ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರದರ್ಶಕತೆ ಕೊರತೆ ಉದ್ಯಮಕ್ಕೆ ಸಮಸ್ಯೆ’

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿಗಳು ಒಂದು ಪ್ರದೇಶದಲ್ಲಿ ಬಂಡವಾಳ ತೊಡಗಿಸುವಾಗ ಮುಖ್ಯವಾಗಿ ಗುಣಮಟ್ಟ, ವೆಚ್ಚ ಮತ್ತು ಸರಬರಾಜು ವ್ಯವಸ್ಥೆ ಸೌಲಭ್ಯಗಳು ಇವೆಯೇ ಎಂದು ಪರಿಶೀಲಿಸುತ್ತಾರೆ. ಆದರೆ, ಈ ಭಾಗದಲ್ಲಿ ಕಂಡು ಬರುವ ಮುಖ್ಯ ಸಮಸ್ಯೆ ಎಂದರೆ, ವಾಣಿ ಜ್ಯೋದ್ಯಮ ಚಟುವಟಿಕೆ ಸುಲಭ ಸಾಧ್ಯ ವಾಗದೇ ಇರುವುದು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕೊರತೆ ಇದೆ ಎಂದು ಕಿರ್ಲೋಸ್ಕರ್ ಸಿಸ್ಟಮ್ಸ್ ಲಿ.ನ ಅಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಹೇಳಿದರು.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ನಗರದಲ್ಲಿ ಆಯೋಜಿಸಿದ್ದ ‘ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಾವೇಶ-; ವಿಷನ್ ೨೦೨೦’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ನಕಾರಾತ್ಮಕ ಅಂಶಗಳ ನಡುವೆಯೂ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಾವಂತರ ಲಭ್ಯತೆ, ಉತ್ತಮ ತರಬೇತಿ ಸಂಸ್ಥೆಗಳು, ಉದ್ಯಮ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ದೊಡ್ಡದಾದ ಮಾರುಕಟ್ಟೆ ಸಕಾರಾತ್ಮಕ ಅಂಶಗಳಾಗಿವೆ ಎಂದರು. ‘ಸಿಐಐ’ ಕರ್ನಾಟಕ ಘಟಕ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT