ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ರತ್ನ’ ಕೃಷಿಗೂ ಬೇಕು

ಅಕ್ಷರ ಗಾತ್ರ

ಭಾರತ ಮೂಲತಃ ಕೃಷಿ ಪ್ರಧಾನ ರಾಷ್ಟ್ರ.  ಈ ನಾಡಿನ ರೈತರು  ಬೆವರು ಸುರಿಸಿ ಆಹಾರ ಧಾನ್ಯ  ಉತ್ಪಾದನೆ ಮಾಡುತ್ತಿದ್ದಾರೆ. ಆದರೆ ನಾಡಿಗೆ ಅನ್ನ ನೀಡಿದ ರೈತನ ಶ್ರಮಕ್ಕೆ ಸರಿಯಾದ ಬೆಲೆ ಸಿಗದಿರುವುದು, ದಲ್ಲಾಳಿಗಳ ವಂಚನೆಗೆ ಗುರಿಯಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ. ಹಾಗಾಗಿ ಭಾಷಣದಲ್ಲಿ ‘ರೈತ ದೇಶದ ಬೆನ್ನೆಲುಬು’ ಎಂದು ಬಾಯಿಮಾತಿನ ಸವಿಯನ್ನು ತೋರಿಸದೆ ಬೆನ್ನೆಲುಬು ಗಟ್ಟಿಯಾಗಿರುವಂತೆ ನೋಡಿಕೊಳ್ಳಬೇಕಾಗಿದೆ.

ರಾಜಕೀಯ, ಸಾಹಿತ್ಯ, ಸಂಗೀತ, ಕ್ರೀಡೆಯಲ್ಲಿ ‘ಭಾರತ ರತ್ನ’ ಆದವರಿಗಿಂತ ರೈತರು  ಕಡಿಮೆಯೇನಿಲ್ಲ. ಆದುದರಿಂದ ಭಾರತ ಸರ್ಕಾರ, ರಾಜ್ಯ ಸರ್ಕಾರ, ಪ್ರಗತಿಪರ ರೈತರನ್ನು ಗುರುತಿಸಿ ಕೃಷಿ ಕ್ಷೇತ್ರಕ್ಕೂ ಕ್ರಮವಾಗಿ ‘ಭಾರತ ರತ್ನ’ ಮತ್ತು ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಿದರೆ, ಇಂದಿನ ಯುವ ಜನತೆಯನ್ನು ಕೃಷಿಯತ್ತ ಸೆಳೆಯಬಹುದು.

ಆ ಮೂಲಕ ಆಹಾರ ಸಂಸ್ಕರಣೆ, ವೈಜ್ಞಾನಿಕ ಬೆಳೆ ಪದ್ಧತಿ, ಆಧುನಿಕ ರೀತಿಯಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಿ ನಿರುದ್ಯೋಗ ಸಮಸ್ಯೆಯನ್ನು ಭಾಗಶಃ ಪರಿಹರಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT