ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಪ್ರಗತಿಗೆ ವಿಜ್ಞಾನ ತಂತ್ರಜ್ಞಾನ ಅವಶ್ಯ’

Last Updated 4 ಡಿಸೆಂಬರ್ 2013, 7:33 IST
ಅಕ್ಷರ ಗಾತ್ರ

ಕೂಡಲಸಂಗಮ: ವಿಜ್ಞಾನ ಸಂಶೋ ಧನಾ ಕ್ಷೇತ್ರದಲ್ಲಿ ಭಾರತ 66ನೇ ಸ್ಥಾನದಲ್ಲಿ ಇದೆ, ಬರುವ ದಿನಗಳಲ್ಲಿ ಮೊದಲ ಹತ್ತು ಸ್ಥಾನದಲ್ಲಿ ಬರುವಂತೆ ಆಗಬೇಕಾದರೆ ಪ್ರೌಢಶಾಲಾ ಹಂತ ದಲ್ಲಿಯೇ ಸಂಶೋಧನಾ ಮನೋ ಭಾವವನ್ನು ಮಕ್ಕಳಲ್ಲಿ ರೂಢಿಸಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್.ವಿ. ಸಂಕನೂರ ಹೇಳಿದರು.

ಅವರು ಇಲ್ಲಿನ ಬಸವ ವೇದಿಕೆಯಲ್ಲಿ ಸೋಮವಾರ ಸಂಜೆ ನಡೆದ 21ನೇ ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದರು. ಭಾರತ ರತ್ನ ಸಿ.ಎನ್. ಆರ್ ರಾವ್ ಹಾಗೂ ಎ.ಪಿ.ಜಿ ಅಬ್ದುಲ್ ಕಲಾಂ ಅವರ ಕನಸನ್ನು  ಸಾಕಾರಗೊಳಿಸಲು ವಿದ್ಯಾರ್ಥಿಗಳು ವಿಜ್ಞಾನ, ಸಂಶೋಧನಾ ಕ್ಷೇತ್ರದಲ್ಲಿ ಪರಿಶ್ರಮ ಪಡಬೇಕಾದ ಅಗತ್ಯವಿದೆ ಎಂದರು.

ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಬಾಗಲಕೋಟ ತೋಟಗಾರಿಕಾ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ಬಿ. ದಂಡಿನ ಮಾತನಾಡಿ, ಕೂಡಲಸಂಗಮ ದಲ್ಲಿ ಬಾಲವಿಜ್ಞಾನಿಗಳು ಮಂಡಿಸಿದ 340 ಯೋಜನೆಯ ಪುಸ್ತಕವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹೊರತರುವಂತಹ ಕಾರ್ಯವನ್ನು ಮಾಡಿ ಅದಕ್ಕೆ ಬೇಕಾದ ಹಣದ ಸಹ ಕಾರ ನಾನು ಕೊಡುತ್ತೆನೆ. ಇದರಿಂದ ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡಲು ಅನುಕೂಲವಾಗುವುದು ಎಂದು ಹೇಳಿದರು.

ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ, ವಿಜ್ಞಾನ ಪರಿವೀಕ್ಷಕಿ ಜಸ್ಮಿನ್ ಕಿಲ್ಲೇದಾರ, ರಾಜ್ಯ ಸಹಕಾರಿ ಮಹಾ ಮಂಡಳದ ನಿರ್ದೇಶಕ ಎಲ್.ಎಂ. ಪಾಟೀಲ, ಜಿ.ಜಿ.ಬಾಗೇವಾಡಿ. ಲಕ್ಷ್ಮಿ ಪುತ್ರ ಮೇಲಿನಮನಿ, ಹುನಗುಂದ ಪಟ್ಟಣ ಪಂಚಾಯ್ತಿ ಅಧ್ಯಕ್ಷ ರಾಜ ಕುಮಾರ ಬಾದವಾಡಗಿ, ಎಸ್.ಎಂ. ಹಳಪೇಟಿ, ಬಸವ ಆಲೂರ, ಮಹಾಂತೇಶ ಅವಾರಿ, ಸಿದ್ದು ಮಾಳಿ, ಮಲ್ಲು ವೀರಾಪುರ, ಪಿ.ನಾಗರಾಜ, ಸಿ.ಜಿ.ಹವಾಲ್ದಾರ, ನಿರಂಜನ ಆರಾಧ್ಯ, ನೀಲಪ್ಪ ತಪೇಲಿ, ಮಲ್ಲಿಕಾರ್ಜನ ಲೆಕ್ಕಿ ಹಾಳ, ಟಿ.ಜಿ.ಕೃಷ್ಣಮೂರ್ತಿರಾಜ್ ಅರಸ್, ಯಲ್ಲಪ್ಪ ಸವದತ್ತಿ, ಬಿ.ದೊಡ್ಡ ಬಸಪ್ಪ ಉಪಸ್ಥಿತ ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT