ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಶು ಸಂಗೋಪನೆಗೆ ಉತ್ತೇಜನ ಮುಖ್ಯ’

Last Updated 20 ಡಿಸೆಂಬರ್ 2013, 6:37 IST
ಅಕ್ಷರ ಗಾತ್ರ

ತಿಪಟೂರು: ಪಶು ಸಂಗೋಪನೆಗೆ ಉತ್ತೇಜನ ನೀಡಲು ರೈತರಿಗೆ ಪೂರಕ ಸವಲತ್ತುಗಳನ್ನು ಸಮರ್ಪಕವಾಗಿ ದೊರಕಿಸಬೇಕು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ಬಿದರೆಗುಡಿ ಕೃಷಿ ವಿಜ್ಞಾನ ಕೇಂದ್ರ, ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ತಾಲ್ಲೂಕಿನ ಮಾದಿ­ಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಪಶು ಆರೋಗ್ಯ ತಪಾ­ಸಣಾ ಶಿಬಿರ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪಶು ಸಂಪತ್ತನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಂ.ಸುಜಿತ್, ಕೊನೆಹಳ್ಳಿ ಜಾನುವಾರು ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಜಯಣ್ಣ, ಡಾ. ವಿ.ಎಸ್.ಲತಾಮಣಿ, ಜಾನುವಾರು ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಪ್ರಾಣಿಶಾಸ್ತ್ರ ವಿಭಾಗದ ವಿಷಯ ತಜ್ಞ ಡಾ.ಶಿವಪ್ಪ ನಾಯಕ, ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ಜಿ.ಸಿದ್ದಲಿಂಗಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಾದಿಹಳ್ಳಿ ಪ್ರಕಾಶ್, ತಾ.ಪಂ. ಸದಸ್ಯೆ ಶಿವಗಂಗಮ್ಮ, ಮತ್ತಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಮಲ್ಲೇಶ್, ಸದಸ್ಯರಾದ ವಿಶ್ವನಾಥಯ್ಯ, ವೆಂಕಟೇಶ್, ಪಶುವೈದ್ಯಾಧಿಕಾರಿ­ಗಳಾದ ಮಹೇಶ್, ಪರವೀಸ್ ಪಾಷಾ, ಎಂ.ಪಿ.ಶಶಿದರ್, ಮಿಥುನ್, ಮೃತ್ಯುಂಜಯ, ನಂದೀಶ್, ಅಶೋಕ್ ಮತ್ತಿತರರು ಇದ್ದರು.

ಹೇಮೆ ನೀರು: ಶಾಸಕರ ವಿರುದ್ಧ ಟೀಕೆ
ತಿಪಟೂರು: ಹೊನ್ನವಳ್ಳಿ ಏತ ನೀರಾವರಿ ವ್ಯಾಪ್ತಿ ಕೆರೆಗಳಿಗೆ ನಿಗದಿಯಂತೆ ನೀರು ಹರಿಸಲಾಗಿದೆ ಎಂದು ಕುಳಿತಲ್ಲೇ ಅಂಕಿ–ಅಂಶ ನೀಡಿರುವ ಶಾಸಕ ಕೆ.ಷಡಕ್ಷರಿ ಸ್ಥಳಕ್ಕೆ ತೆರಳಿ ವಾಸ್ತವ ಸ್ಥಿತಿ ಅರಿಯಲಿ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಚ್.ಎನ್.ಗಂಗಾಧರ್ ಒತ್ತಾಯಿಸಿದ್ದಾರೆ.

ಕೆರೆಗಳಿಗೆ ನಾಲ್ಕೂವರೆ ತಿಂಗಳು ನೀರು ಹರಿಸಲಾಗಿದೆ ಎಂದು ಶಾಸಕರು ಸುಳ್ಳು ಹೇಳಿದ್ದಾರೆ. ಅಂಕಿ–ಅಂಶಗಳ ಮೂಲಕ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗದ ಶಾಸಕರು ಅಂಕಿ–ಅಂಶದ ನೆಪದಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT