ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂಮಿ ಕೊಟ್ಟ ರೈತರಿಗೆ ನ್ಯಾಯ ಒದಗಿಸಿ’

ಬಿಡದಿಯಲ್ಲಿ ‘ಬಾಷ್’ ಕಂಪೆನಿ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ
Last Updated 19 ಸೆಪ್ಟೆಂಬರ್ 2013, 10:32 IST
ಅಕ್ಷರ ಗಾತ್ರ

ರಾಮನಗರ: ‘ಬಾಷ್’ ಸಂಸ್ಥೆಯು 120 ವರ್ಷಗಳ ಇತಿ ಹಾಸವುಳ್ಳ ಸಂಸ್ಥೆಯಾಗಿದ್ದು ಭಾರತದಲ್ಲಿ 65 ವರ್ಷಗಳಿಂದ ಅಸ್ತಿತ್ವ ದಲ್ಲಿದೆ.  ಸಂಸ್ಥೆ ಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸ ರುಗಳಿಸಿದೆ. ಇದು ಬಿಡದಿಯಲ್ಲಿ ಘಟಕ ಸ್ಥಾಪಿಸಲು ಬಂದಿ ರುವುದು ಸಂತಸ ತಂದಿದೆ’ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

ಬಿಡದಿ ಕೈಗಾರಿಕಾ ವಲಯದಲ್ಲಿ ‘ಬಾಷ್’ ಕಂಪೆನಿಯ ನೂತನ ಉತ್ಪಾದನಾ ಘಟಕದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸಂಸ್ಥೆಯು ನಿರುದ್ಯೋಗಿ ಯುವಕರಿಗೆ ನೀಡುತ್ತಿದ್ದ ’ಅಪರೆಂಟಿಸ್’ ತರಬೇತಿ ಯನ್ನು ಸ್ಥಗಿತಗೊಳಿಸಿದೆ. ಇದನ್ನು ಪುನಃ ಪ್ರಾರಂಭಿಸಿ ಜಿಲ್ಲೆಯ ಯುವ ಜನತೆಗೆ ಉದ್ಯೋಗವಾಕಾಶ ಕಲ್ಪಿಸಿಕೊಡಲಿ ಎಂ ದು ಅವರು ಮನವಿ ಮಾಡಿದರು.

ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ‘ಬಾಷ್’ ಸಂಸ್ಥೆಯು ಭಾರ ತದ ಘಟಕಗಳಲ್ಲಿ ಸುಮಾರು 26,500 ಭಾರತೀಯರಿಗೆ ಉದ್ಯೋಗವಕಾಶ ಕಲ್ಪಿ ಸಿದೆ. ಅದರಲ್ಲಿ ರಾಜ್ಯದಲ್ಲಿಯೇ 16 ಸಾವಿರ ಸಂಸ್ಥೆಯ ಉದ್ಯೋಗಿಗಳಿದ್ದಾರೆ ಎಂಬುದು ಹೆಮ್ಮೆಯ ವಿಷಯ ಎಂದರು.

ಬಿಡದಿ ಭಾಗದ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಇಲ್ಲಿನ ರೈತರು ಭೂಮಿಯನ್ನು ಕೊಟ್ಟು, ಭಿಕ್ಷೆ ಬೇಡುತ್ತಿದ್ದಾರೆ. ಅಂತವರಿಗೆ ಉದ್ಯೋಗ ವಕಾಶ ಕಲ್ಪಿಸಿಕೊಡುವುದು, ಜಾಗ ಪಡೆದ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಹೇಳಿದರು.

‘ಬಾಷ್‌’ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಸ್ಟೀಫನ್‌ ಬರ್ನ್ಸ್‌್ ಮಾತ ನಾಡಿ, ‘ಬೆಂಗಳೂರಿನ ಆಡುಗೋಡಿಯ ಉತ್ಪಾದನಾ ಘಟಕವನ್ನು ಬಿಡದಿಯ ಕೈಗಾರಿಕಾ ಪ್ರದೇಶಕ್ಕೆ ವರ್ಗಾ ಯಿಸ ಲಾಗುವುದು. ಈ ಸಂಬಂಧ ಇಲ್ಲಿ ಘಟಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡ ಲಾಗಿದೆ. 97 ಎಕರೆಗಳ ವಿಸ್ತೀರ್ಣ ದಲ್ಲಿ ಅಂದಾಜು ರೂ 250 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಾಣವಾಗಲಿದೆ.  ಇದು 2015ರಲ್ಲಿ ಕಾರ್ಯಾರಂಭ ಮಾಡ ಲಿದ್ದರು.’ಡೀಸೆಲ್ ಫ್ಯೂಯೆಲ್ ಇಂಜ ಕ್ಷನ್ ಸಿಸ್ಟ್ಂ’ನ ಅನೇಕ ಬಿಡಿಭಾಗಗಳನ್ನು ಉತ್ಪಾದಿಸಲಿದೆ. ಸುಮಾರು 850 ಜನ ಕಾರ್ಯ ನಿರ್ವಹಿಸುವರು ಎಂದು ಅವರು ತಿಳಿಸಿದರು.

ಲಾಟರಿ–ಕ್ರಮದ ಭರವಸೆ
ರಾಮನಗರ: ‘ರಾಜ್ಯದಲ್ಲಿ ಲಾಟರಿ ನಿಷೇಧವಾಗಿದ್ದು, ಅನಧಿಕೃತವಾಗಿ ಒಂದಂಕಿ ಲಾಟರಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿ ಯಿಸಿದರು.

ಬಿಡದಿ ಕೈಗಾರಿಕಾ ವಲಯದಲ್ಲಿ ’ಬಾಷ್’ ಕಂಪೆನಿಯ ನೂತನ ಉತ್ಪಾ ದನಾ ಘಕಟಕಕ್ಕೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಒಂದು ವೇಳೆ ಕಾನೂನು ಉಲ್ಲಂಘಿಸಿ ಲಾಟರಿ ದಂಧೆ ನಡೆಯುತ್ತಿದ್ದರೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇನೆ’ ಎಂದು ಅವರು ಹೇಳಿದರು.

ಇತ್ತೀಚೆಗೆ ರಾಮನಗರಕ್ಕೆ ಬಂದಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವ ರು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಒಂದಂಕಿ ಲಾಟರಿ ದಂಧೆ ಅನಧಿಕೃತವಾಗಿ ತಲೆಯೆತ್ತಿದೆ ಎಂದು ದೂರಿದ್ದರು. ಅದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT