ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದಲ್ಲಿ ಮನುಷ್ಯತ್ವದ ಅರಿವು’

50 ವರ್ಷ ಹಿಂದಿನ ನೆನಪು ಮೆಲುಕು ಹಾಕಿದ ಶೋಯೆರ್ಮೇಯರ್‌
Last Updated 16 ಸೆಪ್ಟೆಂಬರ್ 2013, 9:50 IST
ಅಕ್ಷರ ಗಾತ್ರ

ಮಂಗಳೂರು:‘ಭಾರತದಲ್ಲಿ ಅಧ್ಯಾಪಕ ನಾಗಿ ಕಳೆದ 10 ವರ್ಷಗಳು ನನ್ನ ಬದುಕಿನ ಬದಲಾವಣೆಯ ಮಹತ್ತರ ವಾದ ಘಟ್ಟ. ನನ್ನೊಳಗಿನ ನಿಜವಾದ ಮನುಷ್ಯ ನನ್ನು ಕಂಡುಕೊಳ್ಳುವುದಕ್ಕೆ ಈ ನೆಲ ಕಾರಣವಾಯಿತು’ ಎಂದು ರೆ.ಡಾ. ರಾಬರ್ಟ್‌  ಶೋಯೆರ್ಮೇಯರ್‌ ಸ್ಮರಿಸಿದರು.

ಕರ್ನಾಟಕ ಥಿಯಾಲಾಜಿಕಲ್‌ ಕಾಲೇ ಜಿಗೆ ತಮ್ಮಲ್ಲಿದ್ದ ಅಮೂಲ್ಯ ವಸ್ತುಗಳನ್ನು ಹಸ್ತಾಂತರಿಸಿದ ಅವರು ಕಾಲೇಜಿನ ವತಿಯಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. 1957ರಿಂದ 1967ರವರೆಗೆ ಮಂಗಳೂರಿನಲ್ಲಿದ್ದ ಶೋಯೆ ರ್ಮೇಯರ್‌ ಕೆಟಿಸಿಯಲ್ಲಿ ಅಧ್ಯಾಪಕ ಹಾಗೂ ಪ್ರಾಂಶುಪಾಲರಾಗಿ ಕಳೆದ ದಿನಗಳನ್ನು ಮೆಲುಕು ಹಾಕಿದರು.  ‘ಭಾರತ ನನ್ನ ಚಿಂತನೆ ಹಾಗೂ ನಂಬಿಕೆಗಳನ್ನೇ ಬದಲಾಯಿಸಿತು.

ಇಲ್ಲಿ ಕಳೆದ ದಿನಗಳು ನನ್ನಲ್ಲಿ ತಾಜಾತನ ತುಂಬಿದವು. ನಾನು ಶೈಕ್ಷಣಿಕ ವೃತ್ತಿಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಲು ಅವಕಾಶ ಇತ್ತು ಎಂದು ಪ್ರಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ’ ಎಂದರು. ಗೋಣಿಚೀಲಗಳಿಗೆ ಮೇಣದ ಮುದ್ರೆ ಹಾಕಲು ಬಳಸುತ್ತಿದ್ದ ಮುದ್ರೆಯನ್ನೂ ಅವರು ಕಾಲೇಜಿಗೆ ಕೊಡುಗೆ ನೀಡಿದರು.

‘ಸ್ವಾತಂತ್ರ್ಯ ಸಿಕ್ಕ ಸಂಭ್ರಮದಲ್ಲಿ ದೇಶವು ತೇಲುತ್ತಿದ್ದ ಕಾಲಘಟ್ಟದಲ್ಲಿ ನಾನು ಈ ದೇಶಕ್ಕೆ ಬಂದೆ. 1967ರಲ್ಲಿ ಭಾರತ ವನ್ನು ತೊರೆದ ಬಳಿಕ ಮತ್ತೆ ಇಲ್ಲಿಗೆ ಮರಳುತ್ತೇನೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ಆ ಯೋಗ ಮತ್ತೆ ಬಂದಿದೆ. ನಾನೇನು ಭಾರಿ ಸಾಧನೆ ಮಾಡದಿದ್ದರೂ ಸೆರಾಂಪುರ್‌ ವಿಶ್ವವಿ ದ್ಯಾಲಯ ಗೌರವ ಡಾಕ್ಟರೇಟ್‌ ನೀಡಿದೆ. ನಿಮ್ಮ ಅಭಿಮಾನಕ್ಕೆ ಋಣಿ’ ಎಂದರು.

ಶೋಯೆರ್ಮೇಯರ್‌ ಅವರ ವಿದ್ಯಾರ್ಥಿಗಳು ಅವರನ್ನು ಸನ್ಮಾನಿಸಿದರು. ಅವರ ತರಗತಿಗಳಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ ರೆ.ಫಾ.ಸಿ.ಎಲ್‌.ಫುರ್ಟಾಡೊ ಅವರು, ‘ಶೋಯೆರ್ಮೇಯರ್‌ ಅವರು ಕೆಟಿಸಿಯ ಐರೋಪ್ಯ ಪ್ರಾಂಶುಪಾಲರ ಪೈಕಿ ಕೊನೆಯವರು. ಧಾರ್ಮಿಕ ಸಭೆಗಳ ನಾಯಕತ್ವವನ್ನು ಸ್ಥಳಿೀಯರೇ ವಹಿಸಿಕೊಳ್ಳಬೇಕೆಂದು ಬಲವಾಗಿ ಪ್ರತಿಪಾದಿಸಿದ ಇವರು ವಸಾಹತುಶಾಹಿಗಳ ಕಾಲ ಮುಗಿದು ಸ್ವಾತಂತ್ರ್ಯದ ಕಾಲ ಪ್ರಾರಂಭವಾಗುವ ಸಂಕ್ರಮಣ ಕಾಲಘಟ್ಟದಲ್ಲಿ ಮಹತ್ತರ ಪಾತ್ರ ವಹಿಸಿದರು. ಹೊಸ ತಲೆಮಾರಿನ ನಾಯಕರಿಗೆ ತರಬೇತಿ ಕೊಟ್ಟಿದ್ದಲ್ಲದೇ ಸ್ವಾವಲಂಬನೆಯ ಮಹತ್ವವನ್ನು ಇವರು ಮನವರಿಕೆ ಮಾಡಿಕೊಟ್ಟವರು.

ಆಗ ಪಾಶ್ಚಾತ್ಯ ದೊರೆಗಳು, ಅಯ್ಯನವರು ಹಾಗೂ ದೇಶಿಯರ ನಡುವೆ ನಿಕಟ ಸಂಬಂಧ ಇರಲಿಲ್ಲ. ನಾವೀಗ ಸ್ನೇಹಿತ ರಾಗಿದ್ದೇವೆ, ಪಾಲು ದಾರರಾಗಿದ್ದೇವೆ. ಈ ಬದಲಾವಣೆಗೆ ಶೋಯೆರ್ಮೇ ಯರ್‌ ಕೊಡುಗೆ ಪ್ರಮುಖ’ ಎಂದರು. ಕೆಟಿಸಿ ಪ್ರಾಂಶುಪಾಲ ರೆ.ಡಾ. ಹನಿ ಬಾಲ್‌ ಕಬ್ರಾಲ್‌ ಅಧ್ಯಕ್ಷತೆ ವಹಿ ಸಿದ್ದರು. ಪಿ.ಸಿ.ಜೇಮ್ಸ್‌ ಸ್ವಾಗತಿಸಿದರು.

ಕೆಎಸಿಎಸ್‌ ಅಧ್ಯಕ್ಷ, ಸಿಎಸ್‌ಐ ಬಿಷಪ್‌ ರೆ.ಡಾ.ಜೆಎಸ್‌.ಸದಾನಂದ ಅಭಿನಂದ ನಾ ಭಾಷಣ ಮಾಡಿದರು. ಎಬ್ನೆಜರ್‌ ಜತ್ತನ್ನ ಅವರ ‘ತುಳುವಿಗೆ ಬಾಸೆಲ್‌ ಮಿಷನರಿಗಳ ಕೊಡುಗೆ’ ಕೃತಿ ಯನ್ನು ಬಿಡುಗಡೆ ಮಾಡಲಾಯಿತು. ‘ಸುಬೋಧವಾಣಿ’ಯ 125ನೇ ಸಂಚಿಕೆ ಯನ್ನು ಡಾ.ಸಿ.ಎಲ್‌. ಫುರ್ಟಾಡೊ ಬಿಡುಗಡೆ ಮಾಡಿದರು.  ಡಾ. ಎಚ್‌.ಆರ್‌.ಸದಾನಂದ ವಂದಿಸಿದರು.

ಶಿವರಾಮಯ್ಯ ಆಗಿದ್ದ ಶೋಯೆರ್ಮೇಯರ್‌...!
‘ದೇಶದಲ್ಲಿ 10 ವರ್ಷ ನೆಲೆಸಿದ್ದ ಶೋಯೆ ರ್ಮೇಯರ್‌ ಅವರು ಸಂಪೂರ್ಣ ಭಾರತೀಕರಣ ಹೊಂದಿದ್ದರು. ಅವರ ಹೆಸರಿಗೆ ಬಂದ ಪತ್ರವನ್ನು ನೀಡಿದ್ದ  ಅಂಚೆಯಣ್ಣ, ಇಲ್ಲಿ ಶಿವರಾಮಯ್ಯ ಯಾರು?’ ಎಂದು ನನ್ನಲ್ಲಿ ಕೇಳಿದ್ದರು. ಶೋಯೆರ್ಮೇಯರ್‌ ಅವರು ಕನ್ನಡವನ್ನು ಪ್ರೀತಿಯಿಂದ ಕಲಿತಿದ್ದರು.

ಹಿರಿಯ ಮಗ ವೋಲಿ ಅವರನ್ನು ಹುಲಿ ಎಂದು, ಹಿರಿಯ ಮಗಳು ಕ್ಯಾಥರೀನ್‌ ಅವರನ್ನು ಕತ್ತೆ ಎಂದು, ಇನ್ನೊಬ್ಬ ಮಗಳು ಮರಿಯಾನ್ನೆ ಅವರನ್ನು ಮರಿಯಾನೆ ಎಂದೂ, ಕೊನೇಯ ಮಗ ಜೇಕೋಬ್‌ ಅವರನ್ನು ಕೋತಿ ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದರು’ ಎಂದು ಶೋಯೆರ್ಮೇಯರ್‌ ಅವರ ಶಿಷ್ಯ ರೆ.ಫಾ.ಸಿ.ಎಲ್‌.ಫುರ್ಟಾಡೊ ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT