ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಗತಿಗೆ ನಾರಾಯಣ ಗುರುಗಳ ಆದರ್ಶ ಮುಖ್ಯ’

Last Updated 24 ಸೆಪ್ಟೆಂಬರ್ 2013, 9:51 IST
ಅಕ್ಷರ ಗಾತ್ರ

ಬ್ರಹ್ಮಾವರ: ಸಮಾಜದ ಏಳಿಗೆಗೆ ನಾರಾಯಣ ಗುರು­ಗಳ ತತ್ವಾದರ್ಶವನ್ನು ಬೆಳೆಸಿಕೊಂಡು ಎಲ್ಲರನ್ನೂ ಸಮಾನತೆಯಿಂದ ನೋಡಬೇಕಾಗಿದೆ ಎಂದು ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಕೊಕ್ಕರ್ಣೆ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾಸಂಘದ ಆಶ್ರಯದಲ್ಲಿ ಭಾನುವಾರ ನಡೆದ 159ನೇ ಗುರುಜಯಂತಿ ಸಮಾರಂಭದಲ್ಲಿ ಜನರೇಟರ್ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಬಿಲ್ಲವ ಸೇವಾಸಂಘದ ಗೌರವಾಧ್ಯಕ್ಷ ಬಿ.ಎನ್‌.ಶಂಕರ ಪೂಜಾರಿ, ಮುಂಬಯಿ ಉದ್ಯಮಿ ಬಾಬು ಶಿವ ಪೂಜಾರಿ, ಕಟ್ಟಡ ಸಮಿತಿ ಅಧ್ಯಕ್ಷ  ಕೆ.ವೆಂಕಟೇಶ ಸುವರ್ಣ, ಕೊಕ್ಕರ್ಣೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸಂಜೀವ ಮಾಸ್ತರ್, ಕೋಶಾಧಿಕಾರಿ ಅಲೆಯ ಬಾಸ್ಕರ ಪೂಜಾರಿ, ಯುವ ವೇದಿಕೆ ಅಧ್ಯಕ್ಷ ಜಯರಾಮ ಪೂಜಾರಿ, ಮಂದಾರ್ತಿ ಮಹಿಳಾ ವೇದಿಕೆ ಸಂಚಾಲಕಿ ಬೇಬಿ ಎಸ್‌ ಪೂಜಾರಿ, ಕೊಕ್ಕರ್ಣೆ ಮಹಿಳಾ ವೇದಿಕೆ ಅಧ್ಯಕ್ಷೆ  ಲಲಿತಾಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತಾ.ಪಂ ಸದಸ್ಯೆ ಬೇಬಿ ಎಸ್ ಪೂಜಾರಿ, ಜ್ಯೋತಿ ಎಸ್ ಪೂಜಾರಿ, ನಾಲ್ಕೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಪಾದ್ಯಕ್ಷೆ ಶೋಭಾ ಕೆ ಪೂಜಾರಿ, ಸದಸ್ಯೆ ಲೀಲಾವತಿ ಬಿ ಕೋಟ್ಯಾನ್‌ ಅವರನ್ನು  ನಾರಾಯಣಗುರು ಬಿಲ್ಲವ ಸೇವಾಸಂಘದ ವತಿಯಿಂದ ಸಚಿವರು ಸನ್ಮಾನಿಸಿದರು.

ಸಂಘದ ಅಧ್ಯಕ್ಷ ಸಂಜೀವ ಮಾಸ್ತರ್ ಸ್ವಾಗತಿಸಿದರು. ಕೋಶಾಧಿಕಾರಿ ಎ.ಭಾಸ್ಕರ ಪೂಜಾರಿ ವಂದಿಸಿದರು. ಕೆ.ಸುರೇಶ್ಚಂದ್ರಬಾಬು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT