ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತಪರ ಕಾಳಜಿ ಹೊಂದಿದ್ದ ಒಡೆಯರ್‌’

Last Updated 12 ಡಿಸೆಂಬರ್ 2013, 5:47 IST
ಅಕ್ಷರ ಗಾತ್ರ

ಹಳೇಬೀಡು: ಮೈಸೂರು ಒಡೆಯರು ರೈತಪರ ಕಾಳಜಿ ಹೊಂದಿದ್ದರು. ಮೈಸೂರು ರಾಜವಂಶದವರು ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಿರುವು ದರಿಂದ ಕುಡಿಯುವ ನೀರು ದೊರೆಯುತ್ತಿದೆ. ಹೀಗಾಗಿ, ರಾಜವಂಶದ ಕೊನೆಯ ಕುಡಿಗೆ ನಮನ ಸಲ್ಲಿಸಲೇಬೇಕು ಎಂದು ಹೋಬಳಿ ರೈತ ಸಂಘದ ಅಧ್ಯಕ್ಷ ಚನ್ನೇಗೌಡ ತಿಳಿಸಿದರು.

ಪಟ್ಟಣದ ಹೊಯ್ಸಳ ವೃತ್ತದಲ್ಲಿ ನಡೆದ ಅಗಲಿದ ಮೈಸೂರು ಒಡೆಯರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಗಚಿ ಹೋರಾಟ ಸಮಿತಿ ಅಧ್ಯಕ್ಷ ಹರುಬಿಹಳ್ಳಿ ಗುರುಸ್ವಾಮಿಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎಸ್‌. ಸೋಮಶೇಖರ್, ರೈತ ಸಂಘ ಜಿಲ್ಲಾ ಮುಖಂಡ ಕೆ.ಪಿ. ಕುಮಾರ್, ಹೋಬಳಿ ಗೌರವ ಅಧ್ಯಕ್ಷ ಗಡಿ ಮಲ್ಲಿಕಾರ್ಜುನ, ಮುಖಂಡರಾದ ರಾಜಗೆರೆ ಸ್ವಾಮಣ್ಣ, ದಿನೇಶ್‌, ಹುಲಿಕೆರೆ ಅಶೋಕ ಹಾಜರಿದ್ದರು.

ಕಲಾಪ ಸ್ಥಗಿತ
ಇಲ್ಲಿನ ವಕೀಲರು  ನ್ಯಾಯಾಲಯದ ಕಲಾಪದಿಂದ ಹೊರಗುಳಿಯುವ ಮೂಲಕ ಯದುವಂಶದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‍ ಹಾಗೂ ದಕ್ಷಿಣ  ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ವಕೀಲರ ಸಂಘದ ಸದಸ್ಯರು ನ್ಯಾಯಾಧೀಶರೊಂದಿಗೆ ಚರ್ಚಿಸಿದ ಬಳಿಕ ನ್ಯಾಯಾಲಯದ ಕಲಾಪ  ಸ್ಥಗಿತಗೊಳಿಸಲು ನಿರ್ಧರಿಸಿದರು. ವಕೀಲರ ಸಂಘದ ಅಧ್ಯಕ್ಷ  ಎಸ್.ಆರ್‍. ಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ್‍ ಹಾಜರಿದ್ದರು.

ನಾಡಿಗೆ ದುಃಖದ ಸಂಗತಿ
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ನಿಧನ ನಾಡಿಗೆ ದುಖಃದ ಸಂಗತಿ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಲ್ಲಹಳ್ಳಿ ನಾಗರಾಜು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಣ್‌ ತಾಲ್ಲೂಕು ಪಂಚಾಯಿತಿ ಸದಸ್ಯ ಲಕ್ಷ್ಮೀ, ರಾಜೇಶ್ವರಿ, ಲೋಲಾಕ್ಷಮ್ಮ, ಜಿಲ್ಲಾ ಸೇವಾದಳ ಅಧ್ಯಕ್ಷ ಜೆ.ಎಸ್‌. ಶ್ರೀಕಂಠಯ್ಯ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಬಿ. ರಾಜಶೇಖರ್‌, ತಾಲ್ಲೂಕು ಜಾನಪದ ಪರಿಷತ್‌ ಅಧ್ಯಕ್ಷ ಪ್ರಸನ್ನ ಕುಮಾರ ಅವರು ಒಡೆಯರ್‌ ಅವರ ನಿಧನಕ್ಕೆ ಸಂತಾಪ ಸೂಜಿಸಿದರು.

ಒಡೆಯರ್‌ ನಿಧನಕ್ಕೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ ಘಟಕ, ಹೋಬಳಿ ಆಳ್ವಾಸ್‌ ವಿರಾಸತ್‌ ಘಟಕ, ಹೋಬಳಿ  ಜಾನಪದ ಪರಿಷತ್‌ ಘಟಕ, ಬಿಸಿಸಿ ಗೆಳೆಯರ ಬಳಗ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಂತಾಪ ಸೂಚಿಸಿವೆ. ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ ಘಟಕ ಅಧ್ಯಕ್ಷ ಶಿವಶಂಕರ್‌, ಕಾರ್ಯದರ್ಶಿ ಶಿವಪ್ರಕಾಶ್‌, ಅನಿಲ್‌ ಕುಮಾರ್‌, ನಾಗರಾಜು, ಚಂದ್ರಶೇಖರ್‌, ಮಹೇಶ್‌ ಇದ್ದರು.

ವಿವಿಧೆಡೆ ಶ್ರದ್ಧಾಂಜಲಿ:
ಪಟ್ಟಣದ ವಿವಿಧೆಡೆ  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕಾಲೇಜು ಪ್ರಾಚಾರ್ಯ ಪ್ರೊ.ಎನ್‌.  ಸೋಮಸುಂದರ, ಆಡಳಿತಾಧಿಕಾರಿ ಪ್ರೊ.ಎನ್‌. ಜಯರಾಂ, ಸಹ ಪ್ರಾಧ್ಯಾಪಕ ಮೇಲಗಿರಿಗೌಡ, ಡಾ.ಎಚ್‌.ಎಸ್‌. ರವೀಂದ್ರ, ಪದವಿಪೂರ್ವ ಕಾಲೇಜು ಉಪನ್ಯಾಸಕ ಕೆ. ಸ್ವಾಮಿಗೌಡ, ರಮೇಶ್‌, ನಾಗರಾಜು, ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ಪಿ. ಶಿವೇಗೌಡ ಹಾಜರಿದ್ದರು,

ವಕೀಲರ ಸಂಘದ ವತಿಯಿಂದ ಸಂತಾಪ ಸೂಚಿಸಲಾಯಿತು. ಅಧ್ಯಕ್ಷ ವೈ.ಕೆ. ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷ ಎಂ.ಬಿ. ರಂಗಶೆಟ್ಟಿ, ಕಾರ್ಯದರ್ಶಿ ಎಂ.ಆರ್‌. ನಿಂಗರಾಜು, ಖಜಾಂಚಿ ಎ.ಡಿ. ಕುಮಾರ್‌, ಸಹ ಕಾರ್ಯದರ್ಶಿ ಎಚ್‌.ಎಸ್‌. ಚಂದ್ರಕಲಾ ಒಡೆಯರ್‌ ಅವರಿಗೆ ಸಂತಾಪ ಸೂಚಿಸಿದರು. ಬುಧವಾರ ವಕೀಲರು ನ್ಯಾಯಾಲಯದ ಕಾರ್ಯ ಕಲಾಪದಲ್ಲಿ ಭಾಗವಹಿಸಲಿಲ್ಲ.

ಜೇನುಗೂಡು ಜಾನಪದ ಕಲಾವಿದರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಶಿವನಗೌಡ ಪಾಟೀಲ, ಕಲಾವಿದರಾದ ಸ್ವಾಮಿ, ವೆಂಕಟೇಶ್‌ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT