ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಕರಿಂದ ದೇಶದ ಅಭಿವೃದ್ಧಿ’

Last Updated 3 ಜನವರಿ 2014, 9:18 IST
ಅಕ್ಷರ ಗಾತ್ರ

ಯಾದಗಿರಿ: ದೇಶ ಕಾಯುವ ಸೈನಿಕರು ಹಾಗೂ ದೇಶದ ಕ್ರೀಡಾಪಟುಗಳು ಯುವಕರಾಗಿದ್ದು, ಅವರಿಂದಲೇ ದೇಶದ ಕೀರ್ತಿ ಹೆಚ್ಚುತ್ತಿದೆ. ಈ ಹಿನ್ನೆಲೆ­ಯಲ್ಲಿ ಬಿಜೆಪಿ ಯುವಕರಿಗೆ ಪ್ರಾಧಾ­ನ್ಯತೆ ನೀಡಲು ನಿರ್ಧರಿಸಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣಿ ಹೇಳಿದರು.

ಇಲ್ಲಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ವತಿ­ಯಿಂದ ಗುರುವಾರ ಆಯೋಜಿಸಿದ್ದ ನರೇಂದ್ರ ಕೋ ನಮನ್ ಕ್ರಿಕೆಟ್‌ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಬದಲಾವಣೆ ತರಲು ದೇಶಕ್ಕೆ ನರೇಂದ್ರ ಮೋದಿ ನಾಯಕತ್ವ ಅವಶ್ಯವಾಗಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಅಭಿ­ವೃದ್ಧಿಗೆ ವೇಗ ತರಲು ಸಮರ್ಥ ನಾಯಕತ್ವ ಉಳ್ಳವರ ಅವಶ್ಯಕತೆ ಇದ್ದು, ಅಂತಹ ಸಮರ್ಥ ನಾಯಕತ್ವ ನರೇಂದ್ರ ಮೋದಿಯವರು ಹೊಂದಿ­ದ್ದಾರೆ. ಯುವ ಜನತೆ ಮೋದಿ ಬೆಂಬಲಕ್ಕೆ ನಿಂತು, ಅವರನ್ನು ಬೆಂಬಲಿಸಿ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.

ಕ್ರೀಡಾಕೂಟಗಳು ಜಾತಿ, ಮತ,ಪಂಥಗಳನ್ನು ಮೀರಿ ಸ್ನೇಹ, ಸೌಹಾರ್ದ­ವನ್ನು ಬೆಳೆಸುವ ವೇದಿಕೆಗಳಾಗಿವೆ. ಯುವ ಜನತೆ ಕ್ರೀಡಾಕೂಟಗಳಲ್ಲಿ ಭಾಗ­­­ವಹಿ­ಸುವುದರಿಂದ ಭ್ರಾತೃತ್ವ ಮತ್ತು ಸ್ನೇಹ ಬೆಳೆಯಲು ಸಹಕಾರಿ ಆಗಲಿದೆ. ಈ ಆಶಯದೊಂದಿಗೆ ಬಿಜೆಪಿ ಯುವ ಮೋರ್ಚಾ ಕ್ರಿಕೆಟ್‌ ಟೂರ್ನಿ ಆಯೋ­ಜಿಸಿದೆ ಎಂದು ಹೇಳಿದರು.

ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ­ಯಿಂದ ಮಾತ್ರ ಯುವಕರಲ್ಲಿ ದೈಹಿಕ, ಮಾನಸಿಕ ಪ್ರಗತಿಯಾಗಲು ಸಾಧ್ಯ ಎಂದು ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ  ವೀರಣ್ಣಗೌಡ ಮಲ್ಲಾಬಾದಿ ಹೇಳಿದರು. ಯುವ ಪಡೆ ದುಶ್ಚಟಗಳಿಂದ ದೂರ­ವಾಗಿ ಕ್ರೀಡೆ­ಗಳತ್ತ ಹಾಗೂ ಇನ್ನಿತರ ಚಟುವಟಿ­ಕೆ­ಗಳಲ್ಲಿ ಭಾಗಿಯಾ­ಗಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ರವೀಂದ್ರರಡ್ಡಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾ­ರಿಗಳು ಕ್ರಿಕೆಟ್‌ ಟೂರ್ನಿ ಹಮ್ಮಿ­ಕೊಳ್ಳುವ ಮೂಲಕ ಯುವ ಕ್ರೀಡಾ­ಪಟು­ಗಳಿಗೆ ಕ್ರೀಡಾ ಪ್ರತಿಭೆ ಪ್ರದರ್ಶಿಲು ವೇದಿಕೆ ಕಲ್ಪಿಸಿದೆ. ಕ್ರೀಡಾ ಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಅಂಬಿಗೇರ ಮಾತ­ನಾಡಿ, ಜಿಲ್ಲೆಯಲ್ಲಿ ಯುವಕ­ರನ್ನು ಒಗ್ಗೂಡಿಸಿ ಅವರ ಮೂಲಕ ಅಭಿವೃದ್ಧಿ­ಯ ದೃಷ್ಟಿಕೋನವುಳ್ಳ ನರೇಂದ್ರ ಮೋದಿ ನಾಯಕತ್ವಕ್ಕೆ ಬೆಂಬಲಿಸಲು ಪಕ್ಷ ಸಂಘ­ಟಿಸಲಾಗುವುದು ಎಂದು ಹೇಳಿದರು.
ಲಿಂಗಪ್ಪ ಹತ್ತಿಮನಿ, ವೆಂಕಟರಡ್ಡಿ ಅಬ್ಬೆತುಮಕೂರ, ಭೀಮರಾಯ ಜಂಗಳಿ, ಮಲ್ಲಿಕಾರ್ಜುನ ಗುಳೇದ, ಬಸವ­ರಾಜಗೌಡ ಬಿಳ್ಹಾರ, ಮಂಜು ಜಡಿ, ಅಯ್ಯಣ್ಣ ಅಳ್ಳಳ್ಳಿ, ಹಣಮಂತ ಇಟಗಿ, ಗೋಪಾಲ ದಾಸನಕೇರಿ, ಸಾಯಿ­ಬಣ್ಣ ಚಂಡ್ರಕಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ ಒಟ್ಟು 45 ತಂಡಗಳು ಭಾಗವಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT