ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಣಾಮಕಾರಿ ಬೋಧನೆ ಅಗತ್ಯ’

Last Updated 20 ಡಿಸೆಂಬರ್ 2013, 9:58 IST
ಅಕ್ಷರ ಗಾತ್ರ

ಮಾನ್ವಿ: ಪ್ರಸ್ತುತ ಸಂದರ್ಭದಲ್ಲಿ ಆಂಗ್ಲ­ಭಾಷೆ ಜಾಗತಿಕ ಮಟ್ಟದಲ್ಲಿ ಪ್ರಾಮು­ಖ್ಯತೆ ಹೊಂದಿದ ಭಾಷೆಯಾಗಿದೆ.  ಪ್ರೌಢಶಾಲಾ ಹಂತದಲ್ಲಿಯೇ ಆಂಗ್ಲ ಭಾಷಾ ಶಿಕ್ಷಕರು ಉತ್ತಮ ಪೂರ್ವ ಸಿದ್ಧತೆಯೊಂದಿಗೆ ಮಕ್ಕಳಿಗೆ ಆಂಗ್ಲ ಭಾಷಾ ವಿಷಯವನ್ನು ಪರಿ­ಣಾಮ­ಕಾರಿಯಾಗಿ ಬೋಧಿಸುವುದು ಅವಶ್ಯ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯ ಹೇಳಿದರು.

ಗುರುವಾರ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸ­ಲಾಗಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ಆಂಗ್ಲ ಭಾಷಾ ಬೋಧಕರ ಎರಡು ದಿನಗಳ ಶೈಕ್ಷಣಿಕ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ವ್ಯಾಕರಣ, ಬರವಣಿಗೆ, ಸಂವಹನ ಹಾಗೂ ಭಾಷೆಯ ಉಚ್ಛಾರಣೆ ಕುರಿತು ಕಲಿಸಲು ಶಿಕ್ಷಕರು ಹೆಚ್ಚು ಮಹತ್ವ ನೀಡಬೇಕು. ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಆಂಗ್ಲ ಭಾಷೆ ಕಲಿಯುವುದು ಕಠಿಣ ಎನ್ನುವ ಮನೋಭಾವ ಬದಲಾಯಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬೆಂಗಳೂರಿನ ಆಂಗ್ಲಭಾಷಾ ತಜ್ಞ ಪ್ರೊ.ಡಿ.ಆರ್‌.ಶಶಿಧರ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವಪ್ಪ ಮಾನ್ವಿ, ಆಂಗ್ಲ ಭಾಷಾ ಬೋಧಕರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮಾರ್ಟಿನ್‌ ಅಮಲರಾಜ್‌, ತಾಲ್ಲೂಕು ಘಟಕ ಅಧ್ಯಕ್ಷ ಪ್ರಭುಲಿಂಗ ಹಿಡಕಲ್‌, ಗೌರವಾಧ್ಯಕ್ಷ ಹನುಮಂತ­ರಾವ್‌ ಕುಲಕರ್ಣಿ, ಉಪಾಧ್ಯಕ್ಷ ಲಿಂಗರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT