ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾತೃಭಾಷೆ ಮೂಲಕ ಸೃಜನಶೀಲತೆ ವೃದ್ಧಿ’

Last Updated 16 ಡಿಸೆಂಬರ್ 2013, 6:03 IST
ಅಕ್ಷರ ಗಾತ್ರ

ಶೃಂಗೇರಿ: ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮಾತೃ­ಭಾಷೆಯಲ್ಲೇ ನೀಡಿದಾಗ ಮಕ್ಕಳ ಸೃಜನಾತ್ಮಕತೆಗೆ ಮೂರ್ತರೂಪ ದೊರಕುವುದರಿಂದ, ಈ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡುವ ಕುರಿತು ಸರ್ಕಾರ ಚಿಂತಸಬೇಕು ಎಂದು ಕವಿ ಪ್ರೊ.ನಿಸಾರ್‌ ಅಹಮದ್‌ ಹೇಳಿ­ದರು.

ಪಟ್ಟಣದ ಗೌರೀಶಂಕರ್‌ ಸಭಾಂ­ಗಣ­ದಲ್ಲಿ ಶನಿವಾರ ಸ್ವರ ಸನ್ನಿಧಿ ಪ್ರತಿಷ್ಠಾನ ಹಾಗೂ ಶೃಂಗಾದ್ರಿ ಕಲ್ಚರಲ್‌ ಟ್ರಸ್ಟ್‌ ಆಯೋಜಿಸಿದ್ದ ನಿಸಾರ್‌ರ ಗಿತೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ಭಾವನೆ ಹಾಗೂ ಸಂವೇದನಾತ್ಮಕ ತುಡಿತವಿದೆ. ಪ್ರಾದೇ­ಶಿಕ ಭಾಷೆ ಬಳಕೆಯಿಂದ ಸುಲಭವಾಗಿ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ಸಂಸ್ಕಾರಗಳು ದೊರಕಬೇಕಾದರೆ ಮಾತೃ­ಭಾಷೆಯನ್ನು ನಿರಂತರವಾಗಿ ಪ್ರೀತಿಸಬೇಕು. ಕೃತಕ ಕನ್ನಡತನ ಬೆಳೆಸಿ­ಕೊಂಡು ಜನತೆಯನ್ನು ವಂಚಿಸುವ ಪ್ರವೃತ್ತಿ ಕೈಬಿಟ್ಟು, ಅಚ್ಚ ಕನ್ನಡದಲ್ಲಿ ಸಹಜತೆ­ ಮರೆಯಬೇಕು ಎಂದರು.

ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ವೈ.ಎಸ್‌.ವಿ.ದತ್ತ ಮಾತ­ನಾಡಿ, ‘ಬದಲಾದ ಕಾಲಘಟ್ಟ­ದಲ್ಲಿ ಪೂರ್ವಿಕರ ಬಳುವಳಿಯಾದ ಅಮೂಲ್ಯ ಕನ್ನಡವನ್ನು ಜತನದಿಂದ ಕಾಪಾಡುವ ಜವಾಬ್ದಾರಿಯನ್ನು ನಾವೆ­ಲ್ಲರೂ ನಿರ್ವಹಿಸಬೇಕು’ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕರ್ನಾ­ಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಬಹುಮಾನ ವಿತರಿಸಿ­ದರು.

ನುಡಿ ಚಿತ್ರಕಾರ ಶಂ.ನ.­ಶೇಷಗಿರಿ ಅವರನ್ನು ಗೌರವಿಸ­ಲಾಯಿತು. ಶೃಂಗಾದ್ರಿ ಕಲ್ಚರಲ್‌ ಟ್ರಸ್ಟ್‌ ಅಧ್ಯಕ್ಷ ಎಚ್‌.ಎಂ.ನಾರಾಯಣ, ಡಾ.­ಶಮಿತಾ ಮಲ್ನಾಡ್‌, ಹೊಸ್ಕೆರೆ ನಟೇಶ್‌, ಹೆಗ್ಗದ್ದೆ ಶಿವಾನಂದರಾವ್‌ ಇದ್ದರು. ವೇದಿಕೆ ಕಾರ್ಯ­ಕ್ರಮ ನಂತರ ಶಮಿತಾ ಮಲ್ನಾಡ್‌ ನೇತೃತ್ವ­ದಲ್ಲಿ ಆನಂದ ಮಾದಲಗೆರೆ, ಕಣದಮನೆ ಜಗದೀಶ್‌, ಸಂತೋಷ್‌, ಹೃಷಿಕೇಶ್‌, ಅದ್ವೈತ್‌ ಹೆಗ್ಡೆ ಅವರಿಂದ ನಿಸಾರ್‌ರ ಗೀತ­ಗಾಯನ ನಡೆ­ಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT