ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಬಿಎಸ್‌’ ಸಾಧನೆ ಮಾದರಿ

Last Updated 24 ಸೆಪ್ಟೆಂಬರ್ 2013, 6:52 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಡಾ. ಪಿ.ಬಿ. ಶ್ರೀನಿವಾಸ್‌ ಅವರು ಹಾಡುಗಾರಿಕೆಯಲ್ಲಿ ತಮ್ಮದೇ ಆದ ವಿಶೇಷ ಹೆಜ್ಜೆಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಸಾಧನೆ ಎಲ್ಲರಿಗೂ ಮಾದರಿ ಎಂದು ಚಿತ್ರಸಾಹಿತಿ ಸಿ.ವಿ. ಶಿವಶಂಕರ್‌ ಬಣ್ಣಿಸಿದರು.

ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ರೋಟರಿ ಸಂಸ್ಥೆ, ರೋಟರಿ ಮಿಡ್‌– ಟೌನ್‌ ಭಾನುವಾರ ಏರ್ಪಡಿಸಿದ್ದ ಪಿಬಿಎಸ್‌ ಸ್ಮರಣೆ ಗಾನಸ್ವರಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎ.ಎಸ್‌. ಪ್ರಸನ್ನಕುಮಾರ್‌ ಮತ್ತು ತಂಡದವರು ಡಾ.ಪಿ.ಬಿ.ಶ್ರೀನಿವಾಸ್‌ ಅವರ ಗೀತೆಗಳನ್ನು ಹಾಡಿದರು. ರಮೇಶ್‌ಬಾಬು  ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಕೆ. ಪ್ರಕಾಶ್‌, ಮೈಸೂರು ಆಕಾಶವಾಣಿ ಹಿರಿಯ ಉದ್ಘೋಷಕ ಎಂ. ಶಂಕರಪ್ಪ, ಸಹಾಯಕ ನಿರ್ದೇಶಕಿ ಜಿ. ರಾಜಲಕ್ಷ್ಮೀ ಶ್ರೀಧರ್‌, ಕನ್ಣೂರು ಗೋವಿಂದಾಚಾರಿ, ಮಿಡ್‌–ಟೌನ್‌ ಅಧ್ಯಕ್ಷ ಬಸವಲಿಂಗಪ್ಪ, ರೋಟರಿ ಅಸಿಸ್ಟೆಂಟ್‌ ಗವರ್ನರ್‌ ಜಗದೀಶ್‌, ಕೆ. ಪುಟ್ಟರಸಶೆಟ್ಟಿ, ಜೋನಲ್‌ ಲೆಫಿ್ಟಿನೆಂಟ್‌ ಎಂ. ನಂಜುಂಡಯ್ಯ, ಶಿವಾನಂದ್, ಬಸವರಾಜು, ಮಹಾದೇವ, ನಾಗರಾಜು, ಪ್ರವೀಣ್‌, ಕುಮಾರಸ್ವಾಮಿ, ಅರುಣ್‌, ನರೇಂದ್ರನಾಥ್‌, ಜಾನ್‌ಪೀಟರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT