ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಎಚ್‌.ಡಿ ತಪ್ಪು’

Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ತುಮಕೂರು: ‘ತುಮಕೂರು ವಿಶ್ವ­ವಿದ್ಯಾ­ಲಯದ ನಿರ್ಗಮಿತ ಕುಲಪತಿ ಡಾ.ಎಸ್‌.ಸಿ. ­ಶರ್ಮಾ ಅವಧಿಯಲ್ಲಿ  6 ಮಂದಿಗೆ ನೋಂದಣಿಯಾದ ಎಂಟು ತಿಂಗಳಲ್ಲಿಯೇ ಯುಜಿಸಿ ನಿಯಮಾವಳಿ ಉಲ್ಲಂಘಿಸಿ ಡಾಕ್ಟರೇಟ್‌ (ಪಿಎಚ್‌.ಡಿ)  ನೀಡಿರುವುದು ತಪ್ಪು. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆ­ದಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ವಿಶ್ವ­ವಿದ್ಯಾಲಯ ಕುಲಪತಿ ಪ್ರೊ.ಎ.ಎಚ್‌.­ರಾಜಾಸಾಬ್‌ ತಿಳಿಸಿದರು.

  ‘ಅರೆಕಾಲಿಕ ಸಂಶೋಧನೆಯಾದರೆ 36 ತಿಂಗಳಾಗಿರಬೇಕು. ಪೂರ್ಣಕಾಲಿಕ ಸಂಶೋಧನೆ­ಯಾದರೆ ಎರಡು ವರ್ಷ­ವಾಗಿರಬೇಕು ಎಂದು ಯುಜಿಸಿ ನಿಯ­ಮಾ­­ವಳಿ ರೂಪಿಸಿದೆ. ಆದರೆ, ಈ ಆರು ಮಂದಿ ವಿಷಯದಲ್ಲಿ ನಿಯಮ ಉಲ್ಲಂಘಿ­ಸಲಾಗಿದೆ ಇದು ತಪ್ಪು’ ಎಂದು ಘಟಿಕೋತ್ಸವ ಸಂಬಂಧ ವಿವರ ನೀಡಲು ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

 ‘ಸಿಂಡಿಕೇಟ್‌, ಶೈಕ್ಷಣಿಕ ಪರಿಷತ್ತು, ಕುಲಾಧಿಪತಿಯೂ ಆದ ರಾಜ್ಯ­ಪಾಲರ ಅನುಮತಿ ಪಡೆದು ಪಿಎಚ್‌.ಡಿ ತಾತ್ಪೂರ್ತಿಕ ­­ಪದವಿ ಪ್ರಮಾಣ (ಪಿಡಿಸಿ) ಪತ್ರವನ್ನೂ ವಿತ­ರಿಸಲಾಗಿದೆ. ಭಾನುವಾರದ  ಘಟಿ­ಕೋತ್ಸವ­ದಲ್ಲಿ  ಆ ಆರು ಮಂದಿಗೆ ಪದವಿ ಪ್ರಮಾಣ ಪತ್ರ ತಡೆಯಲು ಸಾಧ್ಯವಾಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT