ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಎಸ್‌ವೈ ಅಭಿವೃದ್ಧಿ ಕಾರ್ಯ ಮರೆಯುವಂತಿಲ್ಲ’

ಯಾದಗಿರಿ: ಬಿಜೆಪಿ ಸೇರ್ಪಡೆಗೆ ಕೆಜೆಪಿ ಕಾರ್ಯಕರ್ತರ ನಿರ್ಧಾರ
Last Updated 9 ಜನವರಿ 2014, 6:26 IST
ಅಕ್ಷರ ಗಾತ್ರ

ಯಾದಗಿರಿ: ‘ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.­ಯಡಿಯೂ­ರಪ್ಪ­ನವರು ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳನ್ನು ಜನತೆ ಮರೆ­ಯುವಂತಿಲ್ಲ’ ಎಂದು ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ ಹೇಳಿದರು.

ಬುಧವಾರ ನಗರದ ಕೆಜೆಪಿ ಕಚೇರಿಯಲ್ಲಿ ನಡೆದ ಯಾದಗಿರಿ ಹಾಗೂ ಗುರುಮಠಕಲ್ ಮತಕ್ಷೇತ್ರದ ಕೆಜೆಪಿ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಡಿಯೂರಪ್ಪನವರ ಇಚ್ಛಾಶಕ್ತಿ­ಯಿಂದಲೇ ಯಾದಗಿರಿ ನೂತನ ಜಿಲ್ಲೆ­ಯಾಗಿ ಅಸ್ತಿತ್ವಕ್ಕೆ ಬಂದಿದೆ. ಅಲ್ಲದೇ ತಕ್ಕ ಮಟ್ಟಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಿತು ಎಂದರು.

ರಾಜ್ಯ ಹಾಗೂ ದೇಶದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಮ್ಮ ನಾಯಕ ಯಡಿಯೂರಪ್ಪ­ನವರು, ಬಿಜೆಪಿ ಸೇರ್ಪಡೆಗೆ ನಿರ್ಧಾರ ಕೈಗೊಂಡಿದ್ದಾರೆ. ಉಭಯ ಮತ­ಕ್ಷೇತ್ರದ ಕಾರ್ಯಕರ್ತರ ಗೌರವ ಹಾಗೂ ಅಭಿಪ್ರಾಯಗಳನ್ನು ಮೊದಲಿ­ನಿಂದಲೂ ಮುದ್ನಾಳ ಸಹೋದರರು ಗೌರವಿಸುತ್ತ ಬಂದಿದ್ದೇವೆ. ನಿಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸಿ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಬಿಜೆಪಿ ನಾಯಕರಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದ ಯಡಿಯೂ­ರಪ್ಪ ಬಿಜೆಪಿ ತೊರೆದು ಕೆಜೆಪಿ ಪಕ್ಷವನ್ನು ಸ್ಥಾಪಿಸಿದರು. ಇದರ ಪರಿಣಾಮ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮತ­ಗಳ ವಿಭಜನೆಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು. ನಂತರ ದಿನಗಳಲ್ಲಿ ಕಾಂಗ್ರೆಸ್‌ ಜನ­ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸು­ವಲ್ಲಿ ವಿಫಲವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 10 ವರ್ಷಗಳಲ್ಲಿ ನಡೆಸಿದ ಹಲವಾರು ಭ್ರಷ್ಟಾಚಾರ ಹಗರಣಗಳಿಂದ ಜನತೆ ತತ್ತರಿಸಿ ಬದಲಾವಣೆಗಾಗಿ ಬಿಜೆಪಿ­ಯತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಕೆಜೆಪಿ ಮುಖಂಡ ವೆಂಕಟರಡ್ಡಿ ಮುದ್ನಾಳ ಮಾತನಾಡಿ, ‘ಅಧಿಕಾರ ಇರಲಿ ಬಿಡಲಿ, ನಾವು ಎರಡೂ ಮತಕ್ಷೇತ್ರದ ಕಾರ್ಯಕರ್ತರ ಹಾಗೂ ಜನರ ಸಮಸ್ಯೆಗಳಿಗೆ ಮೊದಲಿನಿಂದಲೂ ಪ್ರಾಮಾಣಿಕವಾಗಿ ಹೋರಾಟ ಮಾಡುವ ಮೂಲಕ ಪರಿಹಾರ ದೊರ­ಕಿಸಿ­ಕೊಟ್ಟಿದ್ದೇವೆ’ ಎಂದು ಹೇಳಿದರು.
ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಕೆ.ಎಂ.ಎಫ್‌ ಮಾಜಿ ಅಧ್ಯಕ್ಷ ಸಿದ್ದಣ­ಗೌಡ ಕಾಡಂನೋರ್ ಮಾತನಾಡಿ­ದರು. ಉಭಯ ಮತಕ್ಷೇತ್ರದ ಕಾರ್ಯಕರ್ತರು ಮಾತನಾಡಿ, ಬಿಜೆಪಿ ಪಕ್ಷ ಸೇರ್ಪಡೆಯಾಗುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ­ರಾದ ರಾಮರಡ್ಡಿಗೌಡ ಕ್ಯಾಸಪನಳ್ಳಿ, ಉಮಾರಡ್ಡಿ ನಾಯ್ಕಲ್, ರಾಮ­ಲಿಂಗಪ್ಪ ಯರಗೋಳ, ವೆಂಕಟರಾಮ­ರಡ್ಡಿ ವಡವಟ್‌, ಬಸವರಾಜಪ್ಪಗೌಡ ಕ್ಯಾತನಾಳ, ಭೀಮರಾಯ ಬದ್ದೇಪಲ್ಲಿ, ನಗರಸಭೆ ಸದಸ್ಯ ಸುರೇಶ ಕೋಟಿಮನಿ, ನಾಗರಾಜ ಬೀರನೂರ, ಶರಣಗೌಡ ಬಾಡಿಯಾಳ ಸೇರಿದಂತೆ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT