ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತ್ತೊಂದು ಹಸಿರುಕ್ರಾಂತಿಯಾಗಲಿ’

Last Updated 5 ಡಿಸೆಂಬರ್ 2013, 19:36 IST
ಅಕ್ಷರ ಗಾತ್ರ

ಯಲಹಂಕ: ಆಹಾರ ಭದ್ರತಾ ಕಾಯ್ದೆ ಸಮರ್ಪಕವಾಗಿ ಅನುಷ್ಠಾನ­ಗೊಳ್ಳ­ಬೇಕಾ­ದರೆ ಮತ್ತೊಂದು ಹಸಿರುಕ್ರಾಂತಿ­ಯಾ­ಗಬೇಕಿದೆ ಎಂದು  ಎಂ. ಎಸ್‌.­ಸ್ವಾಮಿನಾಥನ್‌ ಸಂಶೋಧನಾ ಪ್ರತಿ­ಷ್ಠಾನದ ಸಂಸ್ಥಾಪಕ ಅಧ್ಯಕ್ಷ ಪ್ರೊಫೆಸರ್‌ ಎಂ.ಎಸ್‌.ಸ್ವಾಮಿನಾಥನ್‌ ಹೇಳಿದರು.

ಅಂತರರಾಷ್ಟ್ರೀಯ ವಿಸ್ತರಣಾ ಶಿಕ್ಷಣ ಸಂಘ(ನಾಗಪುರ) ಮತ್ತು ಕೃಷಿ ವಿಶ್ವವಿದ್ಯಾಲಯ ಹಾಗೂ ಭಾರತೀಯ ವಿಸ್ತರಣಾ ಶಿಕ್ಷಣಸಂಘ(ಕರ್ನಾಟಕ ಅಧ್ಯಾಯ)ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ ‘ಸುಸ್ಥಿರ ಕೃಷಿ ಅಭಿವೃದ್ಧಿಗೆ ವಿಸ್ತರಣಾ ಶಿಕ್ಷಣ ಕಾರ್ಯತಂತ್ರಗಳು–ಒಂದು ಜಾಗತಿಕ ದೃಷ್ಟಿಕೋನ’ ಕುರಿತ ನಾಲ್ಕು ದಿನಗಳ ಅಂತರರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ 70 ಮಿಲಿಯನ್‌ ಟನ್‌ ಆಹಾರಧಾನ್ಯದ ಅವಶ್ಯಕತೆಯಿದ್ದು, ಈಗಿನ ಕೃಷಿ ಪದ್ಧತಿಯನ್ನು ಅನುಸ­ರಿಸಿದರೆ ಆಹಾರ ಭದ್ರತಾ ಕಾಯ್ದೆಯು ಯಶಸ್ವಿಯಾಗಲು ಕಷ್ಟವಾಗುತ್ತದೆ. ಕೇವಲ ಗೋಧಿ, ಭತ್ತ ಬೆಳೆಯಲು ಮಾತ್ರ ಕೃಷಿ ಸೀಮಿತವಾಗಿರದೆ ಬಹುಧಾನ್ಯಗಳನ್ನು ಬೆಳೆಯುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.

ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಆರ್‌.ದ್ವಾರಕೀನಾಥ್‌ ಮಾತನಾಡಿ, ದೇಶದಲ್ಲಿ ಬರಡುಭೂಮಿ ಹೆಚ್ಚಾಗಿದ್ದು, ಇಂತಹ ಭೂಮಿಯಲ್ಲಿ ಕಡಿಮೆ ನೀರನ್ನು ಬಳಸಿ ಹೆಚ್ಚಿನ ಉತ್ಪಾದನೆ ಮಾಡಬೇಕಾದ ಅವಶ್ಯಕತೆಯಿದೆ. ಭಾರತದ ಭವಿಷ್ಯವು ಕೃಷಿ ಚಟುವಟಿಕೆಗಳನ್ನು ಅವಲಂಬಿ­ಸಿದ್ದು, ರೈತರ ಅವಶ್ಯಕತೆ ಗಳನ್ನು ಪೂರೈಸಬೇಕಾದುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT