ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮ್ಯಾಡಿ’ ಮಳೆ?

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಬಂಗಾಳ­ಕೊಲ್ಲಿ­ಯಲ್ಲಿ ಕೇಂದ್ರೀಕೃತ­ವಾಗಿರುವ ‘ಮ್ಯಾಡಿ’ ಚಂಡ­ಮಾರುತವು ಮುಂದಿನ 48 ಗಂಟೆ­ಗಳಲ್ಲಿ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹಲವು ಕಡೆಗಳಲ್ಲಿ ಭಾರಿ ಮಳೆ ತರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

‘ಬಂಗಾಳಕೊಲ್ಲಿಯ ನೈರುತ್ಯಕ್ಕೆ ಉಂಟಾ­ಗಿ­ರುವ ವಾಯುಭಾರ ಕುಸಿತ­ವು ಶನಿವಾರ ಬೆಳಿಗ್ಗೆ ಮ್ಯಾಡಿ ಚಂಡ­ಮಾ­ರುತ­­ವಾಗಿ ಬದಲಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಅದು ಉತ್ತರ ದಿಕ್ಕಿನತ್ತ ನಿಧಾನವಾಗಿ ಚಲಿ­ಸಲಿದೆ’ ಎಂದು ಇಲಾಖೆಯು ಪ್ರಕಟಣೆ­ಯಲ್ಲಿ ತಿಳಿಸಿದೆ.

ಚಂಡಮಾರುತದ ಪ್ರಭಾವ­ದಿಂದಾಗಿ ತಮಿಳುನಾಡಿನ ಕರಾವಳಿ ಭಾಗ, ಪುದು­ಚೇರಿ, ಆಂಧ್ರದ ದಕ್ಷಿಣ ಕರಾ­ವಳಿ ಮತ್ತು ಅಂಡಮಾನ್‌, ನಿಕೋಬಾರ್‌ ದ್ವೀಪ ಸಮೂಹಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT