀಡುವಂತೆ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯ­ದರ್ಶಿ ಸಿ.ಟಿ.ರವಿ ಕರೆ ನೀಡಿದರು.
ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮ­ದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ದೇಶದಲ್ಲಿ  ಜೀವನಾವಶ್ಯಕ ವಸ್ತು­ಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ಜೀವನ ದುಸ್ತರವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಇಲ್ಲದೇ ಪಟ್ಟಣ ಪ್ರದೇಶಕ್ಕೆ ವಲಸೆ ಹೋಗು­ವಂತಹ ಪರಿಸ್ಥಿತಿ ನಿರ್ಮಾಣ­ವಾಗಿದೆ.  ಕಾಂಗ್ರೆಸ್ ನ ದುರಾ­ಡಳಿತ ಮತ್ತು ಬ್ರಷ್ಟಾಚಾರದಿಂದ ದೇಶ ತತ್ತರಿಸಿಹೋಗಿದೆ.

ಭಯೋತ್ಪಾದನೆಯ ಕರಿ ನೆರಳು  ಉತ್ತರ ಭಾರತ ರಾಜ್ಯಗಳನ್ನು ದಾಟಿ ಶಾಂತಿಯುತ­ವಾದ ದಕ್ಷಿಣದ ಕರ್ನಾಟಕಕ್ಕೂ ಹೆಜ್ಜೆ ಇಟ್ಟಿರುವುದು ಮಾತ್ರವಲ್ಲದೇ ಮಲೆ­ನಾಡಿನ ಗ್ರಾಮೀಣ ಭಾಗಗಕ್ಕೂ ತನ್ನ ಕದಂಭ ಬಾಹುಗಳನ್ನು ಚಾಚುತ್ತಿದೆ. ಇದಕ್ಕೆ ಇತ್ತೀಚೆಗೆ ಕೊಪ್ಪದಲ್ಲಿ ದೊರೆತ ಬಾಂಬ್ ತಯಾರಿಕ ವಸ್ತುಗಳೇ ಸಾಕ್ಷಿ. ಕಾಂಗ್ರೆಸ್  ಭಯೋತ್ಪಾದನೆಯನ್ನು ತಡೆಹಿಡಿಯುತ್ತಿದೆಯೋ ಇಲ್ಲ ಪ್ರೋತ್ಸಾ­ಹಿ­ಸುತ್ತಿದೆಯೋ ಎಂಬ ಅನುಮಾನ­ಗಳು ಕಾಡತೊಡಗಿದೆ. ಯುವಕ ಯುವತಿಯರು ಉದ್ಯೋಗ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆ­ಯಿಂದಾಗಿ ನಕ್ಸಲಿಸಂಗೆ ಮಾರು­ಹೋಗುತ್ತಿದ್ದಾರೆ ಎಂದರು.

ದೇಶದ ಆರ್ಥಿಕತೆಯ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತಹ ಹಲವು ಬ್ರಷ್ಟಾಚಾರ ಪ್ರಕರಣಗಳು ಯುಪಿಎ ನೇತೃತ್ವದ ಸರ್ಕಾರದಿಂದ ನಡೆದು ಲಕ್ಷಾಂತರ ಕೋಟಿ ರೂಗಳನ್ನುಲೂಟಿ ಮಾಡ­ಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಆಡಳಿತಕ್ಕೆ ಬಂದ ಒಂದು ವರ್ಷದಲ್ಲಿಯೇ ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ವಾಪಾಸ್ ತರಲು ನಿರ್ಧರಿಸಲಾಗಿದೆ. ದೇಶಕ್ಕೆ ಸಮರ್ಥ ನಾಯಕತ್ವದ ಕೊರತೆ­ಯಿಂದಾಗಿ  ಹಲವು ಸಮಸ್ಯೆಗಳಿಗೆ ಜನತೆ ಬೆಲೆ ತೆತ್ತಬೇಕಾಗಿ ಬಂದಿದ್ದು ದುರ್ದೈವ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ  ಸರ್ಕಾರ ಕೇಂದ್ರ­ದಲ್ಲಿ ಅಸ್ತಿತ್ವಕ್ಕೆ ತರಲು ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.

ಮಲೆನಾಡು, ಬಯಲುಸೀಮೆ, ಕರಾವಳಿ ಪ್ರದೇಶ ಒಳಗೊಂಡು ಉಡುಪಿ–­ಚಿಕ್ಕಮಗಳೂರು ಕ್ಷೇತ್ರ ವೈಶಿಷ್ಟ್ಯತೆಯಿಂದ ಕೂಡಿದ್ದು  ಸಮಸ್ಯೆ­ಗಳ ಮಹಾಪೂರವೇ ಇದೆ. ಇವು­ಗಳನ್ನು ನಿವಾರಿಸಲು ಇಚ್ಚಾ ಶಕ್ತಿ ಅಗತ್ಯವಿದ್ದು, ಹಿಂದಿನ ಸಂಸದರ ಇಚ್ಚಾ ಶಕ್ತಿ ಕೊರತೆಯಿಂದಾಗಿ ಸಮಸ್ಯೆ ಹಾಗೇಯೇ ಉಳಿದಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಿಂದೆ ಇಂಧನ ಸಚಿವರಾಗಿ ನಿರ್ವಹಿಸಿದ ಕಾರ್ಯ ಎಲ್ಲರಿಗೂ ತಿಳಿದಿದೆ. ಈ ಕ್ಷೇತ್ರದ ಸಂಸದರಾಗಿ ಆಯ್ಕೆ ಮಾಡುವ ಮೂಲಕ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಹಾಡಲು ಅವರಿಗೆ ಅವ­ಕಾಶ ಕಲ್ಪಿಸಬೇಕೆಂದು ತಿಳಿಸಿದರು.

ದೇಶದ ಕುರಿತಂತೆ ಮಾತನಾಡಿದರೆ ಕೋಮುವಾದಿ ಹಣೆಪಟ್ಟಿ ಕಟ್ಟುವ  ಜಾತಿ–ಜಾತಿಗಳ ನಡುವೆ ಧರ್ಮ–ಧರ್ಮಗಳ ನಡುವೆ ವೈಶಮ್ಯ ಹುಟ್ಟಿ­ಹಾಕಿ ಓಟ್ ಬ್ಯಾಂಕ್ ರಾಜ­ಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಜನತೆ ತಿರಸ್ಕರಿಸಲಿದ್ದು ಬಿಜೆಪಿ ನೇತೃತ್ವದ ಸರ್ಕಾರ ರಚನೆಗೊಂಡು ಮೋದಿ ಈ ರಾಷ್ಟ್ರದ ಪ್ರಧಾನಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ, ಬಿಜೆಪಿ ಮುಖಂಡ­ರಾದ ಗೋಪಿಕೃಷ್ಣ, ಟಿ.ಎಲ್.­ರಮೇಶ್, ಟಿ.ಎಂ. ಬೋಜ­ರಾಜ್, ಕರಕುಚ್ಚಿ ಮೋಹನ್, ಸದಾ­ನಂದ, ವಿಜಯ್, ಶಿವಮೂರ್ತಿ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT