ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟಾಚಾರಕ್ಕೆ ಕುಮ್ಮಕ್ಕು’

Last Updated 6 ಜನವರಿ 2014, 6:59 IST
ಅಕ್ಷರ ಗಾತ್ರ

ದೇವನಹಳ್ಳಿ: ಲಾರಿ ಮಾಲಿಕರು ರಾಜ್ಯ ದಲ್ಲಿ ಕಳೆದ ಡಿಸೆಂಬರ್ 21ರಿಂದ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಜ.11ರ ಮಧ್ಯರಾತ್ರಿಯಿಂದ ರಾಜ್ಯಾದಾದ್ಯಂತ ಮರಳು ಲಾರಿ ಸೇರಿದಂತೆ ವಿವಿಧ ಸರಕು ಸಾಗಾಣೆಯ 6.50 ಲಕ್ಷ ವಾಹನಗಳು ರಸ್ತೆಗಿಳಿಯದೆ ಮುಷ್ಕರ ದಲ್ಲಿ ಪಾಲ್ಗೊಳ್ಳ ಲಿವೆ ಎಂದು ಎಂದು ಕರ್ನಾಟಕ ಲಾರಿ ಮಾಲಿಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ಬಳಿ ತಾಲ್ಲೂಕು ಲಾರಿ ಮಾಲಿಕರ ಸಂಘದ ವತಿಯಿಂದ ನಡೆಯುತ್ತಿರುವ ಮುಷ್ಕರದಲ್ಲಿ ಪಾಲ್ಗೊಂಡು  ಮಾತ ನಾಡಿದರು.

ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಬೆಂಬ ಲಕ್ಕೆ ಸಹಮತ ವ್ಯಕ್ತಪಡಿಸಿವೆ. ನೆರೆ ರಾಜ್ಯದ 22 ಸಾವಿರ ಲಾರಿಗಳು ಜ. 11ರ ಮಧ್ಯರಾತ್ರಿ ನಂತರ ರಾಜ್ಯ ದೊಳಗೆ ಪ್ರವೇಶ ಮಾಡುವುದಿಲ್ಲ, ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಸರಕು ಸಾಗಾಣೆಯ ವಾಹನಗಳೂ ಸೇರಿದಂತೆ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಮ್ಯಾಕ್ಸಿಕ್ಯಾಬ್ ಕಾರು ಗಳೂ ತಮ್ಮ ಸಂಚಾರ ಸ್ಥಗಿತ ಗೊಳಿಸ ಲಿವೆ ಎಂದರು. ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದು ಟೀಕಿಸಿದ ಅವರು, ’ಮುಖ್ಯ ಮಂತ್ರಿ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ. ಲಾರಿ ಮಾಲಿಕರ ಸಮಸ್ಯೆಗಳೇನು ಎಂಬುದರ ಬಗ್ಗೆ ಸರ್ಕಾರ ಒಂದಿಷ್ಟೂ ತಲೆ ಕೆಡಿಸಿಕೊಂಡಿಲ್ಲ, ನಾವು ಭಿಕ್ಷಕರಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿ ಕೊಳ್ಳಬೇಕು’ ಎಂದು ಕಿಡಿಕಾರಿದರು.

ಬಿಜೆಪಿ ಹೊರತುಪಡಿಸಿ ಹಿಂದಿನ ಸರ್ಕಾರ ಪರ್ಮಿಟ್‌ಗೆ ಅವಕಾಶ ನೀಡಿತ್ತು. ಈಗ ಯಾಕೆ ನೀಡಲು ಸಾಧ್ಯ ವಿಲ್ಲ ಎಂದು ಪ್ರಶ್ನಿಸಿದ ಅವರು, ಸರ್ಕಾರ ಅಧಿಕಾರಿಗಳ ಮಾತು ಕೇಳುತ್ತಿ ದೆಯೇ ಹೊರತು ಮಾಲಿಕ ರನ್ನು ಕರೆದು ಸೌಜನ್ಯಕ್ಕೂ ಚರ್ಚಿಸಿ ಸಮಸ್ಯೆ ಬಗೆಹರಿಸುವ ಯತ್ನ ಮಾಡಿಲ್ಲ ಎಂದು ದೂರಿದರು.

ಪ್ರತಿನಿತ್ಯ ಮೂರು ಸಾವಿರ ಲಾರಿ ಲೋಡ್ ಸರಕು ಸಾಗಣೆ ವಾಹನಗಳು ಬೆಂಗಳೂರು ನಗರಕ್ಕೆ ಬೇಕು. ಆದರೆ ಸರ್ಕಾರ ಬರಿ 450 ಲೋಡ್ ಎಂದು ಸುಳ್ಳು ಹೇಳುತ್ತಿದೆ. ತಿಂಗಳಿಗೆ 3 ರಿಂದ 4 ಸಾವಿರ ರೂಪಾಯಿ ವಸೂಲಿ ಮಾಡಿ ಪರ್ಮಿಟ್ ನೀಡಲಿ. ಎರಡು ಜಿಲ್ಲೆ ವ್ಯಾಪ್ತಿಯಲ್ಲಿ ಮರಳು ಸಿಗುವ ಕಡೆ ಅವಕಾಶ ಮಾಡಿ ಕೊಡಲಿ. ಗೌರಿ ಬಿದನೂರು ವ್ಯಾಪ್ತಿಯ ಪಿನಾಕಿನಿ ನದಿ ವ್ಯಾಪ್ತಿಯಲ್ಲಿ ಹದಿನೈದು ವರ್ಷ ಬಳಕೆ ಮಾಡಿದರೂ ಮರಳು ಖಾಲಿ ಯಾಗು ವುದಿಲ್ಲ. ನೈಸರ್ಗಿಕ ಮೂಲ ಹಾಳಾಗು ತ್ತದೆ ಎನ್ನುವ ಸರ್ಕಾರ ಇಟ್ಟಿಗೆ ಜಲ್ಲಿ ಪರ್ಮಿಟ್ ಇಲ್ಲದೆ ಸಾಗಾಣಿಕೆಗೆ ಅವ ಕಾಶ ನೀಡಿರುವುದು ಎಷ್ಟು ಸರಿ ಎಂದರು. ಲಾರಿ ಮಾಲಿಕರ ಸಂಘದ ರಾಜ್ಯ ಕಾರ್ಯದರ್ಶಿ ನಾರಾಯಣಪ್ಪ, ಮೈಸೂರು ಜಿಲ್ಲೆಯ ಅಧ್ಯಕ್ಷ ರುದ್ರಪ್ಪ,  ಕೆಂಪರಾಜು, ಕೋಡಿಮಂಚೇನಹಳ್ಳಿ ನಾಗೇಶ್, ಕಾರ್ಯದರ್ಶಿ ಮುನಾ ವರ್, ಸುನಿಲ್ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT