ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಲ ಸೌಕರ್ಯಕ್ಕೆ ಆದ್ಯತೆ’

Last Updated 12 ಏಪ್ರಿಲ್ 2014, 6:52 IST
ಅಕ್ಷರ ಗಾತ್ರ

* ಈಗಾಗಲೇ ಅಧಿಕಾರ ನಡೆಸಿದ ಪಕ್ಷಗಳು ತಾವು ಜನವಿರೋಧಿ ಎಂಬುದನ್ನು ಸಾಬೀತುಪಡಿಸಿವೆ. ಇನ್ನೂ ಅಧಿಕಾರಕ್ಕೆ ಬಾರದ ಕೆಲ ಪಕ್ಷಗಳು ಹೊರಡಿಸುವ ಘೋಷಣೆಯಿಂದಾಗಿ ತಾವೂ ಜನವಿರೋಧಿ ಎಂಬುದನ್ನು ಪರೋಕ್ಷವಾಗಿ ಹೇಳಿವೆ. ಅಧಿಕಾರ ನಡೆಸಿದ ಹಾಗೂ ಅಧಿಕಾರಕ್ಕೆ ಬರಲು ಹಂಬಲಿಸುವ ಬಂಡವಾಳಶಾಹಿ ಪರ ಪಕ್ಷಗಳ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಆದರೆ, ನಾನು ಹಾಗೂ ನನ್ನ ಪಕ್ಷ ಎಸ್‌ಯುಸಿಐ ಕಮ್ಯುನಿಸ್ಟ್‌ ಕ್ರಾಂತಿಕಾರಿ ಚಳವಳಿಗೆ ಮುಡುಪಾಗಿಟ್ಟುಕೊಂಡಿದ್ದೇವೆ. ಪಕ್ಷಕ್ಕೆ ಚಳವಳಿ ಹಾಗೂ ದುಡಿಯುವ ಜನ ಬೇರೆ ಬೇರೆಯಲ್ಲ. ನಾನು ಈಗ ಬೀದಿಯಲ್ಲಿ ಜನರ ಪರ ಹೋರಾಟ ನಡೆಸುವಂತೆಯೇ ಸಂಸತ್ತಿನಲ್ಲಿಯೂ ಹೋರಾಟದ ಧ್ವನಿಯನ್ನು ಪ್ರತಿಧ್ವನಿಸುತ್ತೇನೆ.

* ಬಿಜೆಪಿ ಹಾಗೂ ಕಾಂಗ್ರೆಸ್‌ ನನ್ನ ನೇರ ಎದುರಾಳಿಗಳು

* ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಹಲವಾರು ಸಮಸ್ಯೆಗಳಿವೆ. ಸರಿಯಾದ ರಸ್ತೆಗಳಿಲ್ಲ. ಹಲವು ವರ್ಷಗಳಿಂದ ಅವಳಿ ನಗರದ

ಮಧ್ಯೆ ಚತುಸ್ಪಥ ರಸ್ತೆ ನಿರ್ಮಾಣವಾಗುತ್ತಿದೆ. ಬಿಆರ್‌ಟಿಎಸ್‌ ಯೋಜನೆಯೂ ಈ ರಸ್ತೆಯಲ್ಲಿಯೇ ಕಾರ್ಯಗತವಾಗಲಿದೆ. ಆದರೆ, ಇನ್ನೂ ಮುಗಿಯುವ ಲಕ್ಷಣಗಳಿಲ್ಲ. ರಸ್ತೆ ನಿರ್ಮಾಣಕ್ಕೆ ಎಷ್ಟು ಹಣ ಖರ್ಚಾಗಿ ಎಂಬುದು ಇನ್ನೂ ಗೊತ್ತಾಗಿಲ್ಲ. ನಗರದ ವಿವಿಧ ಬಡಾವಣೆಗಳಲ್ಲಿ ಸೂಕ್ತ ರಸ್ತೆಗಳಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದೇ ಇರುವುದರಿಂದ ಎಲ್ಲರೂ ದುಬಾರಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಬಡವರು ಈ ಆಸ್ಪತ್ರೆಗೆ ಬರಲು ಹೆದರುತ್ತಿದ್ದಾರೆ. ನಗರದಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿವೆ. ವಿಪರೀತ ಶುಲ್ಕವನ್ನು ಯಾವ್ಯಾವುದೋ ನೆಪ ಹೇಳಿ ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿವೆ. ಜಿಲ್ಲೆಯ ಎಲ್ಲ ಗ್ರಾಮಗಳನ್ನು ಒಳಗೊಳ್ಳುವ ಸಮಗ್ರ ನೀರಾವರಿ ಯೋಜನೆ ಇಲ್ಲ. ಈ ಎಲ್ಲ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎತ್ತುತ್ತೇನೆ.

* ಎಸ್‌ಯುಸಿಐ (ಸಿ) ಪಕ್ಷದ ವಿದ್ಯಾರ್ಥಿ ಮುಂದಳ ಎಐಡಿಎಸ್‌ಓ ಸಂಘಟನೆಯ ಜಿಲ್ಲಾ ಅಧ್ಯಕ್ಷನಾಗಿ ಹಲವು ವರ್ಷಗಳ ಕಾಲ ವಿದ್ಯಾರ್ಥಿ–ಯುವಜನರ ಮಧ್ಯೆ ಕೆಲಸ ಮಾಡಿದ್ದೇನೆ. ವಿಶ್ವವಿದ್ಯಾಲಯ ಜಾರಿಗೆ ತರಲು ಹೊರಟ ಅಲುಮ್ನಿ ಶುಲ್ಕ, ಪಿಎಚ್‌.ಡಿ. ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ, ವೃತ್ತಿಪರ ಕೋರ್ಸ್‌ಗಳಲ್ಲಿ ಕ್ಯಾಪಿಟೇಷನ್‌ ಶುಲ್ಕದಲ್ಲಿ ಭಾರಿ ಏರಿಕೆ, ಪರೀಕ್ಷಾ ಶುಲ್ಕದಲ್ಲಿ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ್ದೇನೆ. ಎಐಡಿಎಸ್‌ಓದಲ್ಲಿದ್ದಾಗ ವಿವಿಧ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಅರಿತಿದ್ದೇನೆ. ಆ ವಿದ್ಯಾರ್ಥಿಗಳೇ ಇಂದು ಯುವ ಮತದಾರರಾಗಿದ್ದರಿಂದ ಸಹಜವಾಗಿ ನನ್ನನ್ನು ಬೆಂಬಲಿಸಲಿದ್ದಾರೆ.

* 1990ರ ದಶಕದಲ್ಲಿಯೇ ನಮ್ಮ ಪಕ್ಷ ಎಸ್‌ಯುಸಿಐ (ಸಿ) ತನ್ನ ಚಟುವಟಿಕೆಯನ್ನು ಆರಂಭಿಸಿದೆ. ವಿವಿಧ ಗ್ರಾಮಗಳಲ್ಲಿ ಪಕ್ಷದ ಬೆಂಬಲಿಗರಿದ್ದಾರೆ. ನಗರದಲ್ಲಿರುವ ವಿದ್ಯಾರ್ಥಿ–ಯುವಜನ–ಮಹಿಳೆಯರು ನಮ್ಮ ಸಂಘಟನೆಗಳಾದ ಎಐಡಿಎಸ್‌ಓ, ಎಐಡಿವೈಓ ಹಾಗೂ ಎಐಎಂಎಸ್‌ಎಸ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಹಜವಾಗಿಯೇ ಅವರು ಪಕ್ಷದ ವಿಚಾರಗಳಿಂದ ಪ್ರಭಾವಿತರಾಗಿದ್ದಾರೆ. ಅವರು ನಮ್ಮನ್ನು ಬೆಂಬಲಿಸುತ್ತಾರೆ. ಜೊತೆಗೆ, ನಾವು ಕಳೆದ ಎರಡು ದಶಕಗಳಿಂದ ರಸ್ತೆಗಾಗಿ, ಕುಡಿಯುವ ನೀರು ಪೂರೈಕೆಗಾಗಿ, ಬರಗಾಲ ಪರಿಹಾರ ಕಾಮಗಾರಿಗಾಗಿ, ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ, ಮಹಿಳೆಯರ ರಕ್ಷಣೆಗಾಗಿ ಚಳವಳಿ ನಡೆಸಿದ್ದೇವೆ. ನಾವು ಪ್ರಚಾರಕ್ಕೆ ಹೋದಲ್ಲೆಲ್ಲ ನಮ್ಮ ಬಳಿ ಬರುವ ಜನರು ಈ ಬಾರಿ ನಿಮ್ಮನ್ನೇ ಬೆಂಬಲಿಸುತ್ತೇವೆ ಎಂದು ಸ್ವಯಂಸ್ಫೂರ್ತಿಯಿಂದ ಹೇಳುತ್ತಿದ್ದಾರೆ. ಜನಚಳವಳಿಗಳೇ ನನ್ನ ಗೆಲುವಿಗೆ ಸಹಕಾರಿಯಾಗಬಲ್ಲ ಪ್ರಮುಖ ಅಂಶಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT