ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾನೊ ರೈಲು’

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾನೊ ರೈಲು ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಉದ್ದೇಶಿಸಿದೆ ಎಂದು ಮೂಲಸೌಕರ್ಯ ಸಚಿವ ಸಂತೋಷ್‌ ಲಾಡ್‌ ಹೇಳಿದರು.

ಸರ್ಕಾರಿ, ಖಾಸಗಿ ಸಹಭಾಗಿತ್ವದ ಈ ಯೋಜನೆಗೆ ಶೀಘ್ರ ಸ್ಪಷ್ಟ ರೂಪ ನೀಡಲಾಗುವುದು ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಲೇಷ್ಯಾದ ಕಂಪೆನಿಯೊಂದು ಬೆಂಗಳೂರು, ಹುಬ್ಬಳ್ಳಿ – ಧಾರವಾಡ ದಲ್ಲಿ ಮಾನೊ ಸೇವೆ ಆರಂಭಿಸಲು ಮುಂದೆ ಬಂದಿದೆ. ಇದರ ರೂಪುರೇಷಗಳನ್ನು ಅಂತಿಮಗೊಳಿಸಿ ಆಸಕ್ತಿ ವ್ಯಕ್ತಪಡಿಸುವಿಕೆಗೆ ಬಹಿರಂಗ ಆಹ್ವಾನ ನೀಡಲಾಗುವುದು ಎಂದರು.

ಮೊದಲ ಹಂತದಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ – ಧಾರವಾಡದಲ್ಲಿ ಮಾನೊ ರೈಲು ಸೇವೆ ಆರಂಭಿಸುವ ಉದ್ದೇಶವಿದೆ.  ಮಾನೊ ರೈಲು ಯೋಜನೆಗೆ ಒಂದು ಕಿ.ಮೀ.ಗೆ ರೂ.80 ರಿಂದ ರೂ.100 ಕೋಟಿ ವೆಚ್ಚವಾಗುವ ಅಂದಾಜಿದೆ. ಬೆಂಗಳೂರಿನಲ್ಲಿ 35 ಕಿ.ಮೀ., ಹುಬ್ಬಳ್ಳಿ – ಧಾರವಾಡದಲ್ಲಿ 22 – 25 ಕಿ.ಮೀ. ಮಾನೊ ರೈಲು ಸೇವೆ ಆರಂಭಿಸುವ ಬಗ್ಗೆ ಚರ್ಚೆ ನಡೆದಿದೆ ಎಂದರು.

ವಿಮಾನ ನಿಲ್ದಾಣ ವ್ಯರ್ಥ: ಶಿವಮೊಗ್ಗ, ವಿಜಾಪುರ, ಹಾಸನ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಕಾರ್ಯ­ಸಾಧುವಲ್ಲ ಎಂದು ಖಾಸಗಿ ಸಂಸ್ಥೆಗಳು ತಿಳಿಸಿವೆ. ಹೀಗಾಗಿ ಮುಂದೆ ಏನು ಮಾಡಬೇಕು ಎಂದು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲು ಪತ್ರ ಬರೆಯಲಾಗಿದೆ ಎಂದರು
ಈ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಗತ್ಯವಿರುವ ಸಂಪ­ನ್ಮೂಲ­ಗಳ ಕ್ರೋಡೀಕರಣಕ್ಕೆ ಸಂಬಂಧ­ಪಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಪ್ರತ್ಯೇಕ ಸೆಸ್‌ ಸಂಗ್ರಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಪ್ರಗತಿಯಲ್ಲಿರುವ 14 ರೈಲ್ವೆ ಯೋಜನೆಗಳ ಪೈಕಿ ಎರಡು ಪೂರ್ಣ­ಗೊಂಡಿವೆ. ಇನ್ನುಳಿದ 12 ಯೋಜನೆ­ಗಳು ಕಾಲಮಿತಿ­ಯಲ್ಲಿ ಪೂರ್ಣಗೊಳ್ಳ­ಲಿವೆ. ಈ ಯೋಜನೆಗಳಿಗೆ ರಾಜ್ಯದ ಪಾಲಿನ ಹಣವನ್ನು ನೀಡಲಾಗುವುದು ಎಂದು ತಿಳಿಸಿದರು.

ಹೊಸ ವಾರ್ತಾ ನೀತಿ
ಬೆಂಗಳೂರು:
ಸರ್ಕಾರದ ಎಲ್ಲ ಜಾಹೀರಾತುಗಳನ್ನು ವಾರ್ತಾ ಇಲಾಖೆಯ ಮೂಲಕ ನೀಡಲು ಅವಕಾಶ ಕಲ್ಪಿಸಿ ಕೊಡುವ ನೂತನ ವಾರ್ತಾ ನೀತಿಯನ್ನು ಒಂದು ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದು ವಾರ್ತಾ ಸಚಿವರೂ ಆದ  ಸಂತೋಷ್‌ ಲಾಡ್‌ ತಿಳಿಸಿದರು.

ವಾರ್ತಾ ಇಲಾಖೆಯ ಡಿಜಿಟ­ಲೀಕರಣ, ಆನ್‌ಲೈನ್‌, ಟ್ವಿಟರ್‌, ಎಸ್‌ಎಂಎಸ್‌ ಬಳಕೆಗೆ ಉತ್ತೇಜನ ನೀಡುವುದು ಇತ್ಯಾದಿ ಅಂಶಗಳು ಹೊಸ ನೀತಿಯಲ್ಲಿ ಸೇರಿರುತ್ತವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT