ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನಸ್ಸಿನ ಮಾತೆ ಕವನ’

Last Updated 16 ಡಿಸೆಂಬರ್ 2013, 6:55 IST
ಅಕ್ಷರ ಗಾತ್ರ

ಕೊಪ್ಪಳ: ಮನಸ್ಸಿನ ಹಲವು ಭಾವನೆ­ಗಳನ್ನು ಸಕಾಲಕ್ಕೆ ಹೊರಗೆಡವಿ ಬರ­ವಣಿಗೆ ರೂಪಕ್ಕೆ ಇಳಿಸುವುದೇ ಕವನ. ಮನಸು ಕವನವಾದರೆ, ಕವನ ಮನಸ್ಸಿನ ಮಾತಾಗುತ್ತದೆ ಎಂದು   ಸಾಹಿತಿ ವಿ. ಹರಿನಾಥ ಬಾಬು ಅಭಿಪ್ರಾಯಪಟ್ಟರು.

ಭಾಗ್ಯನಗರದ ಮೈತ್ರಿ ಪ್ರಕಾಶನ ಸಂಸ್ಥೆಯ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ  ಸಾಹಿತ್ಯ ಭವನ­ದಲ್ಲಿ ಭಾನುವಾರ ನಡೆದ ಸಾಹಿತಿ ಅಕ್ಬರ್ ಕಾಲಿಮಿರ್ಚಿ ಅವರ ‘ರೈಲು­ಗಾಡಿ’ ಮತ್ತು ‘ಕತ್ತಲೆಯ ಪ್ರೀತಿಗೆ’ ಎಂಬ ಎರಡು ಕವನ ಸಂಕಲನಗಳನ್ನು ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಅಕ್ಕಿ ಬಸವೇಶ, ಸಾಹಿತಿ ಅಬ್ಬಾಸ್‌ ಮೇಲಿನಮನಿ  ಕೃತಿಗಳ ಕುರಿತು ಮಾತನಾಡಿದರು. ಕವನ ಸಂಕಲನಕಾರ ಅಕ್ಬರ್‌ ಕಾಲಿ­ಮಿರ್ಚಿ ಪ್ರಸ್ತಾವಿಕವಾಗಿ ಮಾತನಾಡಿ­ದರು. ಸಾಹಿತಿ ಎಚ್‌.ಎಸ್‌. ಪಾಟೀಲ್‌ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಬಿ. ಚಂದ್ರಶೇಖರ್‌, ವೀರಪ್ಪ ನಿಂಗೋಜಿ, ಜಾಜಿ ದೇವೇಂದ್ರಪ್ಪ, ಎ.ಎಸ್‌. ಮಕಾನದಾರ್‌, ಶಂಕರ ಹೂಗಾರ, ಆರ್‌.ಎಸ್‌. ಸರಗಣಾಚಾರಿ, ಉಪ­ನ್ಯಾಸಕ ಶಿವಾನಂದ ಮೇಟಿ, ಮೈಲಾರಗೌಡ ಹೊಸಮನಿ ಇತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT