ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾಶರಣ ಹರಳಯ್ಯ’ ಬೆಂಬಲಿಸಿ ಬೈಕ್‌ ರ್‍ಯಾಲಿ, ಮೆರವಣಿಗೆ 10ರಂದು

Last Updated 9 ಜನವರಿ 2014, 5:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯದಾದ್ಯಂತ ಇದೇ 10­ರಂದು ತೆರೆ ಕಾಣಲಿರುವ ‘ಮಹಾ­ಶರಣ ಹರ­ಳಯ್ಯ’ ಸಿನಿಮಾವನ್ನು ವೀಕ್ಷಿಸಿ ಯಶಸ್ವಿಗೊಳಿಸುವಂತೆ ಪ್ರಚಾರ ನೀಡುವ ಉದ್ದೇಶದಿಂದ ನಗರದಲ್ಲಿ ಬೈಕ್‌ ರ್‍್ಯಾಲಿ, ಮೆರವಣಿಗೆ, ಚಿತ್ರತಂಡಕ್ಕೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳ­ಲಾಗಿದೆ’ ಎಂದು ಹರಳಯ್ಯ ಸಮಗಾರ ಸಮಾಜ ಅಭಿವೃದ್ಧಿ ಮಹಾಮಂಡಳದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಗುರು­ನಾಥ ಉಳ್ಳಿಕಾಶಿ ತಿಳಿಸಿದರು.

‘ದಲಿತ ಸಮಾಜದಲ್ಲಿ ಅತಿ ಹಿಂದು­ಳಿದ ಸಮಗಾರ ಹರಳಯ್ಯ ಸಮಾಜದ 12ನೇ ಶತಮಾನದ ಕ್ರಾಂತಿಕಾರಿ ವಿಷಯ, ಶೋಷಿತ ಶರಣರಾದ ಮಹಾ­ಶರಣ ಹರಳಯ್ಯನವ ಜೀವನ ಕಥೆ­ಯನ್ನೊಳಗೊಂಡ ಈ ಸಿನಿಮಾಕ್ಕೆ ಮಹಾ ಮಂಡಳ ಸಂಪೂರ್ಣ ಬೆಂಬಲ ನೀಡು­ತ್ತದೆ. ಸಿನಿಮಾ ಬಿಡುಗಡೆಯ ದಿನ ಹೆಗ್ಗೇರಿಯ ಶ್ರೀ ಭುವನೇಶ್ವರಿ ನಗರ­ದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಿಂದ ಇಂಡಿ ಪಂಪ್‌, ಹಳೇಹುಬ್ಬಳ್ಳಿ, ಹಿರೇಪೇಟೆ, ಜವಳಿ­ಸಾಲ, ದುರ್ಗದಬೈಲ್‌, ಸ್ಟೇಷನ್‌ ರಸ್ತೆ, ಮರಾಠಗಲ್ಲಿ ಮೂಲಕ ಚನ್ನಮ್ಮ ವೃತ್ತ­ದವರೆಗೆ ಬೈಕ್‌ ರ್‍್ಯಾಲಿ ಹಮ್ಮಿಕೊಳ್ಳ­ಲಾಗಿದೆ. ಅದೇ ದಿನ ಬೆಳಿಗ್ಗೆ ಲಿಡಕರ್‌ ಕಾಲೊನಿಯಿಂದ ಸಿನಿಮಾ ಬಿಡು­ಗಡೆಯಾಗುವ ರೂಪಂ ಚಿತ್ರಮಂದಿರ­ದವರೆಗೆ ಮೆರವಣಿಗೆ ನಡೆಸಲಾಗು­ವುದು’ ಎಂದು ಅವರು ಸುದ್ದಿಗೋಷ್ಠಿ­ಯಲ್ಲಿ ಬುಧವಾರ ತಿಳಿಸಿದರು.

‘ಇದೇ 12ರಂದು ಚಿತ್ರತಂಡ ರೂಪಂ ಚಿತ್ರಮಂದಿರಕ್ಕೆ ಬರಲಿದೆ. ಈ ವೇಳೆ ಮಹಾಮಂಡಳದ ವತಿಯಿಂದ ತಂಡ­ವನ್ನು ಸನ್ಮಾನಿಸಲಾಗುವುದು. ಸಮ­ಗಾರ ಹರಳಯ್ಯ ಸಮಾಜ ಪ್ರಮುಖ ಶೋಷಿತ ಸಮಾಜವಾಗಿದ್ದು, ಕಮರ್ಷಿ­ಯಲ್‌ ಸಿನಿಮಾಗಳ ಸಂದರ್ಭದಲ್ಲಿ ಪೌರಾ­ಣಿಕ ಚಿತ್ರ ನಿರ್ಮಿಸಿರುವುದು ಸಾಹಸದ ಕೆಲಸ. ಅದರಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ಶ್ರೀಧರ, ರಮೇಶ ಅರವಿಂದ ಮತ್ತು ಚಿತ್ರತಂಡದ ಸಾಧನೆ ಶ್ಲಾಘನೀಯ. ಮಹಾನಗರದ ಜನರು ಈ ಸಿನಿಮಾವನ್ನು ವೀಕ್ಷಿಸಿ ಸಮಾನತೆ ಮೆರೆಯಬೇಕು’ ಎಂದರು.

ಮಹಾಮಂಡಲದ ಅಧ್ಯಕ್ಷ ಪರಶು­ರಾಮ ಅರಕೇರಿ, ಪ್ರಭು ಅಣ್ಣಿಗೇರಿ, ಸದಾನಂದ ತೆರದಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT