ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರ ಕಾರ್ಮಿಕರನ್ನು ಗೌರವಿಸಿ’

Last Updated 24 ಸೆಪ್ಟೆಂಬರ್ 2013, 7:06 IST
ಅಕ್ಷರ ಗಾತ್ರ

ಸರಗೂರು: ಪೌರಕಾರ್ಮಿಕರ ಸೇವೆ ಅಮೂಲ್ಯ, ಇವರಿಗೆ  ಗೌರವ ನೀಡು­ವುದು ನಮ್ಮಕರ್ತವ್ಯ, ಮನುಷ್ಯ ಬದು­ಕಲು ವೃತ್ತಿ ಅವಶ್ಯಕ, ನಿಮ್ಮ ದುಡಿಮೆ­ಯಲ್ಲಿ ನಿಮ್ಮ ಮಕ್ಕಳ ಭವಿಷ್ಯ ಇದೆ. ವೃತ್ತಿ ಯಾವುದೇ ಆಗಲಿ ಅದನ್ನು ಗೌರವಿಸಿ  ಎಂದು ಶಾಸಕ ಚಿಕ್ಕಮಾದು ತಿಳಿಸಿದರು.

ಸರಗೂರು ಪಟ್ಟಣ ಪಂಚಾಯಿತಿ­ಯಲ್ಲಿ ಸೋಮವಾರ ಪೌರ ಸೇವಾ ನೌಕರರ ಸಂಘದ ವತಿಯಿಂದ ಪೌರ­ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು. ಸರ್ಕಾರಿ ನೌಕರರಿಗೆ ಸಿಗುವ ಆರೋಗ್ಯ ಸೌಲಭ್ಯ ಪೌರಕಾರ್ಮಿಕ ಕುಟುಂಬಗಳಿಗೂ ಸಿಗಬೇಕು ಎಂದರು.

ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯ­ನಿರ್ವಹಿಸುವ ಎಸ್‌.ಆರ್‌. ರಾಜ, ಮಾಗಾಳಮ್ಮ, ಸುಬ್ರಹ್ಮಣ್ಯ, ರಮೇಶ್‌, ಕಲೀಲ್,ರಂಗನಾಥ, ಕಣ್ಣಮ್ಮ, ನಂಜಮ್ಮ ಈ 6 ಜನ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ರಾಜ, ಮಾಗಾಳಿ ಮತ್ತು ರಂಗ ಈ ಮೂವರಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪದ್ಮಾ ಶ್ರೀನಿವಾಸ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುನಂದಾ ರಾಜ್‌, ನಾಗರಾಜರಾಮ, ರಮೇಶ್‌, ಬೆಳಗಮ್ಮ ರಂಗಯ್ಯ, ಎಸ್‌.ಎನ್‌. ಜಯರಾಮ್‌, ರೂಪಾ ನೇಮೀಶ್‌, ಪ.ಪಂ. ಮಾಜಿ ಸದಸ್ಯ ಶ್ರೀನಿವಾಸ್‌, ರಂಗಯ್ಯ, ಮುಖ್ಯಾಧಿಕಾರಿ ಕರಿಬಸವಯ್ಯ, ಆರೋಗ್ಯಾ­ಧಿಕಾರಿ ನೇತ್ರಾವತಿ, ಎಂಜನೀಯರ್‌ ಸತ್ಯ­ಕುಮಾರ್‌, ಪ್ರಕಾಶ್‌, ಲೋಕೇಶ್, ವಿನೋದ್‌, ಬಸವರಾಜು, ಪಳನಿಸ್ವಾಮಿ, ಸೌಮ್ಯ, ಪ್ರಭಾವತಿ, ಸರಗೂರು ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ  ಪಿ.ರವಿ. ಎಂ.ಸಿ.ದೊಡ್ಡನಾಯಕ, ಚಾ. ನಂಜುಂಡ­ಮೂರ್ತಿ, ನರಸಿಂಹೇಗೌಡ, ವಾಹನ ಚಾಲಕ ಸಂಘದ ಅಧ್ಯಕ್ಷ ಲಿಂಗರಾಜು,  ನಂಜುಂಡಶೆಟ್ಟಿ  ಮತ್ತು ಪೌರಕಾರ್ಮಿಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT