ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಅನಾವರಣ’

26ರಿಂದ ಫಲಪುಷ್ಪ ಪ್ರದರ್ಶನ
Last Updated 8 ಜನವರಿ 2014, 9:20 IST
ಅಕ್ಷರ ಗಾತ್ರ

ರಾಮನಗರ: ಕೆಂಗಲ್‌ ಬಳಿಯ ವಂದಾ ರಗುಪ್ಪೆಯ ತೋಟಗಾರಿಕಾ ಸಸ್ಯಕ್ಷೇ ತ್ರದಲ್ಲಿ ಇದೇ 26 ರಿಂದ 29ರವರೆಗೆ ಫಲಪುಷ್ಪ ಪ್ರದ ರ್ಶನವನ್ನು ಆಯೋ ಜಿಸಲು ತೋಟಗಾರಿಕಾ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ನಿರ್ಧರಿ ಸಿದೆ.

ಈ ಸಂಬಂಧ ಜಿಲ್ಲಾ ಪಂಚಾಯಿತಿ ಭವನದಲ್ಲಿ ಜಿ.ಪಂ ಅಧ್ಯಕ್ಷ ಎಚ್‌.ಸಿ. ರಾಜಣ್ಣ ಮತ್ತು ಸಿಇಒ ಡಾ.ಎಂ.ವಿ. ವೆಂಕಟೇಶ್‌ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪ್ರದರ್ಶನದಲ್ಲಿ ರೈತರಿಗೆ ಉಪ ಯುಕ್ತ ಮಾಹಿತಿಗಳನ್ನು ನೀಡುವ ಜೊತೆಗೆ ಕೃಷಿ, ತೋಟಗಾರಿಕೆ ಕ್ಷೇತ್ರ ದಲ್ಲಿನ ತಂತ್ರಜ್ಞಾನ ಆಧುನಿಕತೆ ಬಗ್ಗೆಯೂ ಮಳಿಗೆಗಳನ್ನು ತೆರೆದು ಪ್ರಾತ್ಯಕ್ಷಿಕೆ ಮೂಲಕವೂ ಸಮಗ್ರ ಮಾಹಿತಿ ನೀಡಲು ಸಭೆಯಲ್ಲಿ ನಿರ್ಣ ಯಿಸಲಾಯಿತು.

ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಅಭಿವೃದ್ಧಿ ಚಿತ್ರಣ, ಜೀವಾಮೃತ, ಭೂ ಚೇತನ ಯೋಜನೆಗಳು, ತೋಟಗಾರಿಕೆ ಇಲಾಖೆ ವತಿಯಿಂದ ಇಲಾಖೆಯ ಎಲ್ಲಾ ಯೋಜನೆಗಳ ಮಾಹಿತಿ, ರೇಷ್ಮೆ ಇಲಾಖೆ ಯಿಂದ ನರೇಗಾದಡಿ ಕೈಗೊ ಳ್ಳುತ್ತಿರುವ ಕಾರ್ಯಕ್ರಮಗಳು, ಜಲ ಸಂಪನ್ಮೂಲ ಇಲಾಖೆಯ ವತಿಯಿಂದ ಭೂಮಿ ಮಟ್ಟ, ಕೃಷಿ ಹೊಂಡ, ಪುನರ್ ಜೀವನ ಗೊಳಿಸುವ ಹೊಂಡ ನಿರ್ಮಾಣ, ಪಶು ಸಂಗೋಪನೆ ಇಲಾಖೆ ವತಿಯಿಂದ ಕುರಿ ಶೆಡ್, ಕೋಳಿ ಶೆಡ್, ದನದ ಕೊಟ್ಟಿಗೆ, ಜೇನು ಸಾಕಾಣಿಕೆ, ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲು ನಿರ್ಧರಿಸಲಾಯಿತು. 

ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ಸಿ.ರಾಜಣ್ಣ ಮಾತನಾಡಿ, ರೈತರಿಗೆ ಎಲ್ಲಾ ಇಲಾಖೆಗಳಿಂದ ದೊರಕುವ ಸೌಲಭ್ಯಗಳ ಮಾಹಿತಿ ನೀಡಲು ಕೈಪಿಡಿ ಕರಪತ್ರಗಳನ್ನು ಮುದ್ರಿಸಿ ಹಂಚುವಂತೆ ಸಲಹೆ ನೀಡಿದರು.

‘ಅಣಬೆ ಬೇಸಾಯಕ್ಕೆ ಹೆಚ್ಚಿನ ಹೊತ್ತು ನೀಡಬೇಕಿರುವುದರಿಂದ ಫಲಪುಷ್ಪ ಪ್ರದರ್ಶನದಲ್ಲಿ ಹೆಚ್ಚಿನ ಪ್ರಚಾರ ಪಡಿಸಲು ತಿಳಿಸಿದರಲ್ಲದೆ, ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಲು  ತಾಲ್ಲೂಕು ಮಟ್ಟ ದಲ್ಲೂ ಸಭೆ ನಡೆಸಿ ಸಾರ್ವಜನಿಕರನ್ನು, ರೈತರನ್ನು ಆಹ್ವಾನಿಸಿ’ ಎಂದು ಹೇಳಿದರು.

ಜಿ.ಪಂ ಸಿಇಒ ಡಾ. ಎಂ.ವಿ.ವೆಂಕ ಟೇಶ್ ಮಾತನಾಡಿ, ‘ಮೊದಲ ಎರಡು ಪ್ರಗತಿ ಪರ ರೈತರು ಹಾಗೂ ಕೃಷಿ -ತೋಟಗಾರಿಕೆ ತಜ್ಞರಿಂದ ಸಂವಾದ ಕಾರ್ಯಕ್ರಮ ಗಳನ್ನು ಏರ್ಪಡಿಸ ಲಾಗುವುದು. ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು’ ಎಂದು ತಿಳಿಸಿದರು.

ಸಭೆಯಲ್ಲಿ ತೋಟಗಾರಿಕಾ ಇಲಾ ಖೆಯ ಜಿಲ್ಲಾ ಉಪನಿರ್ದೇಶಕಿ  ಎಚ್.ಎನ್. ಪ್ರೇಮಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಣ್ಣಯ್ಯ, ರೇಷ್ಮೆ ಉಪ ನಿರ್ದೆಶಕ ಲಕ್ಷ್ಮೀಪತಿ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿ ರ್ದೇಶಕಿ ಡಾ. ಎಸ್.ಎಂ.ಚಂದ್ರ, ಜಿಲ್ಲಾ ತೋಟಗಾರಿಕಾ ಸಂಘದ ಸದಸ್ಯರಾದ ಕಾಂತರಾಜ್ ಪಾಟೇಲ್, ಪುಟ್ಟಸ್ವಾಮಿ, ನಾರಾಯಣಪ್ಪ, ಪ್ರಾಣೇಶ್, ಚಿಕ್ಕವೀರೇಗೌಡ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT