ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವೀಯ ಗುಣಗಳ ಮೇರು ಕಲಾವಿದ’

ಡಾ.ರಾಜ್‌ಕುಮಾರ್‌ಗೆ ಮರಣೋತ್ತರ ಪ್ರಶಸ್ತಿ ಪ್ರದಾನ
Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಮೇರುನಟ ಡಾ.ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಫ್‌ಕೆಸಿಸಿಐ) 2013ನೇ ಸಾಲಿನ ‘ಸರ್‌. ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ’ಯನ್ನು ಮರಣೋತ್ತರ ವಾಗಿ ಭಾನುವಾರ ಪ್ರದಾನ ಮಾಡಲಾಯಿತು. ಪಾರ್ವತಮ್ಮ ರಾಜ್‌ಕುಮಾರ್‌ ಅವರು ಪ್ರಶಸ್ತಿ ಸ್ವೀಕರಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಡೆದ ಎಫ್‌ಕೆಸಿಸಿಐ ಸಂಸ್ಥಾಪ ಕರ ದಿನಾಚರಣೆ ಸಮಾರಂಭ-­ದಲ್ಲಿ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸ್ಮರಣಿಕೆ, ಬೆಳ್ಳಿ ಫಲಕ ನೀಡಿ ಶಾಲು ಹೊದೆಸಿ ಪಾರ್ವತಮ್ಮ ಅವರನ್ನು ಗೌರವಿಸಲಾಯಿತು.

ರಾಜ್‌ಕುಮಾರ್‌ ಅವರ ಪುತ್ರರಾದ ರಾಘವೇಂದ್ರ ರಾಜ್‌ಕುಮಾರ್‌, ಶಿವ ರಾಜ್‌ಕುಮಾರ್‌, ಪುನೀತ್‌ ರಾಜ್‌ ಕುಮಾರ್‌ ಮತ್ತು ಪುತ್ರಿ ಪೂರ್ಣಿಮಾ ಅವರು ಈ ಸಂದರ್ಭದಲ್ಲಿ ವೇದಿಕೆ ಯಲ್ಲಿದ್ದರು.

‌ಪ್ರಶಸ್ತಿ ಪ್ರದಾನದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ‘ಸರ್‌.ಎಂ.ವಿಶ್ವೇಶ್ವರಯ್ಯ ಮತ್ತು ಡಾ.ರಾಜ್‌ಕುಮಾರ್‌ ಅವರು ಕನ್ನಡ ನಾಡು ಕಂಡ ಇಬ್ಬರು ಯುಗ ಪುರುಷರು. ಇಬ್ಬರೂ ಈ ನಾಡಿನ ಅಭಿ ವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಮಹನೀಯರು. ನಾಡಿನ ಜನತೆಯ ಒಳಿತಿಗಾಗಿ ಅಂತಹವರು ಮತ್ತೆ ಮತ್ತೆ ಹುಟ್ಟಿ ಬರಬೇಕು’ ಎಂದರು.

ವಿಶ್ವೇಶ್ವರಯ್ಯ ಅವರು ಒಬ್ಬ ಅಪ್ರತಿಮ ಬುದ್ಧಿವಂತ ಎಂಜಿನಿಯರ್‌. ಜೊತೆಯಲ್ಲೇ ದಕ್ಷ ಮತ್ತು ದೂರದೃಷ್ಟಿ ಯುಳ್ಳ ಆಡಳಿತಗಾರರೂ ಹೌದು. ಅವರ ಹೆಸರು ಕೇಳಿದಾಕ್ಷಣ ಪ್ರಾಮಾಣಿ ಕತೆ, ದಕ್ಷತೆ ಮತ್ತು ಶಿಸ್ತು ನೆನಪಾಗು ತ್ತದೆ. ಅವರ ದೂರದೃಷ್ಟಿಯ ಪರಿಣಾ ಮವಾಗಿಯೇ ರಾಜ್ಯ ಬಹಳ ಹಿಂದೆಯೇ ಬೃಹತ್‌ ಅಣೆಕಟ್ಟುಗಳ ನಿರ್ಮಾಣ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ತೆರೆದು ಕೊಂಡಿತ್ತು ಎಂದು ಸ್ಮರಿಸಿದರು.

ಒಡನಾಟ ಮೆಲುಕು: ‘ಡಾ.ರಾಜ್‌ ಕುಮಾರ್‌ ಅವರು ಭೌತಿಕವಾಗಿ ನಮ್ಮ ಜೊತೆ ಇಲ್ಲದಿರಬಹುದು. ಇಡೀ ರಾಜ್ಯದ ಜನರ ಹೃದಯಗಳಲ್ಲಿ ಅವರು ನೆಲೆಸಿದ್ದಾರೆ. ಅವರು ಯಾವಾಗಲೂ ಮಗುವಿನಂತಹ ಮನಸ್ಸು ಹೊಂದಿದ್ದ ಮೇರು ಕಲಾವಿದ. ಮಾನವೀಯ ಗುಣಗಳ ದೃಷ್ಟಿಯಿಂದಲೂ ಅವರನ್ನು ಮೀರಿಸುವ ಮತ್ತೊಬ್ಬ ಕಲಾವಿದ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ರಾಜ್‌ಕುಮಾರ್‌ ಅವರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇತ್ತು. ಅವರು ನಮ್ಮ ಜಿಲ್ಲೆಯವರೇ ಆಗಿದ್ದು ಇದಕ್ಕೆ ಕಾರಣ. ನನಗೂ ಅವರ ಬಗ್ಗೆ ತುಂಬಾ ಹಮ್ಮೆ. ನಾನು ಭೇಟಿಯಾದ ಸಂದರ್ಭ ದಲ್ಲೆಲ್ಲಾ ನಮ್ಮ ಕಾಡಿನವರು ಬಂದರು ಎಂದು ಪ್ರೀತಿಯಿಂದ ಕಾಣುತ್ತಿದ್ದರು. ರಾಜಕೀಯವಾಗಿ ನೀವು ಹೆಚ್ಚು ಎತ್ತರಕ್ಕೆ ಬೆಳೆಯಬೇಕು ಎಂದು ಹರಸುತ್ತಿದ್ದರು’ ಎಂದು ರಾಜ್‌ಕುಮಾರ್‌ ಅವರೊಂದಿ ಗಿನ ಒಡನಾಟವನ್ನು ಸ್ಮರಿಸಿದರು.

ವಿಶ್ವೇಶ್ವರಯ್ಯ ಸ್ಮಾರಕ ಉಪನ್ಯಾಸ ನೀಡಿದ ವಿಧಾನ ಪರಿಷತ್‌ ಸದಸ್ಯ ಪ್ರೊ.ದೊಡ್ಡರಂಗೇಗೌಡ ಅವರು ವಿಶ್ವೇಶ್ವರಯ್ಯ ಮತ್ತು ರಾಜ್‌ಕುಮಾರ್‌ ಅವರ ಕುರಿತು ಮಾತನಾಡಿದರು. 

ಸಚಿವರಾದ ಅಂಬರೀಷ್‌, ಉಮಾಶ್ರೀ, ಎಫ್‌ಕೆಸಿಸಿಐ ಅಧ್ಯಕ್ಷ ಆರ್‌. ಶಿವಕುಮಾರ್‌, ಉಪಾಧ್ಯಕ್ಷ ಎಸ್‌. ಸಂಪತ್‌ ರಾಜ್‌ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಿಟಿಕಿಯಲ್ಲಿ ನೋಡಿದ್ದರು
ಸರ್‌.ಎಂ. ವಿಶ್ವೇಶ್ವರಯ್ಯ ಅವರನ್ನು ತಾವು ಒಮ್ಮೆ ಕಿಟಕಿಯ ಮೂಲಕ ನೋಡಿರುವುದಾಗಿ ತಮ್ಮ ತಂದೆ ಹೇಳಿಕೊಂಡಿದ್ದರು ಎಂದು ಡಾ.ರಾಜ್‌ಕುಮಾರ್‌ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್‌ ಸ್ಮರಿಸಿದರು.

ಪ್ರಶಸ್ತಿ ಪ್ರದಾನವಾದ ಬಳಿಕ ಕುಟುಂಬದ ಪರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ನನಗೆ ವಿಶ್ವೇಶ್ವರಯ್ಯ ಅವರನ್ನು ನೋಡಬೇಕು ಎಂದು ಬಹಳ ಆಸೆ ಇತ್ತು. ಒಮ್ಮೆ ಅವರನ್ನು ನೋಡಲು ಹೋಗಿದ್ದೆ. ಅವರು ಒಳಗೆ ಮಲಗಿದ್ದರು.

ಕಿಟಕಿಯ ಮೂಲಕವಷ್ಟೇ ಅವರನ್ನು ನೋಡಲು ಸಾಧ್ಯ ಆಯಿತು. ಬಳಿಕ ಅಲ್ಲಿಂದ ನಮ್ಮನ್ನು ಹೊರ ಕಳಿಸಿದ್ದರು. ಅವರು ದೈಹಿಕವಾಗಿ ತುಂಬಾ ಸಣ್ಣ ಮನುಷ್ಯರಾಗಿದ್ದರು ಎಂದು ತಂದೆ ನನ್ನ ಬಳಿ ಹೇಳಿ ಕೊಂಡಿದ್ದರು’ ಎಂದರು.

2014ರ ವೇಳೆಗೆ 60 ಕೋಟಿ ಜನರಿಗೆ ‘ಆಧಾರ್’
‘ಮೂರು ವರ್ಷಗಳ ಅವಧಿಯಲ್ಲಿ ದೇಶದ 40 ಕೋಟಿ ಜನರಿಗೆ ಆಧಾರ್‌ (ವಿಶೇಷ ಗುರುತು ಸಂಖ್ಯೆ) ಸಂಖ್ಯೆಯನ್ನು ನೀಡಲಾಗಿದೆ. 20104ರ ಅಂತ್ಯದ ವೇಳೆಗೆ ಈ ಸಂಖ್ಯೆ 60 ಕೋಟಿ ತಲುಪಲಿದೆ’ ವಿಶೇಷ ಗುರುತು ಸಂಖ್ಯೆ ಪ್ರಾಧಿಕಾರದ ಅಧ್ಯಕ್ಷ ನಂದನ್‌ ನಿಲೇಕಣಿ ಹೇಳಿದರು.

ಸರ್‌.ಎಂ. ವಿಶ್ವೇಶ್ವರಯ್ಯ ಸ್ಮಾರಕ ಉಪನ್ಯಾಸ ನೀಡಿದ ಅವರು, ‘ಪ್ರತಿ ತಿಂಗಳು ತಲಾ ಎರಡು ಕೋಟಿ ಜನರಿಗೆ ಆಧಾರ್‌ ಸಂಖ್ಯೆ ವಿತರಿಸಲಾಗುತ್ತಿದೆ. ಈ ಪ್ರಕ್ರಿಯೆ ಮತ್ತಷ್ಟು ಚುರುಕಾಗಿದ್ದು, 2014ರ ಅಂತ್ಯದ ಒಳಗಾಗಿ ಇನ್ನೂ 20 ಕೋಟಿ ಜನರಿಗೆ ಗುರುತು ಸಂಖ್ಯೆ ವಿತರಿಸುವ ಗುರಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT