ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವ ಸಮುದಾಯಕ್ಕೆ ಯೋಗ್ಯ ಶಿಕ್ಷಣ ಅಗತ್ಯ’

Last Updated 17 ಸೆಪ್ಟೆಂಬರ್ 2013, 8:48 IST
ಅಕ್ಷರ ಗಾತ್ರ

ಕುಂದಾಪುರ: ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮುದಾಯಕ್ಕೆ ಯೋಗ್ಯ ಶಿಕ್ಷಣಾವಕಾಶಗಳು ದೊರಕಿದಾಗ ದೇಶದ ಹಾಗೂ ಸಮಾಜದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗುತ್ತದೆ. ಶಿಕ್ಷಣ, ಅರೋಗ್ಯ ಹಾಗೂ ಬಡತನವನ್ನು ಭವಿಷ್ಯದ ಪ್ರಜೆಗಳು ಮೆಟ್ಟಿ ನಿಲ್ಲುವಂತಾಗಬೇಕು ಎನ್ನುವ ದೂರಗಾಮಿ ನಿಲುವಿನಿಂದ ಡಾ.ಟಿ.ಎಂ.ಎ ಪೈ ಅವರಂತಹ ಸಮಾಜ ಚಿಂತಕರು ಈ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರೇರಣೆ ನೀಡಿ ದುಡಿದ ಕಾರಣ­ದಿಂದ ಅವಿಭಜಿತ ದ.ಕ ಜಿಲ್ಲೆ ಶಿಕ್ಷಣ ಹಾಗೂ ಅರೋಗ್ಯ ಕ್ಷೇತ್ರದಲ್ಲಿ ತನ್ನ ಗೌರವವನ್ನು ಕಾಯ್ದು­ಕೊಂಡಿದೆ ಎಂದು ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಸಹಕುಲಪತಿ ಡಾ.ಎಚ್.­ಎಸ್ ­ಬಲ್ಲಾಳ್ ಹೇಳಿದರು.

ಸೋಮವಾರ ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ ನೆನಪಿನಲ್ಲಿ ನಿರ್ಮಿಸಲಾದ ನೂತನ ಆಡಳಿತ ವಿಭಾಗದ ‘ಸುವರ್ಣ ಮಂದಿರ’ ಕಟ್ಟಡವನ್ನು ಉದ್ಘಾಟಿಸಿ ಅವರ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಹಾಗೂ ವಿದ್ಯಾರ್ಜನೆಗೆ ಅಗತ್ಯವಾಗಿರುವ ಮೂಲ ಸೌಕರ್ಯ­ಗಳನ್ನು ಒದಗಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದಾಗಿದ್ದರೇ, ಈ ಸೌಕರ್ಯ­ಗಳನ್ನು ಬಳಸಿಕೊಂಡು ಸಾಧನೆಯನ್ನು ಮಾಡ­ಬೇಕು ಎನ್ನುವ ಇಚ್ಛಾಶಕ್ತಿ ವಿದ್ಯಾರ್ಥಿಗಳಿ­ಗಿರ­ಬೇಕು.

ಪ್ರಾಥಮಿಕ ಹಂತದಿಂದ ವಿವಿಧ ಸ್ತರದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಶಿಕ್ಷಣ ನೀಡುತ್ತಿರುವ ಮಣಿಪಾಲ ಅಕಾಡೆಮಿಯ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದಲ್ಲಿ ರಾಜಿಯನ್ನು ಮಾಡಿಕೊಂಡಿಲ್ಲ. ಯಾವುದೇ ಕ್ಷೇತ್ರದಲ್ಲಿ ಪರಿ­ಪೂರ್ಣತೆ ಸಾಧಿಸಲು ಬದ್ಧತೆ, ಗುಣಮಟ್ಟ, ವಿಶ್ವಾಸರ್ಹತೆ ಹಾಗೂ ನಿಯಮಿತ ಅಭ್ಯಾಸದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಶಿಕ್ಷಣ ಸಂಸ್ಥೆಗಳು ಈ ಸಮಾಜಕ್ಕೆ ಬೆಳಕು ನೀಡುವ ಕಣ್ಣುಗಳಿದ್ದಂತೆ, ವರ್ಷಗಳ ಕಾಲ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ವಿದ್ಯಾರ್ಜನೆ ಮಾಡುವ ಈ ಶಿಕ್ಷಣ ದೇಗುಲವನ್ನು ಸ್ಥಾಪಿಸಿದ ಹಿರಿಯರು ಯಾವಾಗಲೂ ನಿತ್ಯ ಸ್ಮರಣೀಯರಾಗಿರಬೇಕು ಎಂದು ಹೇಳಿದರು.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.­­­ಶಾಂತಾರಾಮ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಕೆ.ದೇವದಾಸ ಕಾಮತ್, ಕೆ.ಶಾಂತಾರಾಮ ಪ್ರಭು, ವಿಶ್ವಸ್ಥ ಮಂಡಳಿಯ ಸದಸ್ಯ ಸೋಲಮನ್ ಸೋನ್ಸ್, ವೃತ್ತಿಪರ ಕೋರ್ಸ್‌ಗಳ ಟ್ರಸ್ಟಿಗಳಾದ ರಾಜೇಂದ್ರ ತೋಳಾರ್ ಹಾಗೂ ಸದಾನಂದ ಚಾತ್ರ ವೇದಿಕೆಯಲ್ಲಿದ್ದರು.

ಕಾಲೇಜಿನಲ್ಲಿ 50 ವರ್ಷ ಸೇವೆಯನ್ನು ಸಲ್ಲಿಸಿದ ಕಚೇರಿ ಅಧೀಕ್ಷಕ ಕೆ.ವಿಠ್ಠಲ್, ಗುತ್ತಿಗೆದಾರ ಸತೀಶ್ ಆಚಾರ್, ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ, ದೇವಪ್ಪ ಮೇಸ್ತ್ರಿ, ಮಧುಕರ ಆಚಾರ್ ಹಾಗೂ ಗೋಪಾಲ್  ಮೊದಲಾದವರನ್ನು ಡಾ.ಎಚ್.­ಎಸ್ ಬಲ್ಲಾಳ್ ಸನ್ಮಾನಿಸಿದರು.

ಪದವಿ ಕಾಲೇಜಿನ ಪ್ರಾಚಾರ್ಯ ಡಾ.ನಾರಾ­ಯಣ ಶೆಟ್ಟಿ ಸ್ವಾಗತಿಸಿದರು, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ರೇಖಾ ಬನ್ನಾಡಿ ಸನ್ಮಾನಿತರ ವಿವರ ನೀಡಿದರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ ಗೊಂಡಾ ವಂದನೆ ಸಲ್ಲಿಸಿ­ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT