ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಪೀಳಿಗೆ ಹೊರೆ ಶಿಕ್ಷಕರದು’

Last Updated 3 ಜನವರಿ 2014, 19:43 IST
ಅಕ್ಷರ ಗಾತ್ರ

ಯಲಹಂಕ:‘ಕೇವಲ ಸಂಬಳ ಗಳಿಸುವ ಉದ್ದೇಶದಿಂದ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳದೆ, ದೇಶದ ಭವಿಷ್ಯದ ಉತ್ತಮ ಪೀಳಿಗೆಯನ್ನು ರೂಪಿಸುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಬೇಕು’ ಎಂದು ಬಸವ ಬಳಗದ ಅಧ್ಯಕ್ಷ ಡಾ.ಕೆ.ಪಿ.ಗುರುಸ್ವಾಮಿ ಹೇಳಿದರು.

ಸಹಕಾರನಗರದ ಕಾವೇರಿ ಬಿ.ಎಡ್‌.ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾ­ರಂಭ­ದಲ್ಲಿ ಮಾತನಾಡಿದ ಅವರು, ಜನರು ಇಷ್ಟ­ಪ­ಡುವ ಮತ್ತು ಅನುಕರಣೆ ಮಾಡುವ ರೀತಿ ವ್ಯಕ್ತಿತ್ವ­­ವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಿಸ­ಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಶ್‌ ಇ.ಬಿ,  ಉಪನ್ಯಾಸಕರಾದ ಎಸ್‌.ಆರ್‌. ಬಿಂದು­ಕುಮಾರ್‌, ಸಿ.ಎಸ್‌.ಗುಂಡಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT