ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಢನಂಬಿಕೆಗಳು ಬದುಕನ್ನು ಕೆಡಿಸುತ್ತವೆ’

ಕುಂಚಿಟಿಗ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ಅಭಿಮತ
Last Updated 5 ಡಿಸೆಂಬರ್ 2013, 6:42 IST
ಅಕ್ಷರ ಗಾತ್ರ

ಚಿತ್ರದುರ್ಗ: ಪುರಾಣ ಕಾಲದಿಂದಲೂ ಬಹುಪಾಲು ಜನ ಸಂಸಾರಸ್ಥರಾಗಿಯೇ, ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ. ಅಂಥವರ ಸಾಲಿನಲ್ಲಿ ಕೆಂಚಾವಧೂತರೂ ಪ್ರಮುಖರು’ ಎಂದು ಕುಂಚಿಟಿಗ ಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹೊಳಲ್ಕೆರೆ ತಾಲೂಕಿನ ಕೊಳಾಳು ಗ್ರಾಮದಲ್ಲಿ ಹಠ ರಾಜಯೋಗಿ ಕೆಂಚಾವಧೂತರ ಕಾರ್ತಿಕ ದೀಪೋತ್ಸವ, ಧ್ವನಿ ಸುರುಳಿ ಬಿಡುಗಡೆ, ಸಮುದಾಯ ಭವನ ಹಾಗೂ ಮಹಾದ್ವಾರ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮೂಢ ನಂಬಿಕೆಗಳು ಬದುಕನ್ನು ಕೆಡಿಸುತ್ತವೆ. ನಮಗೆ ನಂಬಿಕೆಗಳು ಬೇಕು, ಅವು ಮನುಷ್ಯನಿಗೆ ದಾರಿ ದೀಪವಾಗಬೇಕು’ ಎಂದರು.

ಜಾನಪದ ತಜ್ಞ ಡಾ.ಮೀರ ಸಾಬೀಹಳ್ಳಿ ಶಿವಣ್ಣ ಮಾತನಾಡಿ, ವಿಜ್ಞಾನಕ್ಕೆ ಪವಾಡ ರಹಸ್ಯ ಅರ್ಥವಾಗುವುದಿಲ್ಲ. ಪವಾಡದ ಹಿಂದೆ ನಿಗೂಢ ಅರ್ಥಗಳಿರುತ್ತವೆ. ಅದು ಜಾದುವಿನಂತೆ ಕಂಡರೂ, ಅರ್ಥೈಸಿಕೊಳ್ಳುವ ರೀತಿ ಬೇರೆಯಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.
ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ, ಕಾಂತರಾಜ್, ಕವಿತಾ,  ತಿಪ್ಪೇಸ್ವಾಮಿ, ಕೆ.ಟಿ. ಹಳ್ಳಿ ನಾಗರಾಜ್, ಸ್ನೇಹಾ ನನ್ನಿವಾಳ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT