ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಯ ಕಂಡುಕೊಳ್ಳುವುದು ಸವಾಲಾಗಿತ್ತು’

ಮರಳಿದ ರಾಬಿನ್‌ ಉತ್ತಪ್ಪ ಬ್ಯಾಟಿಂಗ್‌ ವೈಭವ
Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅಭ್ಯಾಸ ಮಾಡಲು ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗ ಣಕ್ಕೆ ಬಂದು ಪಿಚ್‌ ನೋಡಿದಾಗಲೇ ನನಗೆ ಗೊತ್ತಾಗಿತ್ತು. ಮೊದಲ ಅವಧಿ ಯಲ್ಲಿ ರನ್‌ ಕಲೆ ಹಾಕುವುದು ಸುಲಭವಲ್ಲ ಎಂಬುದು ಮನವರಿಕೆಯಾಗಿತ್ತು. ಆದ್ದರಿಂದ ಆರಂಭದಲ್ಲಿ ನಿಧಾನ ವಾಗಿ ಆಡಿದೆ. ಜೊತೆಗೆ ಫಾರ್ಮ್‌ಗೆ ಮರಳಬೇಕಾದ ಸವಾಲು ನನ್ನ ಮುಂದಿತ್ತು’ ಎಂದು ಉತ್ತರ ಪ್ರದೇಶ ಎದುರಿನ ರಣಜಿ ಪಂದ್ಯದಲ್ಲಿ ಶತಕ ಗಳಿಸಿದ ರಾಬಿನ್‌ ಉತ್ತಪ್ಪ ಹೇಳಿದರು.

ಗಾಯದಿಂದ ಚೇತರಿಸಿಕೊಂಡಿರುವ ರಾಬಿನ್‌ ಈ ಸಲದ ರಣಜಿಯಲ್ಲಿ ಮೂರನೇ ಪಂದ್ಯ ಆಡುತ್ತಿದ್ದಾರೆ. ಮೊದಲು ವಿದರ್ಭ ಮತ್ತು ಒಡಿಶಾ ಎದುರು ಆಡಿದ್ದರು. ರಾಷ್ಟ್ರೀಯ ತಂಡಕ್ಕೆ ಮರಳಬೇಕೆನ್ನುವ ಆಸೆ ಹೊಂದಿರುವ ಅವರು ಬ್ಯಾಟಿಂಗ್‌ ಶೈಲಿಯಲ್ಲಿ ಬದಲಾ ವಣೆ ಮಾಡಿಕೊಳ್ಳಲು ಸಾಕಷ್ಟು ಅಭ್ಯಾಸ ನಡೆಸಿದ್ದಾರೆ. 38 ಅಂತರ ರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿ ರುವ ಅವರು ರಾಷ್ಟ್ರೀಯ ತಂಡಕ್ಕೆ ಮರ ಳಲು ಐದು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದಾರೆ. 2008ರಲ್ಲಿ ಶ್ರೀಲಂಕಾ ಎದುರು ಆಡಿದ್ದು ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ.

‘ಇಲ್ಲಿನ ಕ್ರೀಡಾಂಗಣದಲ್ಲಿ ಮೊದಲ ಅವಧಿಯಲ್ಲಿ ರನ್‌ ಗಳಿಸುವುದು ಪ್ರತಿ ಬ್ಯಾಟ್ಸ್‌ಮನ್‌ಗೂ ಸವಾಲಿನ ಸಂಗತಿ. 15 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡಾಗ ನಾವು ಎದೆಗುಂದಲಿಲ್ಲ. ತವರು ನೆಲದ ಅಂಗಳ ಹೇಗೆಂದು ಚೆನ್ನಾಗಿ ಗೊತ್ತಿದೆ. ದಿನದ ಕೊನೆಯಲ್ಲಿ ರನ್‌ ಗಳಿಸುವುದು ಸುಲಭವೆಂದು ನಮಗೆ ಗೊತ್ತಿತ್ತು’ ಎಂದು ಉತ್ತಪ್ಪ ಹೇಳಿದರು.

ಶತಕ ಗಳಿಸಿದ ನಂತರ ಕ್ರೀಸ್‌ ಬಿಟ್ಟು ಆಡಲು ಮುಂದಾಗಿದ್ದು ಏಕೆ ಎನ್ನುವ ಪ್ರಶ್ನೆಗೆ ‘ಆ ಚೆಂಡನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲನಾದೆ. ಗಾಯದಿಂದ ಈಗ ಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಮುಂದೆ ಆ ರೀತಿಯ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇನೆ’ ಎಂದರು.

ಮೊದಲ ಶತಕ: ರಾಬಿನ್‌ ಉತ್ತಪ್ಪ ಉತ್ತರ ಪ್ರದೇಶ ಎದುರು ರಣಜಿಯಲ್ಲಿ ಗಳಿಸಿದ ಮೊದಲ ಶತಕ ಇದಾಗಿದೆ. ಜೊತೆಗೆ ಈ ತಂಡದ ಎದುರು ಮೂರಂ ಕಿಯ ಗಡಿ ಮುಟ್ಟಿದ ಕರ್ನಾಟಕದ 16ನೇ ಆಟಗಾರ ಎನಿಸಿಕೊಂಡರು.

1977-78ರಲ್ಲಿ ಜಿ.ಆರ್‌. ವಿಶ್ವನಾಥ್‌ ಮೋಹನ್‌ ನಗರದಲ್ಲಿ ನಡೆದ ಪಂದ್ಯದಲ್ಲಿ ಶತಕ ಗಳಿಸಿದ್ದರು. ಇದು ಉತ್ತರ ಪ್ರದೇಶದ ವಿರುದ್ಧ ರಾಜ್ಯ ತಂಡದ ಆಟಗಾರ ಗಳಿಸಿದ ಚೊಚ್ಚಲ ಶತಕ ಎನಿಸಿದೆ. ಮೊದಲ ರಣಜಿ ಆಡುತ್ತಿರುವ ಕರುಣ್‌ ನಾಯರ್‌ ಅವರಿಗೂ ಇದು ಉತ್ತರ ಪ್ರದೇಶ ಎದುರು ಮೊದಲ ಶತಕ.

ಆರ್‌.ಪಿ. ಸಿಂಗ್‌ ಆಡುವುದು ಅನುಮಾನ
ಬೆಂಗಳೂರು: ಬೌಲ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿರುವ ಉ.ಪ್ರದೇಶ ತಂಡದ ನಾಯಕ ರುದ್ರ ಪ್ರತಾಪ್‌ ಸಿಂಗ್‌ ಮುಂದಿನ ನಾಲ್ಕು ದಿನ ಕಣಕ್ಕಿಳಿಯುವುದು ಅನುಮಾನವಿದೆ.

ತಮ್ಮ 11ನೇ ಓವರ್‌ನ ನಾಲ್ಕನೇ ಎಸೆತವನ್ನು ಬೌಲ್‌ ಮಾಡುವ ವೇಳೆ ಅವರು ಕಾಲು ಉಳುಕಿಸಿಕೊಂಡರು. ಆದ್ದರಿಂದ ಆ ಓವರ್‌ನ ಇನ್ನೆರೆಡು ಎಸೆತಗಳನ್ನು ಪಿಯೂಷ್‌ ಚಾವ್ಲಾ ಹಾಕಿ ಓವರ್‌ ಪೂರ್ಣಗೊಳಿಸಿದರು.

‘ಸಿಂಗ್‌ ಗಾಯಗೊಂಡಿದ್ದಾರೆ. ಅವರು ಉಳಿದ ದಿನಗಳಲ್ಲಿ ಆಡುವ ಬಗ್ಗೆ ಖಚಿತವಾಗಿ ಏನೂ ಹೇಳಲು ಆಗುವುದಿಲ್ಲ. ಆದರೆ, ಅವರಿಗೆ ವಿಶ್ರಾಂತಿ ಬೇಕಿದೆ’ ಎಂದು ವೇಗದ ಬೌಲರ್‌ ಅಮಿತ್‌ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT