ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಕರಲ್ಲಿ ಆರೋಗ್ಯ ಅರಿವು ಮೂಡಿಸಿ’

Last Updated 18 ಡಿಸೆಂಬರ್ 2013, 5:51 IST
ಅಕ್ಷರ ಗಾತ್ರ

ಯಾದಗಿರಿ: ಯುವ ಜನಾಂಗ ದುಶ್ಚಟ­ಗಳಿಗೆ ಬಲಿಯಾಗಿ ಅನೇಕ ರೋಗ­ಗ­ಳನ್ನು ಆಹ್ವಾನಿಸಿಕೊಳ್ಳು­ತ್ತಿ­ದ್ದಾರೆ. ಇಂತಹ ಯುವಕರಲ್ಲಿ ಆರೋಗ್ಯದ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯ ನಿರ್ವ­ಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.

ನಗರದ ಹಿಂದಿ ಪ್ರಚಾರ ಸಭಾದ ಆವರಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಶಿರಸಿಯ ನಿಸರ್ಗ ಟ್ರಸ್ಟ್‌ಗಳ ಆಶ್ರಯ­ದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಯುಷ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಜೀವನ ಶೈಲಿ ರೋಗಗಳಿಗೆ ಆಹ್ವಾನ ನೀಡುತ್ತಿದೆ, ಇಂದಿನ ಯುವ ಜನಾಂಗ ಗುಟ್ಕಾ ಪಾನ ಮಸಾಲ­ದಂತಹ ಚಟಗಳಿಗೆ ಬಲಿಯಾಗಿ ನಿತ್ಯವು ಆಸ್ಪತ್ರೆಗಳಿಗೆ ಅಲೆಯುವುದನ್ನು ಕಾಣುತ್ತಿದ್ದೇವೆ. ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಇಂಥ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಸಲಹೆ ಮಾಡಿದರು.

ದಿನ ನಿತ್ಯದ ಜಂಜಾಟದ ಜೀವನ­ದಲ್ಲಿ ಆರೋಗ್ಯದ ಕಾಳಜಿ ಕಡಿಮೆ­ಯಾಗುತ್ತಿದೆ, ದೀರ್ಘಾ­ಯುಷ್ಯಕ್ಕೆ ಆಯುಷ್ ಔಷಧಿ ಬಳಸುವುದರ ಜೊತೆಗೆ ಆಯುಷ್ ಸೂತ್ರಗಳನ್ನು ಅಳವಡಿಸಿಕೊಂಡು ಒಳ್ಳೆಯ ಜೀವನ ನಡೆಸಬೇಕು ಎಂದು ತಿಳಿಸಿದರು.

ಯಾದಗಿರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಕಂಕಣ­ಬದ್ಧರಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸ­ಲಾಗಿದೆ. ಸರ್ಕಾರದಿಂದ ಅಗತ್ಯ ಅನುದಾನ ನೀಡಲಾಗುತ್ತಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಎಫ್. ಆರ್. ಜಮಾದಾರ ಮಾತನಾಡಿ, ಅತ್ಯುತ್ತಮ ಆರೋಗ್ಯಕ್ಕೆ ಯೋಗ, ಪ್ರಾಣಾಯಾಮ­ಗಳು ಬಹಳ  ಸಹಕಾರಿಯಾಗುತ್ತವೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಿಸರ್ಗ ಟ್ರಸ್ಟ್‌ನ ಡಾ.ವೆಂಕಟರಮಣ ಹೆಗಡೆ, ದೀರ್ಘಕಾಲಿನ ರೋಗಗಳ ತಡೆಗಟ್ಟಲು ಆಯುಷ್ ಒಂದೇ ಪರಿಹಾರವಾಗಿದ್ದು, ಪಂಚ ಪದ್ಧತಿಗಳ ಮೂಲಕ ಸರ್ವ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭೀಮಮ್ಮ ಚಪೇಟ್ಲಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚನ್ನಬಸ್ಸಮ್ಮ ಸೋಮಣ್ಣೋರ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಕಂದಕೂರ, ಸದಸ್ಯ ಶರಣೀಕ್‌ಕುಮಾರ ದೋಖಾ, ಹಾಸ್ಯ ಕಲಾವಿದ ಪ್ರಾಣೇಶ ಗಂಗಾವತಿ, ಬಸವರಾಜ ಮಹಾಮನಿ, ನರಸಿಂಹ ಜೋಶಿ, ಡಾ.ಪ್ರವೀಣ ಜೆಕಬ್, ಆಯಷ್ ಅಧಿಕಾರಿ ಡಾ. ವಂದನಾ ಗಾಳಿ ಇದ್ದರು.

ಡಾ. ಗಂಗನಾಳ ಸ್ವಾಗತಿಸಿದರು. ಸಾಹೇಬಗೌಡ ಬಿರಾದಾರ ನಿರೂಪಿಸಿ­ದರು. ಡಾ.ಪ್ರಕಾಶ ರಾಜಾಪುರ ವಂದಿಸಿದರು. ನಂತರ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಹಾಮನಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ನಗರದ ಜನರು ಎರಡನೇ ಬಾರಿಗೆ ಹಾಸ್ಯದ ರಸದೌತಣ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT