ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯೂಯಾರ್ಕ್‌ ಟೈಮ್ಸ್‌’ ವಿರುದ್ಧ ಮಾನನಷ್ಟ ನೋಟಿಸ್‌

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಲಂಡನ್‌ ಮೂಲದ, ಪಕ್ಷದ ಮುಖ್ಯಸ್ಥ ಅಲ್ತಫ್‌ ಹುಸೇನ್‌ ವಿರುದ್ಧ ಅವಮಾನಕರ ರೀತಿ­ಯಲ್ಲಿ ವರದಿ ಪ್ರಕಟಿಸಿದ್ದಕ್ಕಾಗಿ ಪಾಕಿ­ಸ್ತಾನದ ಎಂಕ್ಯುಎಂ ಪಕ್ಷವು ನ್ಯೂಯಾರ್ಕ್‌  ಟೈಮ್ಸ್‌ ವಿರುದ್ಧ ಒಂದು ಕೋಟಿ ಡಾಲರ್ ( ` 63 ಕೋಟಿ) ಮಾನನಷ್ಟ ನೋಟಿಸ್‌ ಜಾರಿಮಾಡಿದೆ.

‘ಇದು ಆಧಾರರಹಿತ ವರದಿ.  ಹುಸೇನ್‌ ಅವರ ಗೌರವಕ್ಕೆ ಚ್ಯುತಿ ಬಂದಿದೆ’ ಎಂದು ನೋಟಿಸ್‌ನಲ್ಲಿ  ಆರೋ­ಪಿ­­ಸಲಾಗಿದೆ. ಪತ್ರಿಕೆಯ ಸಂಪಾ­ದ­ಕರು, ಮುದ್ರಕರು ಮತ್ತು ಈ ವರದಿ ಬರೆದ ಪತ್ರಕರ್ತ ಡಿಕ್ಲೇನ್‌ ವಾಷ್‌ ಅವರಿಗೆ 7 ದಿನಗಳಲ್ಲಿ ಬೇಷರತ್‌ ಕ್ಷಮೆ ಕೇಳುವಂತೆ ಪಕ್ಷವು ಸೂಚಿಸಿದೆ.
 

ದಂಡ ಕಟ್ಟಿ ಇಲ್ಲವೇ ಕಾನೂನು ಕ್ರಮ ಎದು­ರಿಸಿ ಎಂದೂ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT