ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಯಾಂಕಿಂಗ್‌ ಕ್ಷೇತ್ರದ ಮಹತ್ವದ ಪ್ರಗತಿ’

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಧುರೈ(ಪಿಟಿಐ): ‘ಕಳೆದೊಂದು ದಶ ಕದಲ್ಲಿ ದೇಶದಲ್ಲಿ ಬ್ಯಾಂಕಿಂಗ್‌ ವಲಯ ಮಹತ್ವದ ಪ್ರಗತಿ ದಾಖಲಿಸಿದೆ. ಗ್ರಾಮೀಣ ಭಾಗಕ್ಕೂ ಬ್ಯಾಂಕಿಂಗ್‌ ಸೇವೆ ಗಳು ವಿಸ್ತರಿಸಿದೆ. ದೇಶದಲ್ಲಿನ ಒಟ್ಟಾರೆ ಬ್ಯಾಂಕ್‌ ಶಾಖೆಗಳ ಸಂಖ್ಯೆ 1.10 ಲಕ್ಷ ವನ್ನೂ ದಾಟಿದೆ’ ಎಂದು ಕೇಂದ್ರ ಹಣ ಕಾಸು ಸಚಿವ ಚಿದಂಬರಂ ಹೇಳಿದರು.
ಇಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ 103ನೇ ಸಂಸ್ಥಾ­ಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಳೆದೊಂದು ದಶಕದಲ್ಲಿ ಪ್ರತಿ ವರ್ಷ ಸರಾಸರಿ 7,000 ಬ್ಯಾಂಕ್‌ ಶಾಖೆಗಳು ಆರಂಭಗೊಂಡಿವೆ. ‘ಎಟಿಎಂ’ ಸೇವೆಯೂ ದೇಶ ದಾದ್ಯಂತ ವಿಸ್ತರಿ ಸಿದೆ. ದಶಕದ ಹಿಂದೆ ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಶೈಕ್ಷಣಿಕ ಸಾಲ ಲಭಿಸುವ ಪರಿಸ್ಥಿತಿ ಇತ್ತು. ಈಗ ಲಕ್ಷಾಂತರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿ ದ್ದಾರೆ. ಮಹಿಳಾ ಸ್ವ–ಸಹಾಯ ಗುಂಪು ಗಳು (ಎಸ್‌ಎಚ್‌ಜಿ) ಬ್ಯಾಂಕ್‌ಗಳಿಂದ ಸಾಲದ ನೆರವು ಪಡೆದು ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ’ ಎಂದರು.

‘ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ಕಾರ್ಯ­ಕ್ರಮ­ದಡಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳು ವಿವಿಧ ಜನಪರ ಯೋಜನೆಗಳಿಗಾಗಿ ಕಳೆದೊಂದು ದಶಕ ದಲ್ಲಿ ₨20 ಸಾವಿರ ಕೋಟಿ ವ್ಯಯಿಸಿವೆ. ಇದೀಗ 60 ವರ್ಷಗಳಷ್ಟು ಹಳೆಯ­ದಾದ ಈ ಕಾಯ್ದೆಯ ಬದಲಿಗೆ ಹೊಸ ದಾದ ‘ಕಂಪೆನಿ ಮಸೂದೆ’ ಜಾರಿಗೆ ಬರಲಿದೆ’ ಎಂದು ಅವರು ಪ್ರಶ್ನೆಯೊಂ­ದಕ್ಕೆ ಉತ್ತರಿಸಿದರು.

103ನೇ ಸಂಸ್ಥಾಪನಾ ದಿನಾಚರಣೆ ಸ್ಮರಣಾರ್ಥ ಚಿದಂಬರಂ ಬ್ಯಾಂಕಿನ 103 ‘ಎಟಿಎಂ’ಗಳನ್ನು ಉದ್ಘಾಟಿಸಿ ದರು. ದಿನವೊಂದಕ್ಕೆ ₨40 ಸಾವಿರದವ ರೆಗೆ ಹಣ ಡ್ರಾ ಮಾಡಬಹುದಾದ ‘ಇಎಂವಿ’ ರೂಪೇ ಡೆಬಿಟ್‌ ಕಾರ್ಡ್‌ ಸೇವೆಗೂ ಚಾಲನೆ ನೀಡಿದರು.

ದಶಕದ ಪ್ರಗತಿ
* ವರ್ಷಕ್ಕೆ ಸರಾಸರಿ 7000 ಬ್ಯಾಂಕ್‌ ಶಾಖೆಗಳ ಆರಂಭ
* ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಾಲ
* ಸದ್ಯ ದೇಶದಾದ್ಯಂತ 1.10 ಲಕ್ಷಕ್ಕೂ ಅಧಿಕ ಶಾಖೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT